ಸೆಪ್ಟೆಂಬರ್ 27 ಅನ್ನು ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವೆಂದು (World Tourism Day) ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಜನರಲ್ಲಿ ಪ್ರವಾಸಿ ಹವ್ಯಾಸವನ್ನು ಹೆಚ್ಚಿಸುವುದು ಹಾಗೂ ಪ್ರವಾಸಿ ಸ್ಥಳಗಳ ಸಂರಕ್ಷಣೆ, ಸ್ವಚ್ಛತೆ, ಪ್ರಚಾರಕ್ಕಾಗಿ ಈ ದಿನವನ್ನು ವಿಶ್ವ ಪ್ರವಾಸೋದ್ಯಮ ದಿನವೆಂದು ಆಚರಿಸಲಾಗುತ್ತದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರತಿ ವರ್ಷವೂ ದಾಪುಗಾಲಿಟ್ಟು ಸಾಗುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ʼಒಂದು ರಾಜ್ಯ ಹಲವು ಜಗತ್ತುʼ ಎನ್ನುವ ಟ್ಯಾಗ್ ಲೈನ್ ಸಮಸ್ತ ಕರ್ನಾಟಕದ ಪ್ರವಾಸೋದ್ಯಮನ್ನೇ ಇಡಿದಿಟ್ಟಿದೆ. ರಾಜ್ಯದಲ್ಲಿ ಪ್ರಾಕೃತಿಕ ಸೊಬಗಿನ ತಾಣಗಳು (Karnataka Tourist Places), ಐತಿಹಾಸಿಕ ಪರಂಪರೆಯ ತಾಣಗಳು, ಕೋಟೆಗಳು, ಅರಣ್ಯ ಪ್ರದೇಶ, ಪಕ್ಷಿಧಾಮಗಳು, ಇಂಜಿನಿಯರಿಂಗ್ ಅದ್ಭುತಗಳನ್ನು ಒಳಗೊಂಡಂತೆ ಹತ್ತು-ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು.
ಕರ್ನಾಟಕ ಬೀದರ್ನಿಂದ ಚಾಮರಾಜನಗರದವವರೆಗೆ ಹಾಗೂ ಮಂಗಳೂರಿನಿಂದ ಕೋಲಾರದವರೆಗೆ ನೂರಾರು ಪ್ರವಾಸಿ ಸ್ಥಳಗಳಿವೆ. ಆಗುಂಬೆಯ ಪಾಕೃತಿಕ ಸೊಬಗಿನ ತಾಣದಿಂದ ಹಂಪೆಯ ಕಲ್ಲಿನ ರಥದವರೆಗಿನ ಎಲ್ಲವೂ ಅಮೋಘ, ಅವಿಸ್ಮರಣೀಯ, ಅನನ್ಯವಾದವು. ಸಮೃದ್ಧ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ರಾಜ್ಯ ಅತ್ಯಂತ 20 ಪ್ರಮುಖ ಸ್ಥಳಗಳಲ್ಲಿ ವೀಕ್ಷಿಸಬಹುದಾದ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
Karnataka Tourist Places – ಪ್ರಮುಖ ಪ್ರವಾಸಿ ಸ್ಥಳಗಳು :
1) ಮುರುಡೇಶ್ವರ (Murudeshwara) :
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಕರ್ನಾಟಕದ ಜನಾಕರ್ಷಣೆಯ ಪ್ರವಾಸಿ ತಾಣವಾಗಿದೆ. ಸಮುದ್ರ ತಣದಲ್ಲಿ ಸಾಕ್ಷಾತ್ ಶಿವನೇ ಆಸಿನರಾದಂತಿರುವ ವಿಶ್ವದ ಎರಡನೇ ಅತಿದೊಡ್ಡ ಪ್ರತಿಮೆ ಇಲ್ಲಿದೆ. ಶಿವನ ಮೂರ್ತಿಯ ಎತ್ತರ ಬರೋಬ್ಬರಿ 123 ಅಡಿಗಳಷ್ಟಿದೆ. ಅಲ್ಲದೇ, ಪುರಾತನ ಮುರುಡೇಶ್ವರ ದೇವಾಲಯ ಇಲ್ಲಿ ಪೂಜ್ಯನೀಯ ಹಾಗೂ ಪ್ರೇಕ್ಷಣಿಯ ಸ್ಥಳವಾಗಿದೆ. ಇವೆರಡು ಪ್ರಮುಖ ಪ್ರವಾಸಿ ತಾಣಗಳೊಂದಿಗೆ, ಮುರುಡೇಶ್ವರ ಬೀಚ್, ಮುರುಡೇಶ್ವರ ಕೋಟೆ, ಮುರುಡೇಶ್ವರ ಐಸ್ಲ್ಯಾಂಡ್ ಹಾಗೂ ಭಟ್ಕಳ್ ಬೀಚ್ಗಳನ್ನು ಇಲ್ಲಿ ನೋಡಬಹುದಾಗಿದೆ.
