ದೀಪಾವಳಿ ಹಬ್ಬವನ್ನು ಇಡೀ ದೇಶದಾದ್ಯಂತ ಸಂಭ್ರಮದಿಂದ ಅಚರಿಸಲಾಗುತ್ತದೆ. 2024ನೇ ಸಾಲಿನ ಈ ವರ್ಷ ದೀಪಾವಳಿ ಹಬ್ಬ 5 ದಿನಗಳ ಕಾಲ ನಡೆಯಲಿದೆ. ಕೇವಲ ನಗರಗಳಲ್ಲಿ ಮಾತ್ರವಲ್ಲದೇ ಹಳ್ಳಿ-ಹಳ್ಳಿಗಳಲ್ಲಿಯೂ ದೀಪಾವಳಿ ಹಬ್ಬದ (Deepavali Astrology) ಸಂಭ್ರಮ ಮುಗಿಲೆತ್ತರಕ್ಕೇರಲಿದೆ.
ಈ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿದೇವಿಯ ಪೂಜೆಯೂ ವಿಶೇಷವಾಗಿದೆ. ದಕ್ಷಿಣ ಭಾರತದಲ್ಲಿ ಲಕ್ಷ್ಮೀ ದೇವಿಯ ಪೂಜೆ ಮಾಡಿದರೆ. ಉತ್ತರ ಭಾರತದ ಕೆಲವೆಡೆ ಕಾಳಿ ದೇವಿಯನ್ನು ಈ ಹಬ್ಬದಲ್ಲಿ ಆರಾಧನೆ ಮಾಡಲಾಗುತ್ತದೆ. ದೀಪಾವಳಿ ಹಬ್ಬಕ್ಕೆ ವಿಶೇಷವಾದ ಪುರಾತನ ಹಿನ್ನೆಲೆಯೂ ಇದೆ. ನರಕ ಚತುರ್ದಶಿಯಂದು ಬಲಿ ಚಕ್ರವರ್ತಿಯು ಭೂಮಿಗೆ ಬಂದು ಹೋಗುತ್ತಾನೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿಯೇ, ನರಕ ಚತುರ್ದಶಿಯಂದು ದೀಪಗಳನ್ನು ಬೆಳಗಲಾಗುತ್ತದೆ. ರಾಮಾಯಣದ ಪುರಾತನ ಹಿನ್ನೆಲೆಯೂ ಈ ಹಬ್ಬದೊಂದಿಗೆ ಬೆಸದುಕೊಂಡಿದೆ. ಶ್ರೀರಾಮನು ರಾವಣನ ಅಂತ್ಯ ಮಾಡಿದ್ದು ಇದೇ ದಿನವೆಂದೂ ಸಂಭ್ರಮದಿಂದ ಆಚರಿಸಲಾಗುತ್ತದೆ.
ಇದೆಲ್ಲದರ ನಡುವೆ ದೀಪಾವಳಿ ಹಬ್ಬದ (Deepavali Astrology) ತರುವಾಯ ರಾಶಿಚಕ್ರದ 5 ರಾಶಿಯ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿ ಒಲಿದುಬರಲಿದೆ. ಸ್ವತಃ ಲಕ್ಷ್ಮಿ ದೇವಿಯೇ ಅವರ ಜೀವನವನ್ನು ಬೆಳಗಲಿದ್ದಾಳೆ. ಹಲವು ರಾಶಿಯ ಜನತೆ ಹಲವು ವರ್ಷಗಳಿಂದ ಸಿಲುಕಿಕೊಂಡಿರುವ ಸಂಕಷ್ಟಗಳಿಗೆ ಮುಕ್ತಿ ದೊರಕಲಿದೆ. ಕೆಲವರಿಗೆ ಲಕ್ಷ್ಮಿ ದೇವಿಯ ಕನಕವಾಗಿ ಅವರಿಗೆ ವರನೀಡಲಿದ್ದಾಳೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಯ ನಂತರ ಯಾವೆಲ್ಲ ರಾಶಿಗಳ ಜನರಿಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸಲಿದೆ ಎನ್ನುವುದನ್ನು ನೋಡೋಣ ಬನ್ನಿ…
ಲಕ್ಷ್ಮಿದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲಿರುವ ರಾಶಿಗಳು :
ಮೇಷ ರಾಶಿ :
