ಈ ಬಾರಿ ಸೆ.07 ರಿಂದ ಆರಂಭವಾದ ಗಣೇಶ ಚತುರ್ಥಿ (Ganesh Chaturthi) ಗೆ ಗಲ್ಲಿಗಲ್ಲಿಗಳಲ್ಲೂ ವಿಘ್ನನಾಶಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಪುನಸ್ಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌಜಿಯೊಂದಿಗೆ ನಂತರ ವಿಗ್ರಹ ವಿಸರ್ಜನೆ ಮಾಡುವ ಅದ್ದೂರಿ ಹಬ್ಬಕ್ಕೆ ನಡೆದಿದೆ ಹಾಗೂ ಈಗಲೂ ನಡೆಯುತ್ತಿದೆ. ಈ ನಡುವೆ, ಗಣೇಶನನ್ನು ಆರಾಧಿಸುವ (Ganesh Pooja) ಈ ಹಬ್ಬದ ಸಮಯದಲ್ಲಿ ಎಲ್ಲರೂ ಅನುಸರಿಸಬೇಕಾದ ನಡೆಗಳು (Rituals) ಹಾಗೂ ಚೌತಿಯ ಸಮಯದಲ್ಲಿ ಮಾಡಲೇಬಾರದ ತಪ್ಪು (Mistakes) ಗಳನ್ನು ವಿವರಿಸ್ತೀವಿ ನೋಡಿ.
Ganesh Pooja: ನೀವು ಗಣಪತಿ ಪೂಜೆ ಮಾಡುವಾಗ ಇದೆಲ್ಲಾ ಗಮನದಲ್ಲಿರಲಿ
ಗಣೇಶ ಚತುರ್ಥಿಯಂದು ಗಣೇಶನಿಗೆ ಇಷ್ಟವಾದ ಮೋದಕ, ಕಡುಬು, ಪಂಚಕಜ್ಜಾಯ ಮುಂತಾದ ಖಾದ್ಯಗಳನ್ನು ಅರ್ಪಿಸಿ ಗರಿಕೆಯೊಂದಿಗೆ ಪೂಜಿಸಲಾಗುತ್ತದೆ. ಎಲ್ಲಾ ಕಾರ್ಯಗಳೂ ವಿಘ್ನವಿಲ್ಲದೆ ನೆರವೇರಲು ಗಣೇಶನ ಆಶೀರ್ವಾದವೇ ಬೇಕು ಎನ್ನುವ ಕಾರಣಕ್ಕೆ ಪ್ರಥಮವಂದಿತ ಗಣಪನಿಗೆ ಪೂಜೆ ಮಾಡಲಾಗುತ್ತದೆ. ಗಣೇಶನ ಪೂಜೆಗೆ ಅಥವಾ ಗಣೇಶ ಚತುರ್ಥಿಯಂದು ನೀವು ಅನುಸರಿಸಲೇಬೇಕಾದ ಕೆಲವು ಅಂಶಗಳನ್ನು ಗಮನವಿಟ್ಟು ಓದಿ.
- ಚೌತಿಯ ಹುಣ್ಣಿಮೆಯ ಚಂದ್ರನನ್ನು ತಪ್ಪಿಯೂ ನೋಡಬೇಡಿ. ಚೌತಿಯ ಚಂದ್ರನನ್ನು ನೋಡುವುದರಿಂದ ಕಷ್ಟಗಳು ಹಾಗೂ ಅಪವಾದಗಳು ಹೆಚ್ಚಾಗುತ್ತವೆ ಎಂಬ ಪ್ರತೀತಿಯಿದೆ.
- ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸುವರು, ಮೂರ್ತಿ ಪ್ರತಿಷ್ಟಾಪಿಸಿದ ದಿನವೇ ವಿಸರ್ಜಿಸುವವರೂ ಇದ್ದಾರೆ ಅಥವಾ 10-15 ದಿನಗಳ ಕಾಲ ಪೂಜಿಸಿ ನಂತರ ವಿಸರ್ಜಿಸುವವರೂ ಇದ್ದಾರೆ. ಹಾಗಾಗಿ ಆಯಾಯ ದಿನಗಳ ಪೂಜೆಯನ್ನು ಸಮರ್ಪಕವಾಗಿ ಮಾಡಬೇಕಾದದ್ದು ಅತ್ಯವಶ್ಯ.
- ಗಣೇಶನ ಮೂರ್ತಿಯನ್ನು ಕೂರಿಸುವುದು ಎಷ್ಟು ಪುಣ್ಯಪ್ರದವೋ, ಪೂಜೆಯ ವಿಧಾನದಲ್ಲಿ ತಪ್ಪಾಗಿ ನಡೆದುಕೊಂಡರೆ ಗಣೇಶನ ಅವಕೃಪೆಗೆ ತುತ್ತಾಗುವುದೂ ಅಷ್ಟೇ ಖಚಿತ. ಹಾಗಾಗಿ ಕೆಲವೊಂದು ನೀತಿ ನಿಯಮಗಳನ್ನು ದಯವಿಟ್ಟು ಅನುಸರಿಸಿ.
- ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೆ ಹಿಂದಿನ ವರ್ಷದ ಮೂರ್ತಿಗಳನ್ನು ಬಳಸುವಂತಿಲ್ಲ. ಹೊಸ ಮೂರ್ತಿಯನ್ನೇ ತಂದು ಪ್ರತಿಷ್ಠಾಪಿಸಿ ಪೂಜಿಸಬೇಕು.
- ಗಣಪತಿ ದೇವರಿಗೆ ಗರಿಕೆ ಹುಲ್ಲು (Bermuda grass or Durva grass) ಎಂದರೆ ಅತ್ಯಂತ ಪ್ರಿಯ. ಗರಿಕೆ ಹೂ ಅರ್ಪಿಸಿ ಪೂಜೆಗೈದರೆ ಗಣಪತಿ ಬೇಗ ಒಲಿಯುತ್ತಾನೆ.
- ಗಣಪತಿಗೆ ತುಳಸಿ (Holy Basil) ಹಾರ ಅಥವಾ ತುಳಸಿ ಎಲೆಯನ್ನು ಸಲ್ಲಿಸುವುದು ನಿಷಿದ್ಧ. ತುಳಸಿಗೂ ಹಾಗೂ ಗಣಪತಿಗೂ ವಿವಾಹದ ವಿಚಾರಕ್ಕೆ ಪರಸ್ಪರ ಸಂಘರ್ಷವಿತ್ತು ಎನ್ನುವ ಪ್ರತೀತಿಯಿದೆ.
- ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಕಟ್ಟುನಿಟ್ಟಾದ ವೃತದಲ್ಲಿರಬೇಕು. ಯಾವುದೇ ಕಾರಣಕ್ಕೆ ವೃತನಿಯಮಗಳನ್ನು ಮೀರಬಾರದು. ಹಾಗೊಮ್ಮೆ ಮೀರಿದಲ್ಲಿ, ಅದರಿಂದ ಉಂಟಾಗುವ ದೋಷವು ಅವರಿಗಷ್ಟೇ ಅಲ್ಲದೇ, ಎಲ್ಲರಿಗೂ ಸುತ್ತಿಕೊಳ್ಳುತ್ತದೆ.
- ಗಣಪತಿ ಪೂಜೆಗೆ ಸಾತ್ವಿಕವಾದಂತಹ ಸಸ್ಯಾಹಾರ (Veg food) ಅಥವಾ ಫಲಾಹಾರ (Fruits) ವನ್ನು ಸೇವಿಸಬೇಕು. ಗಣಪತಿ ಪೂಜೆಯ ಸಮಯದಲ್ಲಿ ಮಾಂಸಾಹಾರ (Non-Veg) ಅಥವಾ ಮೀನು ಮುಂತಾದ ಶಾಖಾಹಾರಗಳು ನಿಷಿದ್ಧ.
- ಗಣಪತಿ ಪ್ರತಿಷ್ಠಾಪನೆ ಮಾಡುವಾಗ ಎಂದಿಗೂ ದಕ್ಷಿಣ (South) ಕ್ಕೆ ಮುಖಮಾಡಿ ಪ್ರತಿಷ್ಠಾಪಿಸಬಾರದು. ಇದರಿಂದ ಹಲವು ದೋಷಗಳು ಉಂಟಾಗುತ್ತವೆ. ದಕ್ಷಿಣಾಭಿಮುಖವಾದ ಮೂರ್ತಿ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವ ಕ್ರಮ ಕೂಡ ಶಾಸ್ತ್ರದಲ್ಲಿ ನಿಷಿದ್ಧ.
- ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಪ್ರತಿಷ್ಠಾಪಿಸಿದ ಜಾಗದಿಂದ ಒಬ್ಬರೂ ಇಲ್ಲದಂತೆ ಮೂರ್ತಿಯನ್ನು ಬಿಟ್ಟು ಹೀಗಬಾರದು. ಸ್ಥಾಪಿಸಿದಾಗಿನಿಂದ ವಿಸರ್ಜಿಸುವ ತನಕ ಕನಿಷ್ಠ ಒಬ್ಬರಾದರೂ ವಿಗ್ರಹದ ಬಳಿಯಲ್ಲಿರಬೇಕು.
ಗಣೇಶ ಪೂಜೆಯ ಸಮಯದಲ್ಲಿ ಈ ವಿಚಾರಗಳೂ ಗಮನದಲ್ಲಿರಲಿ!
- ಗಣಪತಿ ಪ್ರತಿಷ್ಠಾಪಿಸಿದ ನಂತರ ಗಲಾಟೆ, ವಿವಾದ, ಜಗಳ ಇವುಗಳನ್ನೆಲ್ಲಾ ಮಾಡದೆ, ದೇವರ ಸ್ಮರಣೆ ಮಾಡುತ್ತಿರಬೇಕು. ಗಣೇಶನಿಗೆ ಭಕ್ತಿಯೇ ಮುಖ್ಯ. ಅವನ ಕೋಪಕ್ಕೆ ತುತ್ತಾದಲ್ಲಿ ಪರಿಹಾರವೂ ಕಷ್ಟಸಾಧ್ಯ ಎನ್ನುವುದು ನೆನಪಿರಲಿ.