2) ಬೆಂಗಳೂರು (Bengaluru) :
ಭಾರತದ ಸಿಲಿಕಾನ್ ಸಿಟಿ ಎಂದೇ ಕ್ಯಾತಿ ಪಡೆದಿರುವ ಬೆಂಗಳೂರು ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ಪ್ರಮುಖವಾಗಿ ನೀವು ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು ಅರಮನೆ, ಇಸ್ಕಾನ್ ದೇವಸ್ಥಾನ, ಲಾಲ್ ಬಾಗ್, ಕಬ್ಬನ್ ಪಾರ್ಕ್, ವಂಡರ್ ಲಾ, ಸ್ನೋ ಸಿಟಿ ಸೇರಿದಂತೆ ಹಲವಾರು ಶಾಪಿಂಗ್ ಮಾಲ್ ಗಳನ್ನು ನೋಡಬಹುದು. ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ, ಆದಿಯೋಗಿ ಪ್ರತಿಮೆಗಳನ್ನು ವೀಕ್ಷಣೆ ಮಾಡಬಹುದು.
3) ಚಿಕ್ಕಮಂಗಳೂರು (Chikkamangaluru) :
ಚಿಕ್ಕಮಂಗಳೂರು ರಾಜ್ಯದ ಪ್ರಕೃತಿ ಸೊಬಗಿನ ಜಿಲ್ಲೆ. ಇದನ್ನು ರಾಜ್ಯದ ಕಾಫಿ ಭೂಮಿ ಎಂದೇ ಕರೆಯಲಾಗುತ್ತದೆ. ನೀವು ಇಲ್ಲಿ ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ವನ್ಯಜೀವಿ ಅಭಯಾರಣ್ಯ, ಹೆಬ್ಬೆ ಫಾಲ್ಸ್ ಗಳ ವೀಕ್ಷಣೆ ಮಾಡಬಹುದು.
4) ಮೈಸೂರು (Mysuru) :
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ರಾಜರ ನಗರ ಎಂತಲೂ ಪ್ರಸಿದ್ಧಿ. ಮೈಸೂರು ಮಹಾರಾಜರ ಅರಮನೆ, ದಸರಾ, ಮೈಸೂರು ಪಾಕ್ ಹಾಗೂ ಮೈಸೂರು ರೇಶ್ಮೆ ಬಟ್ಟೆ ಅತ್ಯಂತ ಪ್ರಸಿದ್ಧಿ ಪಡೆದಿವೆ. ನೀವು ಇಲ್ಲಿ ಮೈಸೂರು ಅರಮನೆ, ಕನ್ನಂಬಾಡಿ ಆಣೆಕಟ್ಟೆಯ ಬೃಂದಾವನ ಗಾರ್ಡನ್, ಮೈಸೂರು ವನ್ಯಜೀವಿ ಸಂಗ್ರಹಾಲಯ, ಸೋಮನಾಥಪುರ ದೇವಸ್ಥಾನ, ಸುಖ ವನಗಳನ್ನು ವೀಕ್ಷಣೆ ಮಾಡಬಹುದಾಗಿದೆ.
