ನಿಮ್ಮ ಜನ್ಮರಾಶಿ (Astrological Sign) ಯನ್ನು ಆಧರಿಸಿ, ದಿನಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಹಾಗಾದರೆ, ಯಾವ ರಾಶಿಯವರಿಗೆ ಇಂದಿನ (ಅಕ್ಟೋಬರ್01, 2024 ಮಂಗಳವಾರ) ದಿನಭವಿಷ್ಯ (Daily Horoscope) ಹೇಗಿದೆ? ಯಾರಿಗೆ ಶುಭಸುದ್ದಿ ಹಾಗೂ ಯಾರಿಗೆ ಕಂಟಕ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಮೇಷ ರಾಶಿ (Aries): ಮೇಷ ರಾಶಿಯವರಿಗೆ ಇಂದಿನ ದಿನ ಅಷ್ಟೇನೂ ಶುಭಸುದ್ದಿ ತರುವುದಿಲ್ಲ. ಆರೋಗ್ಯದ ಕುರಿತು ಕೊಂಚ ಜಾಗರೂಕರಾಗಿರುವುದು ಒಳ್ಳೆಯದು. ಹಣದ ವೆಚ್ಚ ಮತ್ತು ಮಕ್ಕಳನ್ನು ನಿಭಾಯಿಸುವಲ್ಲಿ ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸುವುದು ಒಳ್ಳೆಯದು. ನೀವು ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಂಭವ ಇರುವುದರಿಂದ, ನಿಮಗೆ ಅದರಿಂದ ಬಹಳ ಆನಂದ ಸಿಗುವ ಸಾಧ್ಯತೆಯಿದೆ. ನೀವು ಪ್ರೀತಿಸುವ ಆಕೆ ನಿಮ್ಮ ಪಾಲಿಗೆ ದೇವತೆ ಎನ್ನುವುದು ನಿಮಗೆ ಇಂದು ಮನದಟ್ಟಾಗಲಿದೆ. ಅಗತ್ಯಕ್ಕಿಂತ ಯಾವುದನ್ನೂ ಹೆಚ್ಚು ಬಳಸಬೇಡಿ. ಹೊಸ ವೃತ್ತಿಪರ ಸುದ್ದಿಗಳನ್ನು ಪಡೆಯುವಿರಿ.
ವೃಷಭ (Taurus): ಕ್ರೀಡೆಯಲ್ಲಿ ನೀವು ತೊಡಗಿಸಿಕೊಳ್ಳುವ ಸಂಭವ ಜಾಸ್ತಿಯಿದೆ. ಇಂದು ಹಣ ಖರ್ಚಾಗುವ ಸಂಭವವಿದೆ ಆದರೆ, ಅದು ಧಾರ್ಮಿಕ ಕ್ಷೇತ್ರದ ಭೇಟಿಗೂ ಆಗಬಹುದು ಅಥವಾ ಭೂಮಿಯ ವಿಚಾರಕ್ಕೂ ಸಂಬಂಧಿಸಿದ್ದಾಗಿರಬಹುದು. ನಿಮ್ಮ ಕೆಲಸದ ಬಗ್ಗೆ ನಿಮಗೆ ಖಚಿತತೆ ಇಲ್ಲದಿದ್ದರೆ ಮಾತು ನೀಡಲು ಹೋಗಲೇಬೇಡಿ. ನಿಮ್ಮ ಆತ್ಮೀಯ ಹಳೆಯ ಸ್ನೇಹಿತರು ನಿಮಗೆ ಆಕಸ್ಮಿಕವಾಗಿ ಭೇಟಿಯಾಗುವ ಸಂಭವವಿದೆ. ಆದರೆ ಗುಟ್ಟನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಪ್ರೀತಿಯ ವಿಷಯದಲ್ಲಿ ಅಲ್ಪಸ್ವಲ್ಪ ವೈಮನಸ್ಸಾದರೂ ಕೂಡ, ಸಂಗಾತಿಯೊಂದಿಗೆ ಮತ್ತೆ ಹತ್ತಿರವಾಗುತ್ತೀರಿ.
