ಇನ್ನೇನು ಹಬ್ಬಗಳ ಸೀಸನ್ ಆರಂಭವಾಗಿದೆ. ಎಲ್ಲೆಡೆ ಖರೀದಿಯ ಭರಾಟೆ ಜೋರಾಗಿದ್ದರೆ, ಹಲವು ವ್ಯಾಪಾರ ಸಂಸ್ಥೆಗಳು, ಇಲೆಕ್ಟ್ರಾನಿಕ್ಸ್, ಬಟ್ಟೆ ಅಂಗಡಿ ಹಾಗೂ ಇತರ ಸ್ಟೋರ್ಗಳಲ್ಲಿ ಭರಪೂರ ಸ್ಟಾಕ್ ತುಂಬಿದೆ. ಇದೀಗ ದಸರಾ ಆಫರ್ ನಡೆಯುತ್ತಿದ್ದು, ವಾಹನಗಳ ಖರೀದಿಯ ಮೇಲೂ ಕಂಪನಿಗಳು ಭರ್ಜರಿ ಆಫರ್ ನೀಡುತ್ತಿವೆ. ಅಂತೆಯೇ ದಿಗ್ಗಜ ವಾಹನ ತಯಾರಿಕಾ ಕಂಪನಿ ಹೋಂಡಾ (Honda Cars), ದೀಪಾವಳಿಗೆ ಆಕರ್ಷಕ ಆಫರ್ (Diwali Offers) ನೀಡಿದ್ದು, ವಾಹನ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದಂತಾಗಿದೆ.
ಹೌದು. ಭಾರತದಲ್ಲಿ ತನ್ನ ದ್ವಿಚಕ್ರ ಹಾಗೂ ಕಾರು ತಯಾರಿಕೆಯಲ್ಲಿ ಬಹಳ ಸೇಲ್ಸ್ ಹೊಂದಿರುವ ಹೋಂಡಾ ಕಂಪನಿ, ತನ್ನ ನೂತನ ಕಾರುಗಳ ಮೇಲೆ ದೀಪಾವಳಿಗೆ ಸಖತ್ ಆಫರ್ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ವಿನ್ಯಾಸ ಹಾಗೂ ಫೀಚರ್ಸ್ಗಳಿಂದ ತನ್ನದೇ ಆದ ಗ್ರಾಹಕರನು ಹೊಂದಿರುವ ಹೋಂಡಾ, ಯಾವೆಲ್ಲಾ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ ಹಾಗೂ ಡಿಸ್ಕೌಂಟ್ ಮೌಲ್ಯ ಎಷ್ಟು? ಈ ಎಲ್ಲಾ ವಿವರಗಳನ್ನು ಹೇಳ್ತೀವಿ ನೋಡಿ.
Diwali Offers: ಹೋಂಡಾದ ಈ ಕಾರುಗಳ ಮೇಲೆ ಬಿಗ್ ಡಿಸ್ಕೌಂಟ್ ಆಫರ್
- ಹೋಂಡಾ ಸಿಟಿ (Honda City)
ಹೋಂಡಾ ಕಾರುಗಳಲ್ಲೇ ಅತ್ಯಂತ ಜನಪ್ರಿಯವಾಗಿರುವ ಹೋಂಡಾ ಸಿಟಿಯ ನೂತನ ವೇರಿಯಂಟ್ Honda City 5th Gen ಕಾರಿಗೆ ಬರೋಬ್ಬರಿ ಡಿಸ್ಕೌಂಟ್ನ್ನು ಹೋಂಡಾ ನೀಡಿದೆ. ಉತ್ತಮ ರಿಸೇಲ್ ವ್ಯಾಲ್ಯೂ ಹೊಂದಿರುವ ಹೋಂಡಾ ಸಿಟಿ ಕಾರಿಗೆ ಈ ಬಾರಿ ದೀಪಾವಳಿಯಲ್ಲಿ ಸರಿಸುಮಾರು ₹1.1 ಲಕ್ಷಕ್ಕೂ ಮಿಕ್ಕಿ ಡಿಸ್ಕೌಂಟ್ ಆಫರ್ (Diwali Offers) ಗಳನ್ನು ಹೋಂಡಾ ನೀಡಿದೆ. ₹12.08 ಲಕ್ಷದಿಂದ ಆರಂಭವಾಗುವ ಹೋಂಡಾ ಸಿಟಿ ಬೆಲೆಯ ರೇಂಜ್ ₹13 ಲಕ್ಷದವರೆಗೂ ತಲುಪಲಿದೆ.