5) ಬೇಲೂರು (Beluru) :
ಬೇಲೂರನ್ನು ಕರ್ನಾಟಕ ಶಿಲ್ಪಕಲೆಗಳ ನಗರಿ ಎಂತಲೇ ಕರೆಯಬಹುದು. ಹೊಯ್ಸಳ ವಂಶದ ಆಡಳಿತಾವಧಿಯಲ್ಲಿ ಇಲ್ಲಿ ಅತ್ಯಂತ ಸುಂದರವಾದ ದೇವಾಲಯಗಳ ಕೆತ್ತನೆ ಮಾಡಲಾಗಿದೆ. ಇಲ್ಲಿನ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. ನೀವು ಇಲ್ಲಿ ಪ್ರಮುಖವಾಗಿ, ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ವೀರ ನಾರಾಯಣ ದೇವಸ್ಥಾನ, ಕಪ್ಪೆ ಚೆನ್ನಿಗರಾಯ ದೇವಸ್ಥಾನ, ಗ್ರಾವಿಟಿ ಪಿಲ್ಲರ್ ಗಳನ್ನು ವೀಕ್ಷಣೆ ಮಾಡಬಹುದು.
6) ಉಡುಪಿ (Udupi) :
ಕರ್ನಾಟಕದ ಕೃಷ್ಣ ನಗರಿ ಹಾಗೂ ಬೀಚ್ಗಳ ನಗರಿ ಉಡುಪಿ. ಇಲ್ಲಿ ಅದ್ಭುತವಾದ ಕಡಲ ತೀರಗಳು, ಕಾಡುಗಳು ಹಾಗೂ ಪ್ರಾಚೀನ ದೇವಾಲಯಗಳ ವೀಕ್ಷಣೆ ಮಾಡಬಹುದು. ಪ್ರಮುಖ ಪ್ರವಾಸಿ ತಾಣಗಳು, ಮಲ್ಫೆ ಬೀಷ್, ಸೇಂಟ್ ಮೇರೀಸ್ ಬೀಚ್, ಶ್ರೀಕೃಷ್ಣ ದೇವಾಲಯ, ಡೆಲ್ಟಾ ಬೀಚ್, ಕಾಪ್ ಬೀಚ್, ಹಾಗೂ ಮಣಿಪಾಲ.
7) ಶ್ರೀರಂಗಪಟ್ಟಣ (Srirangapattana) :
ನೀವು ಮೈಸೂರಿಗೆ ಪ್ರವಾಸಕ್ಕೆ ಹೋದಾಗ ಪಕ್ಕದ ಶ್ರೀರಂಗಪಟ್ಟಣಕ್ಕೂ ಹೋಗಿ ಬರಲೇಬೇಕು. ಕಾವೇರಿ ನದಿಯ ತಟದಲ್ಲಿರುವ ಈ ನಗರವು ಟಿಪ್ಪು ಸುಲ್ತಾನ್ ಅವರ ರಾಜಧಾನಿಯಾಗಿತ್ತು. ಈ ನಗರದಲ್ಲಿ ನೀವು, ನಿಮಿಷಾಂಭ ದೇವಾಲಯ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಟಿಪ್ಪು ಸುಲ್ತಾನ್ ಕೋಟೆ, ಬಲಮುರಿ ಜಲಪಾತ, ದರಿಯಾ ದೌಲತ್ ಬಾಗ್, ರಂಗನತಿಟ್ಟು ಪಕ್ಷಿಧಾಮಗಳ ವೀಕ್ಷಣೆ ಮಾಡಬಹುದು.