ಮಿಥುನ (Gemini): ನಿಮಗೆ ಇಂದಿನ ದಿನ ಭವಿಷ್ಯ (Daily Horoscope) ದ ಪ್ರಕಾರ ಕೆಲವು ಶುಭಸುದ್ದಿಗಳು ಬರಬಹುದು. ಸ್ನೇಹಿತರ ಜೊತೆ ಹಲವು ಕಾಲದ ನಂತರ ಬಹಳ ಆನಂದ ಅನುಭವಿಸುತ್ತೀರಿ. ಕುಟುಂಬದವರೊಂದಿಗೆ ಅವಸರದ ಹೆಜ್ಜೆ ಬೇಡ. ಆದರೆ, ನೀವು ಈವರೆಗೆ ಶತ್ರು ಎಂದುಕೊಂಡ ವ್ಯಕ್ತಿಯೇ ನಿಮ್ಮ ಹಿತೈಷಿ ಎನ್ನುವುದು ನಿಮಗೆ ಅರ್ಥವಾಗಲಿದೆ. ಆತ್ಮೀಯರ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಮಾತುಗಳ ಮೇಲೆ ನಿಗಾ ಇರಲಿ. ಅವಶ್ಯಕತೆಗಿಂತ ಹೆಚ್ಚು ಮಾತು ಬೇಡ. ಆತ್ಮೀಯರ ಆರೋಗ್ಯದ ಬಗ್ಗೆಯೂ ಸ್ವಲ್ಪ ಗಮನ ಇರಲಿ.
ಕರ್ಕಾಟಕ (Cancer): ದೈಹಿಕವಾದಂತಹ ಪರಿಶ್ರಮ ನಿಮಗೆ ಕೆಲವು ಶುಭಸುದ್ದಿ ನೀಡಬಹುದು. ವ್ಯಾಪಾರೋದ್ಯಮದಲ್ಲಿ ಸ್ವಲ್ಪ ಲಾಭಗಳಿಸುವ ಸಾಧ್ಯತೆಯಿದೆ. ಮನೆಯ ಪರಿಸ್ಥಿತಿಯಿಂದ ನೋವಾದರೂ ಕೂಡ, ನಿಮ್ಮ ಮನಸ್ಸಿಗೆ ಹತ್ತಿರವಾದದ್ದನ್ನು ನೀವು ಪಡೆಯುವಿರಿ. ನೀವು ಇಂದು ಏಕಾಂತವಾಗಿ ಇರಲಿ ಇಷ್ಟಪಡುತ್ತೀರಿ ಮತ್ತು ಉತ್ತಮ ಆಹಾರ ತಿನ್ನುವ ಅವಕಾಶವಿದೆ. ವೃತ್ತಿಯಲ್ಲಿ ಹೊಸ ತಂತ್ರದ ಅವಶ್ಯಕತೆ ಇದೆ.
Daily Horoscope: ಸಿಂಹ ರಾಶಿಯವರಿಗೆ ಇಂದು ಯಾವ ರೀತಿಯ ಲಾಭ?
ಸಿಂಹ (Leo): ನೀವು ನಿಮ್ಮ ಸ್ನೇಹಿತರಿಂದ ಏನನ್ನೋ ನಿರೀಕ್ಷಿಸುತ್ತೀರಿ ಹಾಗೂ ನಿಮಗೆ ಅದು ದಕ್ಕಲಿದೆ. ದಣಿವು ಹಾಗೂ ಒತ್ತಡಗಳಿಂದ ನೀವು ಬಳಲಿದರೂ, ಸಂಗಾತಿಯೊಂದಿಗಿನ ಈ ದಿನ ನಿಮಗೆ ಅವೆಲ್ಲವನ್ನು ಮರೆಸಲಿದೆ. ಇಂದು ಕುಟುಂಬದವರೊಂದಿಗೆ ತಿರುಗಾಡುವ ಸಾಧ್ಯತೆಯೂ ಇದ್ದು, ಖರ್ಚುವೆಚ್ಚದ ಬಗ್ಗೆ ಗಮನವಿರಲಿ.
ಕನ್ಯಾ (Virgo): ಇಂದು ದೈಹಿಕವಾಗಿ ನಿಮ್ಮನ್ನು ನೀವು ಬಹಳ ದಂಡಿಸಿಕೊಳ್ಳುತ್ತೀರಿ. ಆದರೆ, ಷೇರು ಮಾರುಕಟ್ಟೆ ಅಥವಾ ಇತರ ಕಡೆಗಳಲ್ಲಿ ಹೂಡಿಕೆ ಮಾಡುವವರು ಅತ್ಯಂತ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ, ಇಂದು ಪಡೆಯುವುದಕ್ಕಿಂತ ಕಳೆದುಕೊಳ್ಳುವ ಸಂಭವ ಜಾಸ್ತಿ. ಕುಟುಂಬ, ಗುರುಹಿರಿಯರು ಹಾಗೂ ಸ್ನೇಹಿತರ ಬೆಂಬಲ ನಿಮಗೆ ಧೈರ್ಯ ತರುತ್ತದೆ. ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು ನೀವು ಸುತ್ತಾಡಬಹುದು. ಆದರೆ, ಬಿಸಿಲಿನ ಪ್ರಖರತೆ ನಿಮ್ಮನ್ನು ಸ್ವಲ್ಪ ಕಾಡಲಿದೆ.