- ಗಣೇಶ ಮೂರ್ತಿ ಸ್ಥಾಪನೆಗೆ ಮತ್ತು ವಿಸರ್ಜನೆಗೆ ಸರಿಯಾದ ಮುಹೂರ್ತ (Muhurtha) ನೋಡಿಕೊಳ್ಳಬೇಕು. ನಮಗೆ ಸಮಯವಾದಾಗ ಸ್ಥಾಪಿಸುವುದು ಅಥವಾ ವಿಸರ್ಜಿಸುವುದು ಗಣಪತಿಯ ಅವಕೃಪೆಗೆ ತುತ್ತಾಗುವಂತೆ ಮಾಡುತ್ತದೆ.
- ಗಣಪತಿಗೆ ಕೆಂಪು (Red) ಮತ್ತೆ ಹಳದಿ (Yellow) ಬಹಳ ಇಷ್ಟವಾದ ಬಣ್ಣಗಳು. ಆ ಬಣ್ಣದ ಹೂವುಗಳನ್ನು ಅರ್ಪಿಸಿ ಹಾಗೂ ಆ ಬಣ್ಣದ ಹೊಸ ಬಟ್ಟೆ ಧರಿಸಿದರೆ ಗಣಪತಿಗೂ ಪ್ರಿಯ.
- ಗಣಪತಿಗೆ ಆರತಿ ಎತ್ತಿ, ನೈವೇದ್ಯಗಳನ್ನು ಅರ್ಪಿಸಿ ನಂತರ ಮೂರ್ತಿಯನ್ನು ವಿಸರ್ಜಿಸಬೇಕು. ಮೂರ್ತಿ ವಿಸರ್ಜನೆಯ ಸಮಯ ಮೂರ್ತಿ ಕೂರಿಸಿದ ಸ್ಥಳ ಅಥವಾ ಮನೆಯಲ್ಲಿ ಯಾರಾದರೂ ಒಬ್ಬರು ಇರಲೇಬೇಕು.
- ಗಣೇಶ ಚತುರ್ಥಿಯ ಸಮಯದಲ್ಲಿ ಯಾವುದೇ ರೀತಿಯ ದಾಂಪತ್ಯ ಜೀವನದ ಚಟುವಟಿಕೆಗಳು ಅಥವಾ ಇತರ ಕ್ರಿಯೆಗಳನ್ನು ಮಾಡದೇ, ಕೇವಲ ಭಕ್ತಿಯಿಂದ ದೇವರ ಪೂಜೆಯಲ್ಲಿ ತೊಡಗಿಸಿಕೊಂಡರೆ ಗಣಪತಿ ಒಲುಮೆ ಖಂಡಿತ.
- ಗಣಪತಿಗೆ ಹರಕೆಗಳು ಪ್ರಿಯವಾದುದು. ಆದರೆ, ಆ ಹರಕೆ ಚಿಕ್ಕ ಪಂಚಕಜ್ಜಾಯವಾದರೂ ಸಹ ಅವನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಹರಕೆ ಸಲ್ಲಿಸಿದ ನಂತರ ಅಹಂಕಾರಪಡಬೇಡಿ.
ಈ ಕ್ರಮಗಳು ಎಲ್ಲಾ ಪೂಜೆಗೂ ಅನ್ವಯ
ಈ ಎಲ್ಲಾ ಕ್ರಮಗಳು ಕೇವಲ ಗಣೇಶ ಚತುರ್ಥಿ (Ganesh Chaturthi) ಗೆ ಅಥವಾ ಗಣೇಶನ ಪೂಜೆಗೆ ಮಾತ್ರ ಅನ್ವಯವಾಗುವುದಲ್ಲ, ಎಲ್ಲಾ ದೇವರ ಪೂಜೆಗೂ ಅದರದ್ದೇ ಆದ ಕ್ರಮಗಳಿದ್ದು, ಅವುಗಳನ್ನು ಅನುಸರಿಸಿದರೆ ಮಾತ್ರ ಫಲ ದೊರಕುತ್ತದೆ. ಶಾಸ್ತ್ರೋಕ್ತವಾದ ಪೂಜಾವಿಧಾನಗಳು ಕೇವಲ ಶಾಸ್ತ್ರಕ್ಕಲ್ಲದೇ, ಅತ್ಯಂತ ಶ್ರದ್ಧೆಯಿಂದ ಆಚರಿಸಿದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾದಂತಹ ಫಲವನ್ನು ಖಂಡಿತಾ ಪಡೆಯಬಹುದು.
ತಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳೊಂದಿಗೆ, ದೇವ ಶ್ರೀ ಗಣೇಶನು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಲಿ ಎಂದು ಪ್ರಾರ್ಥಿಸಿಕೊಳ್ಳೋಣ.