8) ಶಿವಮೊಗ್ಗ (Shivamogga) :
ಜಲಪಾತಗಳ ನಗರಿ ಶಿವಮೊಗ್ಗವು ಅದ್ಭುತವಾದ ಜಲಪಾತಗಳನ್ನು ಹಾಗೂ ರಮಣೀಯ ಭೂದೃಶ್ಯಗಳನ್ನು ಒಳಗೊಂಡಿದೆ. ಇಲ್ಲಿನ ವಾತಾವರಣ ವರ್ಷವಿಡೀ ಅಹ್ಲಾದಕರವಾಗಿರುತ್ತದೆ. ನೀವು ಇಲ್ಲಿ, ಕೊಡಚಾದ್ರಿ, ಜೋಗ ಜಲಪಾತ, ಕೆಳದಿ, ಭದ್ರಾ ನದಿ ಅಣೆಕಟ್ಟು, ಆಗುಂಬೆ, ದಬ್ಬೆ ಜಲಪಾತ, ಗುಡವಿ ಪಕ್ಷಿಧಾಮ, ಸಕ್ರೆಬೈಲು ಆನೆ ಶಿಬಿರದಲ್ಲಿ ಆನೆಗಳ ವೀಕ್ಷಣೆ ಮಾಡಬಹುದು.
9) ಶ್ರವಣಬೆಳಗೊಳ (ShravanBelagola) :
ರಾಜ್ಯದ ಶ್ರವಣಬೆಳಗೋಳವು ಜೈನ ಧರ್ಮವನ್ನು ಅನುಸರಿಸುವವರ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. 57 ಮೀಟರ್ ಎತ್ತರದ ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆಯನ್ನು ನೀವು ನೋಡಬಹುದು. ಹಾಗೆಯೇ, ಗೊಮ್ಮಟೇಶ್ವರ ಬಾಹುಬಲಿ ದೇವಸ್ಥಾನ, ಭಂಡಾರಿ ಬಸದಿ ದೇವಸ್ಥಾನ, ಚಂದ್ರಗಿರಿ ಬೆಟ್ಟದ ದೇವಾಲಯ, ವಿಂಧ್ಯಗಿರಿ ದೇವಾಲಯ, ಅಕ್ಕನ ಬಸದಿ ದೇವಸ್ಥಾನ, ಜೈನ ಮಠ, ಬೆಳಗೊಳ ಕೊಳ ಪ್ರವಾಸಿ ತಾಣಗಳ ಭೇಟಿ ಮಾಡಬಹುದು.
10) ದಾಂಡೇಲಿ (Dandeli) :
ನದಿಯಲ್ಲಿ ರಿವರ್ ರಾಫ್ಟಿಂಗ್ ಮೋಜು ಅನುಭವಿಸಲು ಹಾಗೂ ಟ್ರೆಕ್ಕಿಂಗ್ ಮಾಡಲು ದಾಂಡೇಲಿ ಸೂಕ್ತ ಸ್ಥಳವಾಗಿದೆ. ಸಮೃದ್ಧ ಹಾಗೂ ಹಚ್ಚ ಹಸಿರಿನ ಕಾಡಿನ ಪ್ರಾಕೃತಿಕ ಸೌಂದರ್ಯದಿಂದಾಗಿ ಈ ಸ್ಥಳವೂ ಹೆಚ್ಚುಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನೀವು ಇಲ್ಲಿ ಕಾಳಿ ನದಿಯಲ್ಲಿ ದೋಣಿ ವಿಹಾರ, ರಿವರ್ ರಾಪ್ಟಿಂಗ್ ಮಾಡಬಹುದು. ಅಲ್ಲದೇ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಉಳವಿ ದೇವಸ್ಥಾನ, ಮೌಲಂಗಿ ಜಲಪಾತ, ಮಾಗೋಡು ಜಲಪಾತ, ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಕವಾಲಾ ಗುಹೆಗಳ ವೀಕ್ಷಣೆ ಮಾಡಬಹುದು.