ತುಲಾ (Libra): ನೀವು ಇಂದಿನ ಭವಿಷ್ಯ (Daily Horoscope) ಪ್ರಕಾರ ಬಹಳ ಆರಾಮದಾಯಕ, ಆಶಾದಾಯಕ ಹಾಗೂ ಖುಷಿಯ ಕ್ಷಣಗಳನ್ನು ಅನುಭವಿಸುತ್ತೀರಿ. ವಿವಿಧ ಕಡೆಗಳಿಂದ ಹಣ ಬಂದರೂ ಕೂಡ, ವೆಚ್ಚ ಮಾಡುವಾಗ ಗಮನ ಇರಲಿ. ನಿಮ್ಮ ವಿರುದ್ಧ ಅಪವಾದ ಸೃಷ್ಟಿಸುವವರ ಬಗ್ಗೆ ಎಚ್ಚರ ಇರಲಿ. ಸಂಗಾತಿಯೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತೀರಿ. ನಿಮಗೆ ಸಹಾಯ ಮಾಡಲಿ ಎಂದು ಇತರರಿಗೆ ಜಾಸ್ತಿ ಕೇಳಬೇಡಿ. ನಿಮ್ಮ ಇಂದಿನ ದಿನ ಲಾಭದಾಯಕವೂ, ಸಂತಸದಾಯಕವಾಗಿಯೂ ಇರಲಿದೆ.
ವೃಶ್ಚಿಕ (Scorpio): ಆರೋಗ್ಯದ ವಿಚಾರದಲ್ಲಿ ನಿಮಗೆ ಇಂದು ಯಾವುದೇ ತೊಂದರೆ ಬಾರದು. ಆದರೆ, ನೀವು ಹಲವು ಕಾಲದಿಂದ ಪ್ರಯತ್ನಿಸುತ್ತಿದ್ದ ಸಾಲವನ್ನು ಇಂದು ಪಡೆಯುತ್ತೀರಿ. ನೀವು ಕೊಟ್ಟ ಮಾತು ಸಾಬೀತು ಮಾಡಲು ನಿಮಗೂ ನಿಮ್ಮ ಸಂಗಾತಿಗೂ ಜಗಳ ಆಗಬಹುದು. ಆದರೆ ಅವರು ನಿಮ್ಮನ್ನು ಸಮಾಧಾನಪಡಿಸಲಿದ್ದಾರೆ. ನಿಮಗೆ ತಾಯಿಯ ಸೇವೆ ಮಾಡಬೇಕು ಎನ್ನುವ ಆಸೆಯಿದ್ದರೂ, ಸಮಯ ಅದಕ್ಕೆ ಸಹಕರಿಸುವುದಿಲ್ಲ. ಆದರೆ ನಿಮ್ಮ ಆತ್ಮೀಯ ಸಹೋದ್ಯೋಗಿಗಳು ನಿಮಗೆ ಎಲ್ಲಾ ವಿಷಯಗಳಲ್ಲಿ ಇಂದು ಸಹಕರಿಸುತ್ತಾರೆ.
ಧನು ರಾಶಿಯವರಿಗೆ ಇದೆ ಕೊಂಚ ಆತಂಕ
ಧನು (Sagittarius): ಬೇಡದೇ ಇರುವ ಚಿಂತೆ ಮನಸ್ಸು ಕೆಡಿಸಿದಂತೆ ಅನಾವಶ್ಯಕ ತಲೆನೋವಿನಿಂದ ನಿಮ್ಮ ಆರೋಗ್ಯ ಹಾಗೂ ಮನ ಶಾಂತಿ ಕೆಡಬಹುದು. ಸ್ವಲ್ಪ ಪ್ರಯತ್ನಿಸಿದಲ್ಲಿ ಹೆಚ್ಚು ಹಣ ಪಡೆಯುವ ಅವಕಾಶವಿದೆ. ಕುಟುಂಬ ಅಥವಾ ಆತ್ಮೀಯರ ಪಟ್ಟಿಯಲ್ಲಿ ಹೊಸ ಸದಸ್ಯರ ಆಗಮನದ ಸಂಭವವಿದೆ. ನೀವು ಸಂತೋಷವನ್ನು ಆಚರಿಸುತ್ತೀರಿ ಹಾಗೂ ಬಹಳ ಸಿಹಿ ಖಾದ್ಯ ಸವಿಯುವ ಸಂಭವವೂ ಇದೆ. ಇಂದಿನ ಸಂಜೆ ನಿಮ್ಮ ದಿನವನ್ನು ಸುಂದರವಾಗಿಸಲಿದೆ.