ದೀಪಾವಳಿಯ ನಂತರ ಗ್ರಹಗಳ ಚಲನೆಯಿಂದ ಮೇಷ ರಾಶಿಯವರ ವೃತ್ತಿ ಮತ್ತು ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ವ್ಯಾಪಾರಲ್ಲಿ ಇವರಿಗೆ ಲಾಭದ ಪ್ರಮಾಣ ಹೆಚ್ಚಲಿದೆ. ಉನ್ನತ ಕೆಲಸಗಳೂ ನಿಮ್ಮನ್ನು ಹರಸಿ ಬರಲಿವೆ. ಹಣ ಉಳಿತಾಯ ಹಾಗೂ ಗಳಿಕೆಗೆ ಅವಕಾಶ ದೊರೆಯಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಮಕರ ರಾಶಿ :
ಪ್ರಸ್ತುತ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವ ನಿಮಲ್ಲಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಟಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ವ್ಯಾಪಾರಿಗಳಿಗೆ ಹೂಡಿಕೆ ಹುಡುಕಿ ಬರಲಿದೆ. ಆರ್ಥಿಕ ಪ್ರಗತಿ ಸಾಧಿಸಲು ಕೊಂಚ ಸಮಸ್ಯೆಯುಂಟಾದರೆ ಕೊನೆಗೆ ಗೆಲುವು ನಿಮ್ಮದೇ. ಲಕ್ಷ್ಮಿ ದೇವಿ ನಿಮ್ಮೊಂದಿಗೆ ಇರುವುದುರಿಂದ ಅದೃಷ್ಟವೂ ನಿಮ್ಮ ಜೊತೆ ಇರಲಿದೆ. ನಿಮ್ಮ ಕನಸಿನ ಯೋಜನೆಗಳ ಕಡೆಗೆ ತಾವು ಧೈರ್ಯದಿಂದ ಮುನ್ನುಗ್ಗಬಹುದು.
ಕಟಕ ರಾಶಿ :
ಹಲವು ದಿನಗಳಿಂದ ನಿಮಗೆ ಬರಬೇಕಾಗಿದ್ದ ಹಣ ದೀಪಾವಳಿಯ ನಂತರ ನಿಮ್ಮ ಕೈ ಸೇರಲಿದೆ. ನಿಮಗೆ ಧನಲಾಭವಿದ್ದು, ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆಯಲಿದೆ. ನಿಮ್ಮ ವ್ಯಕ್ತಿತ್ವ ಹಾಗೂ ಮಾತಿನ ಮೇಲೆ ಇತರರಿಗೆ ಆಕರ್ಷಣೆಯುಂಟಾಗಲಿದೆ. ದೀಪಾವಳಿಯ ನಂತರ ಎಲ್ಲಾ ವಿಭಾಗಳಲ್ಲಿಯೂ ನಿಮಗೆ ಅದೃಷ್ಟವಿದೆ.
ಮಿಥುನ ರಾಶಿ :
ದೀಪಾವಳಿಯ ನಂತರ (Deepavali Astrology) ಮಿಥುನ ರಾಶಿ ನೇರವಾಗಿ ತಿರುಗಲು ಆರಂಭಿಸುತ್ತದೆ. ಅನಂತರ ನಿಮ್ಮ ಎಲ್ಲಾ ಕಾರ್ಯಗಳು ಸಫಲಗೊಳ್ಳಲು ಪ್ರಾರಂಭಿಸುತ್ತವೆ. ಪ್ರೀತಿಯ ವಿಷಯದಲ್ಲಿ ನಿಮಗೆ ಅದೃಷ್ಟ ಒಲಿದುಬರಲಿದೆ. ಮದುವೆಯಾಗಿದ್ದಲಿ ನಿಮ್ಮ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯುತ್ತೀರಿ. ಉದ್ಯೋಗ, ವ್ಯಾಪಾರ ಹಾಗೂ ಆರ್ಥಿಕ ಜೀವನ ಸುಧಾರಿಸಲಿದೆ. ಈ ಸಮಯದಲ್ಲಿ ಉತ್ತಮ ಆರೋಗ್ಯವೂ ನಿಮ್ಮದಾಗಲಿದೆ.
ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ದೀಪಾವಳಿಯ ನಂತರ ಸಂಪಾದನೆಯ ಪ್ರಮಾಣ ಹೆಚ್ಚಲಿದೆ. ನಿಮ್ಮ ಹಳೆಯ ಸಾಲವೆಲ್ಲವೂ ತೀರಲಿದೆ. ಆರ್ಥಿಕವಾಗಿ ನೀವು ಸದೃಢವಾಗಲಿದ್ದು, ನಿಮ್ಮ ಉದ್ಯಮ ಯಶಸ್ಸಿನತ್ತ ಸಾಗಲಿದೆ. ಲಾಟರಿ ಹಾಗೂ ಷೇರು ಮಾರುಕಟ್ಟೆಯಲ್ಲಿಯೂ ನಿಮಗೆ ಅದೃಷ್ಟ ಒಲಿದುಬರಬಹುದು.