11) ಬಾದಾಮಿ (Badami) :
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳ. ಇಲ್ಲಿನ ಗುಹಾಂತರ ದೇವಾಲಯಗಳನ್ನು ವೀಕ್ಷಿಸಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬಾದಾಮಿ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಮಾರಕಗಳ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿನ ಪ್ರಮುಖ ಸ್ಥಳಗಳು, ಗುಹಾಂತರ ದೇವಾಲಯಗಳು, ಅಗಸ್ತ್ಯ ಸರೋವರ, ಬಾದಾಮಿ ಕೋಟೆ ಹಾಗೂ ಹತ್ತಿರದ ಐಹೊಳೆ, ಪಟ್ಟದಕಲ್ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ.
12) ಬಿಜಾಪುರ (Bijapura) :
ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯದಿಂದ ಬಹುಮನಿ ಸುಲ್ತಾನರ ಆಡಳಿತದವರೆಗೆ ಇಲ್ಲಿ ಹಲವು ಕುರುಹುಗಳಿವೆ. ಪ್ರಾಚೀನ ಕಾಲದಲ್ಲಿ ಈ ನಗರವನ್ನು ವಿಜಯಪುರ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಗಗನ್ ಮಹಲ್, ಶಿವನ ಮೂರ್ತಿಯನ್ನು ವೀಕ್ಷಣೆ ಮಾಡಬಹುದಾಗಿದೆ.
13) ಹಂಪಿ (Hampi) :
ವಿಜಯನಗರ ಸಾಮ್ರಾಜ್ಯದ ರಾಜಧಾನಿ, 15ನೇ ಶತಮಾನದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ನಗರಿಯಾಗಿದ್ದ ಹಂಪೆಯು ಇಂದು ಭಗ್ನಗೊಂಡ ಅವಶೇಷಗಳಿಂದ ಕೂಡಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಹಂಪೆಯನ್ನು ಸೇರಿಸಲಾಗಿದ್ದು, ಇದು ರಾಜ್ಯದ ಅತ್ಯಂತ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿದೆ. ನೀವು ಹಂಪೆಯಲ್ಲಿ ಪ್ರಮುಖವಾಗಿ ವಿರೂಪಾಕ್ಷ ದೇವಾಲಯ, ವಿಠಲ ದೇವಸ್ಥಾನ, ಕಲ್ಲಿನ ರಥ, ಹತ್ತಿರದ ಆನೆಗುಂದಿಯಲ್ಲಿ ಶ್ರೀ ಆಂಜನೇಯ ಜನಿಸಿದ ಸ್ಥಳವಾದ ಆಂಜನಾದ್ರಿ, ಆಂಜನೇಯ ಹಾಗೂ ಶ್ರೀರಾಮ ಭೆಟಿಯಾಗಿದ್ದರೆನ್ನಲಾದ ಪಂಪಾ ಸರೋವರ ಹಾಗೂ ಹತ್ತಿರದ ಹೊಸಪೇಟೆಯಲ್ಲಿ ತುಂಗಭದ್ರಾನದಿ ಆಣೆಕಟ್ಟನ್ನು ನೋಡಬಹುದಾಗಿದೆ.
14) ಮಡಿಕೇರಿ (Madikeri) :
ಕರ್ನಾಟಕದ ಕೊಡುಗು ಜಿಲ್ಲೆಯ ಮಡಿಕೇರಿ ಗಿರಿಧಾಮಗಳನ್ನೇ ಹಾಸುಹೊದ್ದಿರುವ ನಗರವಾಗಿದೆ. ಇಲ್ಲಿನ ಪ್ರಮುಖ ನಗರಗಳನ್ನು ಗಿರಿಧಾಮಗಳಲ್ಲೇ ನಿರ್ಮಿಸಿದಂತಿವೆ. ಸ್ವಲ್ಪದಿನಗಳ ಕಾಲ ವಿರಾಮ ಪಡೆದು ವಿಶ್ರಾಂತಿ ಪಡೆಯಬೇಕೆಂದಿದ್ದರೆ ನೀವು ಮಡಿಕೇರಿ, ಕುಶಾಲನಗರ ಸೇರಿದಂತೆ ಪ್ರಮುಖ ನಗರಗಳಿಗೆ ಭೇಟಿ ನೀಡಬಹುದು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಅಬ್ಬೆ ಪಾಲ್ಸ್, ಕಾಫಿ ತೋಟಗಳು, ಇರುಪ್ಪು ಜಲಪಾತ, ತಲಕಾವೇರಿಗೆ ಭೇಟಿ ನೀಡಬಹುದು.
