ದೀಪಾವಳಿಯ ನಂತರ ಶನಿ ದೇವನ ಚಲನೆ (Shani Effect) ಬದಲಾಗುವುದರಿಂದಾಗಿ ಹಲವು ರಾಶಿಯವರ ಭವಿಷ್ಯವೂ ಬದಲಾಗಲಿದೆ. ಪ್ರಸ್ತುತ ತನ್ನ ರಾಶಿಚಕ್ರ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ದೇವನು, ದೀಪಾವಳಿಯ ನಂತರ ನವೆಂಬರ್ 15 ರಿಂದ ನೇರವಾಗಿ ಚಲಿಸಲು ಪ್ರಾರಂಭಿಸಲಿದ್ದಾನೆ. ಈ ನೇರ ಚಲನೆಯು ಕುಂಭ ರಾಶಿಯವರಿಗೆ ಮಾತ್ರವಲ್ಲದೇ, ವಿವಿಧ ರಾಶಿಯಗಳವರಿಗೂ ಅದೃಷ್ಟವನ್ನು ತಂದುಕೊಡಲಿದೆ.
ದೀಪಾವಳಿಯ ನಂತರ ಶನಿಯ ನೇರ ಚಲನೆಯ ಪ್ರಭಾವದಿಂದ 5 ರಾಶಿಯವರಿಗೆ ವೈಯಕ್ತಿಕ ಜೀವನದಲ್ಲಿ ಶಾಂತಿ, ವ್ಯವಹಾರದಲ್ಲಿ ಪ್ರಗತಿ ಸೇರಿದಂತ ಹಲವು ಲಾಭಗಳಾಗಲಿವೆ. ಯಾವೆಲ್ಲ ರಾಶಿಯವರಿಗೆ ಶುಭವಾಗಲಿದೆ ಎನ್ನುವುದನ್ನು ನೋಡೋಣ.
ಕುಂಭ ರಾಶಿ
ಪ್ರಸ್ತುತ ಕುಂಭ ರಾಶಿಯಲ್ಲಿ ಶನಿದೇವನು ಹಿಮ್ಮುಖ ಚಲನೆಯಲ್ಲಿರುವುದರಿಂದ, ಈ ರಾಶಿಯವರು ಸಣ್ಣಪುಟ್ಟ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಕೆಲ ವರ್ಷಗಳಿಂದ ಶನಿ ದೇವನಿಂದ ಬಾಧಿತರಾಗಿದ್ದ ಕುಂಭ ರಾಶಿಯವರು ಈಗ ಶನಿ ದೇವನ ಕೃಪೆಗೆ ಒಳಗಾಗಲಿದ್ದಾರೆ. ದೀಪಾವಳಿಯ ನಂತರ ಶನಿದೇವನು ಕುಂಭರಾಶಿಯಲ್ಲಿ ನೇರವಾಗಿ ಚಲಿಸುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ ಅಲ್ಲದೇ, ಅದೃಷ್ಟವನ್ನು ತರಲಿದೆ. ನಿಮ್ಮ ಜಾತಕದಲ್ಲಿ ಶಶ ಯೋಗವು ಸೃಷ್ಠಿಯಾಗುವುದರಿಂದ ನಿಮ್ಮ ವ್ಯಕ್ತಿತ್ವವು ಆಕರ್ಷಣೀಯವಾಗಲಿದೆ, ನಿಮ್ಮ ವಿಶ್ವಾಸ. ಆತ್ಮಸ್ಥೈರ್ಯವೂ ವೃದ್ಧಿಗೊಳ್ಳಲಿದೆ. ನಿಮ್ಮ ವ್ಯಾಪಾರವೂ ವೃದ್ಧಿಸುತ್ತದೆ. ಆದರೆ, ಆರೋಗ್ಯ ವಿಷಯದಲ್ಲಿ ನೀವು ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.
ಕಟಕ ರಾಶಿ
ಕಟಕ ಅಥವಾ ಕರ್ಕಾಟಕ ರಾಶಿಯವರಿಗೆ ದೀಪಾವಳಿಯ ನಂತರದ ಸಮಯವು ಅದೃಷ್ಟವನ್ನು ಹೊತ್ತು ತರಲಿದೆ. ಶನಿ ದೇವರ ನೇರ ಚಲನೆಯ ಪರಿಣಾಮ (Shani Effect) ವೃತ್ತಿ ಜೀವನ, ವ್ಯಾಪಾರ, ಕೌಟುಂಭಿಕ ಸಂಬಂಧಗಳು ಮತ್ತಷ್ಟು ವೃದ್ಧಿಸಲಿವೆ. ನಿಮ್ಮ ಒಡಹುಟ್ಟಿದವರು ನಿಮ್ಮ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಶನಿಯ ಈ ಸಂಕ್ರಮಣವನ್ನು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದ್ದು, ಇದು ನಿಮಗೆ ಜೀವನದಲ್ಲಿ ಸಂತೋಷವನ್ನು, ಸಂತೃಪ್ತಿಯನ್ನು ತರಲಿದೆ.