ಮಕರ (Capricorn): ಮಕರ ರಾಶಿಯವರಾದ ನಿಮಗೆ ಇಂದಿನ ದಿನ ಸ್ವಲ್ಪ ಕಹಿ ಅನುಭವ ನೀಡಬಹುದು. ಮಾನಸಿಕ ಒತ್ತಡ, ಮನಸ್ಸಿನ ವೇದನೆಗಳು ನಿಮ್ಮನ್ನು ಬಹಳ ಕಾಡಬಹುದು. ಕೆಟ್ಟ ಹವ್ಯಾಸಗಳಿರುವ ಆತ್ಮೀಯರಿಂದ ಇಂದು ಸಾಧ್ಯವಾದಷ್ಟು ದೂರವಿರಿ. ಇಂದು ಬಹಳ ಸಭ್ಯತೆಯಿಂದ ವರ್ತಿಸಿ. ಇಲ್ಲವಾದಲ್ಲಿ ಅವಮಾನ ಖಂಡಿತ. ಸುಖಾಸುಮ್ಮನೇ ಯಾವುದೋ ವಿಚಾರದ ಬಗ್ಗೆ ಆಲೋಚಿಸಿವುದನ್ನು ಬಿಡಿ. ವೈವಾಹಿಕ ಜೀವನದ ಆನಂದವನ್ನು ನೀವಿಂದು ಪಡೆಯುವಿರಿ.
ಕುಂಭ (Aquarius): ಇಂದಿನ ದಿನ ಭವಿಷ್ಯದಂತೆ (Daily Horoscope) ಚಟುವಟಿಕೆ ಅಥವಾ ದೈಹಿಕ ಸದೃಢತೆ ನೀಡುವ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳುವಿರಿ. ಯಾರಿಂದ ಸಾಲ ಪಡೆದಿದ್ದರೂ, ಅದನ್ನು ಮರುಪಾವತಿಸುವ ಬಗ್ಗೆ ಆಲೋಚಿಸಿ ಹೆಜ್ಜೆಯಿಡಿ. ಯಾರಿಂದಲೂ ಸಹಾಯ ಪಡೆಯುವ ಮುನ್ನ ಬಹಳಷ್ಟು ಎಚ್ಚರಿಕೆ ಇರಲಿ. ಯಾರ ಮೇಲೆ ನಂಬಿಕೆ ಇಡಬೇಕು ಎನ್ನುವುದನ್ನು ಆತ್ಮೀಯರೊಂದಿಗೆ ಚರ್ಚಿಸಿ ಹೆಜ್ಜೆಯಿಡಿ. ನಿಮಗೆ ಈ ದಿನ ಮಿಶ್ರಫಲ ನೀಡಿದರೂ, ದಿನದಾಂತ್ಯಕ್ಕೆ ಶುಭಸುದ್ದಿ ಪಡೆಯುವಿರಿ.
ಮೀನ (Pisces): ನೀವು ಭಾವಜೀವಿಯಾಗಿರುವುದರಿಂದ, ಭಾವನಾತ್ಮಕವಾಗಿ ಬಹಳ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ನಿಮ್ಮ ಕುಟುಂಬದ ದುಂದುವೆಚ್ಚದಿಂದ ನಿಮಗೆ ತಲೆನೋವು ಆರಂಭವಾಗಬಹುದು. ನಿಮ್ಮ ತಾಳ್ಮೆ ಅಥವಾ ಹುಸಿಕೋಪದ ವಿಚಾರದಲ್ಲಿ ನೀವು ನೋವು ಅನುಭವಿಸಬಹುದು ಅಥವಾ ಅದು ಇತರರ ನೋವಿಗೂ ಕಾರಣವಾಗಬಹುದು. ನೀವು ಹೊಸ ಕೆಲಸ ಪ್ರಾರಂಭಿಸುವುದಾದರೆ, ಅನುಭವಿಗಳೊಂದಿಗೆ ದಯವಿಟ್ಟು ಚರ್ಚಿಸಿ ಮುನ್ನಡೆಯಿರಿ.