15) ಗೋಕರ್ಣ (Gokarna) :
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣವು ಹಿಂದೂ ಪೂಜಾ ಸ್ಥಳವಾಗಿದೆ. ಇಲ್ಲಿಗೆ ಸಾವಿರಾರು ಯಾತ್ರಿಕರು ಆಗಮಿಸುತ್ತಾರೆ. ಅಲ್ಲದೇ, ಬೀಚ್ ಗಳಿಗಾಗಿ ಗೋಕರ್ಣ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳು, ಮಹಾಬಲೇಶ್ವರ ದೇವಸ್ಥಾನ, ಓಂ ಬೀಚ್, ಪ್ಯಾರಡೈಸ್ ಬೀಚ್, ಕುಡ್ಲೆ ಬೀಚ್,
16) ಚಿತ್ರದುರ್ಗ (Chitradurga) :
ಕರ್ನಾಟಕ ಕೋಟೆ ನಗರಿ ಚಿತ್ರದುರ್ಗಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ನೀವು ಇಲ್ಲಿ, ಚಿತ್ರದುರ್ಗ ಕೋಟೆ, ಗಾಯತ್ರಿ ಜಲಶಾಯ, ಹಿಮವದ್ ಕೇದಾಯ, ಅಂಕಲಿಮಠ, ವಾಣಿ ವಿಲಾಸ ಸಾಗರ್ ಅಣೆಕಟ್ಟುಗಳನ್ನು ವೀಕ್ಷಿಸಬಹುದು.
17) ಸಕಲೇಶಪುರ (Sakaleshapura) :
ಹಾಸನ ಜಿಲ್ಲೆಯ ಸಕಲೇಶಪುರವು ನಿಮ್ಮ ಪ್ರವಾಸಕ್ಕೆ ಆಹ್ಲಾದಕತೆಯನ್ನು, ಪ್ರಕೃತಿಯ ರುದ್ರರಮಣೀಯತೆಯನ್ನು ಅನುಭವಿಸಬಹುದು. ಸಕಲೇಶಪುರವು ಟ್ರೆಕ್ಕಿಂಗ್ ನಂತಹ ಚಟುವಟಿಕೆಗಳಿಗೆ ಅತ್ಯಂತ ಸೂಕ್ತವಾಗಿದೆ. ನೀವು ಇಲ್ಲಿ, ಅಗ್ನಿ ಗುಡ್ಡ ಬೆಟ್ಟ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಬಿಸ್ಲೆ ಮೀಸಲು ಅರಣ್ಯ, ಮಂಜೇಹಳ್ಳಿ ಜಲಪಾತ, ಸಕಲೇಶ್ವರ ದೇವಸ್ಥಾನ ಹಾಗೂ ಹೇಮಾವತಿ ಅಣೆಕಟ್ಟೆಗೆ ಭೇಟಿ ನೀಡಬಹುದು.
18) ಚಾಮರಾಜನಗರ (Chamarajanagara) :
ಕರ್ನಾಟಕದ ಚಾಮರಾಜನಗರವು ಹಲವು ಗಿರಿಧಾಮ ಹಾಗೂ ದೇವಾಲಯಯಗಳಿಂದ ಪ್ರಸಿದ್ಧವಾಗಿದೆ. ನೀವು ಇಲ್ಲಿ, ಮಲೆಮಹದೇಶ್ವರ ಬೆಟ್ಟ, ಬಂಡಿಪುರ ರಾಷ್ಟ್ರೀಯ ಉದ್ಯಾನವನ, ಶಿವನಸಮುದ್ರ, ಗಗನಚುಕ್ಕಿ-ಭರಚುಕ್ಕಿ, ಬಿಳಿಗಿರಿರಂಗನಾಥ ದೇವಸ್ಥಾನ, ಬೃಹದೀಶ್ವರ ದೇವಸ್ಥಾನ, ಹೊಗೆನಕಲ್ ಪಾಲ್ಸ್ ಗಳ ವೀಕ್ಷಣೆ ಮಾಡಬಹುದು.
