ದೀಪಾವಳಿ ಹಬ್ಬದ ನಂತರ ಗ್ರಹಗತಿಗಳ ಸಂಚಾರ ಬದಲಾಗಿವೆ. ಈ ಗ್ರಹಗತಿಗಳ ಸಂಚಾರದ ಬದಲಾವಣೆಯ ಪರಿಣಾಮ ಹಲವು ರಾಶಿಯ ಜನರಿಗೆ ಸಂಪತ್ತು, ಸಮೃದ್ಧಿಯನ್ನು ತಂದರೆ, ಕೆಲವು ರಾಶಿಯವರಿಗೆ ಮತ್ತಷ್ಟು ಸಂಕಷ್ಟಗಳು ಆರಂಭವಾಗಲಿವೆ. ಗ್ರಹಗಳಲ್ಲಿ ಅತಿಹೆಚ್ಚು ಪರಿಣಾಮ ಬೀರುವವನು ಶನಿದೇವ. ಶನಿದೇವನ ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರ ಸೂಕ್ಷ್ಮ ಅವಲೋಕನ ಮಾಡುತ್ತದೆ. ಶನಿದೇವನು (Aquarius Effect) ತಮ್ಮ ರಾಶಿಯಲ್ಲಿ ಬರುತ್ತಾನೆ ಎಂದರೆ ಸಾಕು, ಆ ರಾಶಿಯವರ ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಮಾತು ಜಗಜ್ಜಾಹೀರು.
ಶನಿ ದೇವನು ಕರ್ಮಕ್ಕನುಗುಣವಾಗಿ ಫಲ ನೀಡುವುದರಿಂದ ಆತನ ಪ್ರತಿಯೊಂದು ಚಲನೆಯು ವಿಶ್ಲೇಷಣೆಗೆ ಒಳಪಡುತ್ತದೆ. ಪ್ರಸ್ತುತ ತನ್ನ ಸ್ವಂತ ಕುಂಭರಾಶಿಯಲ್ಲಿರುವ ಶನಿದೇವನು, ದೀಪಾವಳಿಯ ನಂತರ ನೇರವಾಗಿ ಸಂಚರಿಸಲಿದ್ದಾನೆ. ಇದೇ ಅಕೋಬರ್ 03 ರಂದು ನಕ್ಷತ್ರಪುಂಜವನ್ನು ಬದಲಾಯಿಸಿ ಶತಭಿಷಾ ನಕ್ಷತ್ರವನ್ನು ನವೆಂಬರ್ 15ರ ವೇಳೆಗೆ ಪ್ರವೇಶಿಸಲಿದ್ದಾನೆ. ಶತಭಿಷಾ ನಕ್ಷತ್ರದಲ್ಲಿ ಶನಿ ದೇವನ ನೇರ ಚಲನೆ ಮಾಡಲಿದ್ದಾನೆ. ಈ ನೇರ ಚಲನೆಯ ಪರಿಣಾಮ (Aquarius Effect) ಕುಂಭ, ಮಿಥುನ, ಮೀನ ಹಾಗೂ ವೃಷಭ ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ.
