ಕಾರುಗಳ ಮಾದರಿಯಲ್ಲಿ ಬೈಕ್ಗಳಲ್ಲಿ ಸಿಎನ್ಜಿ (Bajaj CNG Bike) ಇಂಜಿನ್ಗಳನ್ನು ಅಳವಡಿಸಿ ಮಾರಾಟಕ್ಕೆ ಇಳಿದಿದ್ದ ಬಜಾಜ್ ಕಂಪೆನಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ದೇಶಾದಾದ್ಯಂತ ಬೈಕ್ ಲಭ್ಯತೆ ಪ್ರಮಾಣ ಕಡಿಮೆಯಿದ್ದರೂ ಮಾರಾಟದಲ್ಲಿ ನೂತನ ದಾಖಲೆ ಬರೆದಿದೆ.
ಕಳೆದ ಜುಲೈ 05 ರಂದು ಕಂಪೆನಿಯು ಬಜಾಜ್ ಪ್ರೀಡಂ 125 ಸಿಎನ್ಜಿ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಬೈಕ್ ಬಿಡುಗಡೆಯಾದಾಗ ಮಹಾರಾಷ್ಟ್ರ ಹಾಗೂ ಗುಜರಾತ್ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಬೈಕ್ಗಳ ಉತ್ಪಾದನೆಯ ಪ್ರಮಾಣದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಂಪೆನಿ ತನ್ನ ಬ್ರಾಂಚ್ಗಳನ್ನು ವಿಸ್ತರಣೆ ಮಾಡಲಿದೆ. ಈಗಾಗಲೇ ದೇಶದ ಪ್ರಮುಖ 77 ನಗರಗಳಿಗೆ ತನ್ನ ಬ್ರಾಂಚ್ಗಳನ್ನು ವಿಸ್ತರಣೆ ಮಾಡಿದೆ. ಮುಂದೆ ಬರಲಿರುವ ದಸರಾ ಹಬ್ಬದಂದು ದೇಶದಾದ್ಯಂತ ಭರ್ಜರಿ ಮಾರಾಟಕ್ಕಾಗಿ (Bajaj CNG Bike Sales) ಕಂಪೆನಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಮಾರಾಟವಾದ Bajaj CNG Bike ಗಳೆಷ್ಟು ಗೊತ್ತೇ?
ಬಜಾಜ್ ಪ್ರೀಡಂ 125 ಸಿಎನ್ಜಿ ಬೈಕ್ ಮಾರಾಟದ ಅಲಭ್ಯತೆಯ ನಡುವೆಯೂ ಬರೋಬ್ಬರಿ 5,000 ಕ್ಕೂ ಹೆಚ್ಚು ಬೈಕ್ಗಳ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಜುಲೈ 15ರ ನಂತರ ಕೇವಲ 15 ದಿನಗಳಲ್ಲಿ 272 ಯೂನಿಟ್ ಬೈಕ್ಗಳಳ ಮಾರಾಟ ಮಾಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 4,109 ಯುನಿಟ್ ಬೈಕ್ಗಳ ಮಾರಾಟ ಮಾಡಲಾಗಿದೆ. ಅಲ್ಲದೇ, ಇದೇ ಸೆಪ್ಟೆಂಬರ್ ತಿಂಗಳ 1 ರಿಂದ 4ರ ವರೆಗೆ 637 ಯುನಿಟ್ ಬೈಕ್ಗಳ ಮಾರಾಟ (Bajaj CNG Bike Sales) ಮಾಡಲಾಗಿದೆ. ಆಗಸ್ಟ್ ತಿಂಗಳ ಹೊತ್ತಿಗೆ ದೇಶದಾದ್ಯಂತ 77 ಪ್ರಮುಖ ನಗರಗಳಲ್ಲಿ ಬೈಕ್ ಮಾರಾಟ ಬ್ರಾಂಚ್ಗಳನ್ನು ಪ್ರಾರಂಭಿಸಿದ್ದರಿಂದ, ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.