19) ಮಂಗಳೂರು (mangaluru) :
ಮಂಗಳೂರು ನಗರವೂ ರಾಜ್ಯದ ಪ್ರವಾಸಿ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ನಗರ. ಬಂದರು ನಗರಿ ಮಂಗಳೂರನ್ನು ಹಾಗೂ ಇಲ್ಲಿನ ಬೀಚ್ ಗಳ ಸೌಂದರ್ಯವನ್ನು ಎಲ್ಲರೂ ನೋಡಲೇಬೇಕು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಪಣಂಬೂರು ಬೀಚ್, ಕುದ್ರೋಳಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಕದ್ರಿ ಪಾರ್ಕ್ ಸೇರಿದಂತೆ ಇನ್ನಿತರೆ ಸ್ಥಳಗಳ ವೀಕ್ಷಣೆ ಮಾಡಬಹುದು.
20) ಕೋಲಾರ (Kolara)
ಕರ್ನಾಟಕದ ಚಿನ್ನದ ನಗರಿ ಕೋಲಾರವೂ ನಿಮ್ಮ ಪ್ರವಾಸದ ಪಟ್ಟಿಯಲ್ಲಿರಲಿ. ನೀವು ಇಲ್ಲಿ ಈ ಹಿಂದೆ ಚಿನ್ನ ಉತ್ಪಾದಿಸಲಾಗುತ್ತದೆ ಕೆಜಿಎಫ್ ಅನ್ನು, ಕೋಲಾರಮ್ಮ ದೇವಸ್ಥಾನ, ಕೋಟಿಲಿಂಗೇಶ್ವರ ದೇವಸ್ಥಾನ, ಸೋಮಲಿಂಗೇಶ್ವರ ದೇವಸ್ಥಾನ ಹಾಗೂ ಅಂತರಗಂಗೆ ಸ್ಥಳಗಳ ವೀಕ್ಷಣೆ ಮಾಡಬಹುದು.
ಈ ಮೇಲಿನ 20 ಪ್ರಮುಖ ಪ್ರವಾಸಿ ತಾಣಗಳ ತಾಣಗಳು (Karnataka Tourist Places) ಜೊತೆಜೊತೆ ಸುತ್ತಮುತ್ತಲೂ ನೀವು ನೋಡಬಹುದಾದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒದಗಿಸಲಾಗಿದೆ. ಬಹುತೇಕ ರಾಜ್ಯ ಎಲ್ಲಾ ಪ್ರಮುಖ ಪ್ರೇಕ್ಷಣೀಯವಾದ ಸ್ಥಳಗಳು, ಐತಿಹಾಸಿಕ ಸ್ಥಳಗಳು, ಪ್ರಾಕೃತಿಕ ಸೊಬಗಿನ ಸ್ಥಳಗಳು, ಬೀಚ್ಗಳು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳ ಪಟ್ಟಿ ಒದಗಿಸಲಾಗಿದೆ. ವಿಶ್ವ ಪ್ರವಾಸೋದ್ಯಮ ದಿನದಂದು (World Tourism Day) ಈ ಎಲ್ಲಾ ವಿವರವನ್ನೂ ನೀವು ಓದಿದ ನಂತರ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ. ಪ್ರತಿಕ್ಷಣದ ಸುದ್ದಿಗಳಿಗಾಗಿ ಕರ್ನಾಟಕ ಡೈಲಿ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.