ಈ ನಾಲ್ಕು ರಾಶಿಯವರ ಫಲಾಫಲಗಳು :
- ಕುಂಭ ರಾಶಿ (Aquarius) :
ಪ್ರಸ್ತುತ ಶನಿದೇವ ತನ್ನ ಸ್ವಂತ ಕುಂಭರಾಶಿಯಲ್ಲಿ ನೆಲೆಸಿದ್ದು, ಈ ರಾಶಿಯವರಿಗೆ ಸಾಡೇ ಸಾತಿ ನಡೆಯುತ್ತಿದೆ. ಸಾಡೇ ಸಾತಿಯಿಂದ ಬಳಲಿ ಬೆಂಡಾಗಿರುವ ಈ ರಾಶಿಯವರಿಗೆ ಶನಿಯ ನೇರ ಚಲನೆಯ ಪರಿಣಾಮ ಸತ್ಫಲಗಳು ದೊರೆಯಲು ಆರಂಭವಾಗುತ್ತವೆ. ನಿಮ್ಮ ವೆಚ್ಚಗಳು ನಿಯಂತ್ರಣಕ್ಕೆ ಬರಲು ಆರಂಭಿಸಿ, ಹಣಕಾಸಿ ಸಮಸ್ಯೆಗಳು ನಿಮ್ಮಿಂದ ದೂರಾಗುತ್ತವೆ. ಅಲ್ಲದೇ, ನಿಮ್ಮ ಆದಾಯದ ಪ್ರಮಾಣವೂ ಹೆಚ್ಚಳವಾಗುತ್ತದೆ. ಇದೀಗ ಶನಿದೇವನ ಕೃಪಾದೃಷ್ಠಿ ನಿಮ್ಮ ಮೇಲಿರುವುದರಿಂದ ದೀಪಾವಳಿಯ ನಂತರ ನಿಮಗೆ ಅದೃಷ್ಠ ಒಲಿದುಬರಲಿದೆ.
- ವೃಷಭ ರಾಶಿ (Taurus) :
ಶತಭಿಷಾ ನಕ್ಷತ್ರದಲ್ಲಿ ಶನಿಯ ನೇರ ಸಂಚಾರದ ಪರಿಣಾಮ ವೃಷಭ ರಾಶಿಯವರಿಗೂ ಅದೃಷ್ಟ ಕೂಡಿಬರಲಿದೆ. ನೀವು ಶನಿಯ ಪ್ರಭಾವದಿಂದ ಹೆಚ್ಚಿನ ಹಣ ಗಳಿಸುವುದಲ್ಲದೇ, ವೃತ್ತಿ ಜೀವನದಲ್ಲೂ ಪ್ರಗತಿ ಪಡೆಯಲಿದ್ದೀರಿ. ಇದುವರೆಗೂ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ನಿಮ್ಮಿಂದ ದೂರವಾಗಲಿವೆ. ನೀವು ಹಲವು ದಿನಗಳಿಂದ ಕಾಯುತ್ತಿದ್ದ ಉತ್ತಮ ಸುದ್ದಿಗಳು ನಿಮ್ಮನ್ನರಸಿ ಬರಲಿವೆ.
- ಮೀನ ರಾಶಿ (Pisces) :
ನೂತನ ಕೆಲಸಗಳನ್ನು ಆರಂಭಿಸುತ್ತಿರುವ ಮೀನ ರಾಶಿಯ ಜನರಿಗೆ ಶನಿಯ ನೇರ ಸಂಚಾರವು ಅದೃಷ್ಟ ತಂದುಕೊಡಲಿದೆ. ದೀಪಾವಳಿಯ ನಂತರ ನಿಮ್ಮ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳಲಿದೆ. ಹೆಚ್ಚಿನ ಹಣ ಗಳಿಕೆಯ ಅವಕಾಶವೂ ತಮಗೆ ಒಲಿದುಬರಲಿದೆ. ಶುಭ ಫಲಿತಾಂಶಗಳನ್ನೇ ಕೇಳುತ್ತೀರಿ ಹಾಗೂ ನಿಮ್ಮ ಪ್ರಶಂಸೆಯೂ ಕೇಳಬರಲಿದೆ.
- ಮಿಥುನ ರಾಶಿ (Gemini) :
ಶನಿದೇವನ ನೇರ ಸಂಚಾರದ (SAquarius Effect) ಶುಭ ಫಲ ಮಿಥುನ ರಾಶಿಯವರಿಗೂ ದೊರಕಲಿದೆ. ದೀಪಾವಳಿಯ ನಂತರ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವಾಗಲಿದೆ. ಈ ರಾಶಿಯ ಸರ್ವರಿಗೂ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ. ತೀರಾ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಶನಿದೇವನ ಆಶೀರ್ವಾದದಿಂದ ಪರಿಹಾರ