ಮೇಷ ರಾಶಿ
ಶನಿ ನೇರ ಚಲನೆಯ ಸಂಕ್ರಮಣದಿಂದ ಮೇಷ ರಾಶಿಯವರು ಜೀವನದಲ್ಲಿ ಅದ್ಭುತ ಬದಲಾವಣೆಗಳಾಗಲಿವೆ. ನಿಮ್ಮ ವ್ಯವಹಾರದಲ್ಲಿ ಲಾಭ ಸಿಗುತ್ತದೆ. ದೇಶ, ವಿದೇಶ ಪ್ರವಾಸದ ಯೋಗವು ನಿಮಗಿದೆ. ನಿಮ್ಮ ವ್ಯವಹಾರಕ್ಕೆ ನಿಮ್ಮದೇ ಮನಸ್ಥಿತಿಯ ಹಲವು ಹೂಡಿಕೆದಾರರು ನಿಮ್ಮ ಸೇರುವ ಸಂಭವವಿದೆ. ಅಲ್ಲದೇ, ವೃತ್ತಿನಿರತರಿಗೆ ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ಅಲ್ಲದೇ, ವೃತ್ತಿ ಜೀವನದಲ್ಲಿ ಯಶಸ್ಸು, ಅದೃಷ್ಟ ಸದಾ ನಿಮ್ಮ ಪರವಾಗಿರುತ್ತವೆ.
ಮಕರ ರಾಶಿ
ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಯ ಘಟ್ಟ ಆರಂಭವಾಗಲಿದ್ದು, ಕುಂಭ ರಾಶಿಯಲ್ಲಿನ ಶನಿಯ ನೇರ ಚಲನೆಯಿಂದ ನಿಮ್ಮ ಜೀವನದಲ್ಲಿ ಕೆಲವು ಧನಾತ್ಮಕ ಬದಲಾವಣೆಗಳಾಗಲಿವೆ. ಶನಿ ದೇವನ ಕೃಪೆಯಿಂದಾಗಿ, ಹೆಚ್ಚಿನ ಹಣಕಾಸಿನ ಲಾಭ ನಿಮಗೆ ಆಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಹರಸಿ ಬರಲಿದೆ. ಈ ರಾಶಿಯವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಅದೃಷ್ಟ, ಸಮೃದ್ಧಿ, ಯಶಸ್ಸು ನಿಮ್ಮನ್ನು ಹರಸಿ ಬರಲಿದೆ.
ಕನ್ಯಾ ರಾಶಿ
ಕುಂಭ ರಾಶಿಯಲ್ಲಿನ ಶನಿಯ ನೇರ ಸಂಚಾರದಿಂದ ಕನ್ಯಾ ರಾಶಿಯವರ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಇದರಿಂದಾಗಿ, ಕನ್ಯಾ ರಾಶಿಯವರು ಸಾಲಗಳಿಂದ ಮುಕ್ತರಾಗಲಿದ್ದಾರೆ. ಹಳೆಯ ವ್ಯಾಜ್ಯದಿಂದ ಹಾಗೂ ದೀರ್ಘ ಕಾಲದ ರೋಗ-ರುಜಿನಗಳಿಂದ ನಿಮಗೆ ಮುಕ್ತ ದೊರೆಯಲಿದೆ. ಆಮದು, ರಫ್ತು ಸೇರಿದಂತೆ ಇತರೆ ಹಣಕಾಸಿನ ವ್ಯವಹಾರದಲ್ಲಿರುವವರಿಗೆ ಹೆಚ್ಚಿನ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳೂ ದೀಪಾವಳಿಯ ನಂತರ ಪರಿಹಾರ ಕಾಣಲಿವೆ. ನಿಮ್ಮ ಮನೆಗೆ ವಿವಿಧ ರೀತಿಯ ಸಂಪನ್ಮೂಲಗಳು ಹರಿದು ಬರಲಿವೆ.
ದೀಪಾವಳಿಯ ನಂತರ ಶನಿಯ ಪ್ರಭಾವದಿಂದ (Shani Effect) ಹಲವು ರಾಶಿಯವರಿಗೆ ಒಳಿತನ್ನು ಮಾಡಲಿದೆ. ಹಾಗೆಯೇ, ಈ ಸಮಯದಲ್ಲಿ ಬೇರೆ-ಬೇರೆ ಗ್ರಹಗತಿಗಳ ಸಂಚಾರ ಬದಲಾಗುವುದರಿಂದ, ಅವುಗಳ ಸಂಚಾರದಿಂದ ಆಗುವ ಲಾಭ-ನಷ್ಟಗಳೇನು ಎನ್ನುವುದೇನು ಮುಂದೆ ನೋಡೋಣ. ಜಾತಕ ಫಲದ ವಿಶೇಷ ವರದಿಗಳಿಗಾಗಿ ಕರ್ನಾಟಕ ಡೈಲಿ ನ್ಯೂಸ್ ವೆಬ್ಸೈಟ್ ಜಾಲತಾಣವನ್ನು ತಪ್ಪದೇ ವೀಕ್ಷಿಸುತ್ತಿರಿ.