- ಹೋಂಡಾ ಸಿಟಿ ಹೈಬ್ರಿಡ್ ಇಲೆಕ್ಟ್ರಿಕ್ ವೆಹಿಕಲ್ (Honda City e: HEV)
ಹೋಂಡಾ ಲಾಂಚ್ ಮಾಡಿದ ಫ್ಲಾಗ್ ಶಿಪ್ ಹೈಬ್ರಿಡ್ ಕಾರು ಹೋಂಡಾ ಸಿಟಿ ಎ:ಹೆಚ್ಇವಿ, ಪೆಟ್ರೋಲ್ ಹಾಗೂ ಇಲೆಕ್ಟ್ರಿಕ್ ಎರಡೂ ಇಂಜಿನ್ಗಳನ್ನು ಹೊಂದಿರುವ ಹೈಬ್ರಿಡ್ ಕಾರ್ ಆಗಿದ್ದು, ಈ ಕಾರಿನ ಮೇಲೆ ಸರಿಸುಮಾರು ₹90,000 ದಷ್ಟು ಡಿಸ್ಕೌಂಟ್ನ್ನು (Diwali Offers) ಹೋಂಡಾ ಘೋಷಿಸಿದೆ.
ಈ ಕಾರಿನ ಬೆಲೆ ₹19 ಲಕ್ಷದವರೆಗೂ ಇರಲಿದ್ದು, ಹೈಬ್ರಿಡ್ ಇಂಜಿನ್ ಪ್ರಿಯರಿಗೆ ಈ ಡಿಸ್ಕೌಂಟ್ ಮೂಲಕ ಖರೀದಿಸುವ ಅವಕಾಶ ದೊರೆಯಲಿದೆ.
- ಹೋಂಡಾ ಅಮೇಜ್ (Honda Amaze)
ಹೋಂಡಾ ತನ್ನ ಅಮೇಜ್ ಲೈನ್ಅಪ್ನ ಎಲ್ಲ ವೇರಿಯಂಟ್ಗಳ ಮೇಲೆ ಸಖತ್ ದೀಪಾವಳಿ ಆಫರ್ (Diwali Offers) ನ್ನು ಘೋಷಿಸಿದೆ. ಅಮೇಜ್ ನ ವೇರಿಯಂಟ್ಗಳಾದ ವಿಎಕ್ಸ್, ವಿಎಕ್ಸ್ ಎಲೈಟ್ ಹಾಗೂ ಇತರ ವೇರಿಯಂಟ್ಗಳ ಮೇಲೆ ಸರಿಸುಮಾರು ₹1.12 ಲಕ್ಷ ಕ್ಕೂ ಮಿಕ್ಕಿ ಡಿಸ್ಕೌಂಟ್ ಆಫರ್ ನೀಡಿದೆ. ಇನ್ನೇನು ಹೋಂಡಾ ಅಮೇಜ಼್ನ Next-Gen ವೇರಿಯಂಟ್ ಮಾರ್ಕೆಟ್ಗೆ ಬರಲು ಸಜ್ಜಾಗಿದ್ದು, ಈ ನಡುವೆಯೇ ಹೋಂಡಾ ಸಖತ್ ಆಫರ್ ನೀಡಿದೆ.
- ಹೋಂಡಾ ಎಲೆವೇಟ್ (Honda Elevate)
ಹೋಂಡಾದ ಇನ್ನೊಂದು ಅತಿ ಹೆಚ್ಚು ಜನಪ್ರಿಯ ಕಾರು ಹೋಂಡಾ ಎಲೆವೇಟ್, ತನ್ನ ಅಪೆಕ್ಸ್ (Apex) ಎಡಿಷನ್ನಲ್ಲಿ ಸಖತ್ ಸೇಲ್ಸ್ ಕಂಡಿದೆ. ಈ ಕಾರಿನ ಮೇಲೆ ಸರಿಸುಮಾರು ₹ 75000 ಕ್ಕೂ ಮಿಕ್ಕಿ ಡಿಸ್ಕೌಂಟ್ ಆಫರ್ಗಳನ್ನು ಹೋಂಡಾ ನೀಡುತ್ತಿದ್ದು, ಇದರ ಬೆಲೆ ₹11.90 ಲಕ್ಷದಿಂದ ಆರಂಭವಾಗಲಿದೆ.
ನಿಮಗೆ ದೊರೆಯಲಿದೆ 7 ವರ್ಷ Extended warranty ಆಫರ್!
ಇಷ್ಟೇ ಅಲ್ಲದೇ, ಹೋಂಡಾ ತನ್ನ ಎಲ್ಲಾ ಕಾರುಗಳ ಮೇಲೆ 7 ವರ್ಷಗಳ ವಿಸ್ತರಿತ ವಾರಂಟಿ (Extended Warranty) ಯನ್ನು ನೀಡುತ್ತಿದ್ದು, ಗ್ರಾಹಕರಿಗೆ ದೀಪಾವಳಿಯಲ್ಲಿ ಭರ್ಜರಿ ಉಳಿತಾಯವಾಗುವಂತೆ ಆಫರ್ ಘೋಷಿಸಿದೆ. ಅಷ್ಟೇ ಅಲ್ಲದೇ, ತನ್ನ ಅತ್ಯುತ್ತಮ ಸರ್ವಿಸ್ನಿಂದಲೂ ಗ್ರಾಹಕರ ಮೆಚ್ಚುಗೆ ಪಡೆದಿರುವ ಹೋಂಡಾ, ಈ ಬಾರಿ ದೀಪಾವಳಿಗೆ ಭರ್ಜರಿ ಸೇಲ್ ಕಾಣುವುದಂತೂ ಖಚಿತ.