ಬಜಾಜ್ ಸಿಎನ್ಜಿ ಬೈಕ್ಗಳ ವಿಶೇಷತೆ :
ಬಜಾಜ್ ಪ್ರೀಡಂ 125 ಸಿಎನ್ಜಿ ಬೈಕ್ ಸಿಎನ್ಜಿಯಿಂದ ಓಡುವುದರಿಂದಾಗಿಯೇ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಈ ಬೈಕ್ ಸಿಎನ್ಜಿ ಹಾಗೂ ಪೆಟ್ರೋಲ್ ಎರಡರಿಂದಲೂ ಓಡಲಿದ್ದು, 125 ಸಿಸಿಯ ಬೈಕ್ ಏರ್-ಕೂಲ್ಡ್ ಇಂಜಿನ್ನಿಂದ ಕೂಡಿರಲಿದೆ. ಈ ಬೈಕ್ನಲ್ಲಿ 2 ಕೆಜಿ ಸಿಎನ್ಜಿ ಹಾಗೂ 2 ಲೀ. ಪೆಟ್ರೋಲ್ ತುಂಬಿಸಬಹುದು. ವಿವಿಧ ಮಾಹಿತಿಗಳ ಪ್ರಕಾರ ಈ ಬೈಕ್ನ ಸಿಎನ್ಜಿ ಪ್ರತಿ ಕೆಜಿಗೆ 85 ಕಿ.ಮೀ ಹಾಗೂ ಪೆಟ್ರೋಲ್ ಪ್ರತಿ ಲೀಟರ್ಗೆ 56 ಕಿ.ಮೀ ಮೈಲೇಜ್ ನೀಡಲಿದೆ. ಒಂದು ಬಾರಿಗೆ ಸಿಎನ್ಜಿ ಹಾಗೂ ಪೆಟ್ರೋಲ್ ತುಂಬಿಸಿದರೆ ಒಟ್ಟು ಅಂದಾಜು 280 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್ ಮೋನೋ-ಲಿಂಕ್ಡ್ ಮಾದರಿಯ ಸಸ್ಪೆನ್ಷನ್, ಉದ್ದವಾದ ಸೀಟ್, ಎಲ್ಇಡಿ ಹೆಡ್ ಲ್ಯಾಂಪುಗಳು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.
ಬಜಾಜ್ ಸಿಎನ್ಜಿ ಬೈಕ್ನ ಮಾದರಿಗಳು :
1) NG04 ಡ್ರಮ್ – ಬೆಲೆ ರೂ. 94,995
2) NG04 ಡ್ರಮ್ LED – ಬೆಲೆ ರೂ 1,04,998
3) NG04 ಡಿಸ್ಕ್ LED – ರೂ 1,09,997
ದೇಶಾದ್ಯಂತ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಬಜಾಜ್ ಸಿಎನ್ಜಿ ಬೈಕ್ 30,000 ಕ್ಕೂ ಹೆಚ್ಚಿನ ವಿಚಾರಣೆ ಪಡೆದಿದೆ ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಜಾಜ್ ಪ್ರೀಡಂ 125 ಸಿಎನ್ಜಿ ಬೈಕ್ ಮಾರಾಟ ಪ್ರಮಾಣ ದುಪ್ಪಟ್ಟಾಗುವ ಭರವಸೆಯಿದೆ. ಹೆಚ್ಚಿನ ಮೈಲೇಜ್ ನೀಡುವುದರಿಂದ ಈ ಬೈಕ್ ಜನಾಕರ್ಷಣೆಗೆ ಒಳಗಾಗಿದೆ. ಬೇಡಿಕೆ ಹೆಚ್ಚಳವಾಗಿದ್ದರಿಂದ ದೊಡ್ಡ ಮಟ್ಟದಲ್ಲಿ ಬೈಕ್ಗಳ ಉತ್ಪಾದನೆಗೆ ಕಂಪೆನಿಯು ಸಿದ್ಧತೆ ನಡೆಸಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕೊಲಂಬಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ತಾಂಜಾನಿಯಾ, ಈಜಿಪ್ಟ್, ಹಾಗೂ ಪೆರು ದೇಶಗಳಿಗೆ ಬೈಕ್ ರಫ್ತು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.
ಪರಸರದ ಮೇಲಿನ ಕಾರ್ಬನ್ ಡೈ ಆಕ್ಸೈಡ್ ಉಗುಳುವಿಕೆಯನ್ನು ನಿರಂತರವಾಗಿ ಕಡಿಮೆ ಮಾಡಲು ಸಿಎನ್ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಹಾಯ ಮಾಡಲಿದೆ. ಕೇಂದ್ರ ಸರ್ಕಾರವೂ ಸಹಿತ ಡೀಸೆಲ್ ಹಾಗೂ ಪೆಟ್ರೋಲ್ ಇಂಧನಗಳ ಮೂಲಕ ಓಡುವ ವಾಹನಗಳ ಉತ್ಪಾದನೆಯನ್ನು ಕಡಿಮೆಗೊಳಿಸಬೇಕೆಂದು ಉತ್ಪಾದನಾ ಕಂಪೆನಿಗಳಿಗೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆ. ಈ ಎಲ್ಲದರ ಹಿನ್ನೆಲೆಯಲ್ಲಿ ವಾಹನ ಉತ್ಪಾದಕ ಕಂಪೆನಿಗಳು ಹಾಗೂ ಜನರೂ ಸಹ ಸಿಎನ್ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ತಮ್ಮ ಆಸಕ್ತಿ ತೋರಿಸುತ್ತಿದ್ದಾರೆ.