ಜಪಾನ್, ಚೀನಾ ಮುಂತಾದ ಬಹಳ ಮುಂದುವರೆದ ದೇಶಗಳಲ್ಲಿ ಈಗಾಗಲೇ ಪ್ರಮುಖ ನಗರಗಳನ್ನು ಸಂಪರ್ಕಿಸಲು ಅತಿವೇಗದ ಬುಲೆಟ್ ಟ್ರೈನ್ ಚಾಲ್ತಿಯಲ್ಲಿದೆ. ಕೆಲವೇ ನಿಮಿಷಗಳಲ್ಲಿ ನೂರಾರು ಕಿ.ಮೀ ಗಟ್ಟಲೆ ದೂರ ಸಾಗುವ ಈ ಬುಲೆಟ್ ಟ್ರೈನ್ ಕನಸು ಭಾರತಕ್ಕೆ ಈವರೆಗೂ ಕನಸಾಗಿಯೇ ಉಳಿದಿದೆ. ಆದರೆ, ಇದೀಗ ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ (India’s First Bullet Train) ನಿರ್ಮಾಣಕ್ಕೆ ಆರ್ಡರ್ ನೀಡಲಾಗಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಈಗಾಗಲೇ ಕಾರ್ಯನೀತಿ ರೂಪಿಸಿರುವಂತೆ, ದೇಶದ ಪ್ರಥಮ ಅತಿವೇಗದ ಬುಲೆಟ್ ಟ್ರೈನ್ ಪ್ರಾಜೆಕ್ಟ್ ದೇಶದ ಎರಡು ಅತ್ಯಂತ ಪ್ರಮುಖ ನಗರಗಳನ್ನು ಬೆಸೆಯಲಿದ್ದು, ಅದಕ್ಕಾಗಿ, ಈಗಾಗಲೇ ಟ್ರೈನ್ ನಿರ್ಮಾಣಕ್ಕೆ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ದೇಶದ ಮೊದಲ ಬುಲೆಟ್ ಟ್ರೈನ್ (India’s First Bullet Train) ನಿರ್ಮಾಣದ ಗುತ್ತಿಗೆ ಪಡೆದ ಸಿಲಿಕಾನ್ ಸಿಟಿಯ ಆ ಕಂಪನಿ ಯಾವುದು ಹಾಗೂ ಯಾವ ಮಾರ್ಗಗಳಲ್ಲಿ ಈ ಬುಲೆಟ್ ಟ್ರೈನ್ ಸಂಚರಿಸಲಿದೆ ಎನ್ನುವುದನ್ನು ಹೇಳ್ತೀವಿ ನೋಡಿ.
India’s First Bullet Train: ಭಾರತದ ಮೊದಲ ಮೆಟ್ರೋ ರೈಲು ಈ ಮಾರ್ಗದಲ್ಲಿ!
ರಾಷ್ಟ್ರೀಯ ಅತಿವೇಗದ ರೈಲು ನಿಗಮ ನಿಯಮಿತ (National High Speed Rail Corporation Limited) ವು ಈಗಾಗಲೇ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಿರುವ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ಗೆ, ಗರಿಷ್ಠ ಗಂಟೆಗೆ 250-280 ಕಿ.ಮೀ ವೇಗದಲ್ಲಿ ಚಲಿಸಬಹುದಾದ ರೈಲು ಬೋಗಿಗಳನ್ನು ಹಾಗೂ ಇಂಜಿನ್ನ್ನು ನಿರ್ಮಿಸಲು ಗುತ್ತಿಗೆ ನೀಡಿದೆ. ಈಗಾಗಲೇ 1.1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮುಂಬೈ – ಅಹಮದಾಬಾದ್ ರೈಲ್ವೇ ಕಾರಿಡಾರ್ ನಿರ್ಮಾಣವಾಗುತ್ತಿದ್ದು, 508 ಕಿ.ಮೀ ಉದ್ದದ ಮಾರ್ಗವನ್ನು ಕ್ರಮಿಸಲಿದೆ.
ರೈಲುಗಳ ನಿರ್ಮಾಣದ ಗುತ್ತಿಗೆ ಸಿಲಿಕಾನ್ ಸಿಟಿಯ ಈ ಕಂಪನಿಗೆ!
ಈ ಬುಲೆಟ್ ಟ್ರೈನ್ ಕಾರಿಡಾರ್ ಮಾರ್ಗಗಳಿಗೆ ರೈಲುಗಳ ನಿರ್ಮಾಣದ ಗುತ್ತಿಗೆಯನ್ನು ಟೆಂಡರ್ ಮೂಲಕ ನೀಡಲಾಗಿದ್ದು, ದೇಶದ ಪ್ರಥಮ ಬುಲೆಟ್ ಟ್ರೈನ್ ನಿರ್ಮಾಣ (India’s First Bullet Train) ಮಾಡುವ ಭಾಗ್ಯ ಬೆಂಗಳೂರಿನಲ್ಲಿರುವ BEML (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಗೆ ದೊರಕಿದೆ. ಅಂದರೆ, ಇಡೀ ರೈಲ್ವೇ ಕಾರಿಡಾರ್ಗೆ ಅಗತ್ಯವಿರುವ ಎರಡು ಬುಲೆಟ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಪ್ರಪೋಸಲ್ ನೀಡಿರುವ ಏಕೈಕ ಕಂಪನಿ BEML ಆಗಿದ್ದು, ಸರಿಸುಮಾರು ಪ್ರತಿ ಟ್ರೈನ್ ನಿರ್ಮಾಣಕ್ಕೆ ₹250 ಕೋಟಿಯಿಂದ ₹300 ಕೋಟಿಗಳಷ್ಟು ವೆಚ್ಚ ತಗುಲಲಿದೆ ಎನ್ನಲಾಗಿದೆ. ಆದರೆ ಈ ವೆಚ್ಚದ ಬಗ್ಗೆ ಯಾವುದೇ ಅಧಿಕೃತ ವಿವರವನ್ನು ನೀಡಲಾಗಿಲ್ಲ.
BEML ಗೆ ಟೆಂಡರ್ ನೀಡಿರುವ ಕುರಿತು ICF (Integral Coach Factory) ಅಧಿಕೃತ ಹೇಳಿಕೆ ನೀಡಿದ್ದು, ಮುಂದಿನ ಎರಡೂವರೆ ವರ್ಷಗಳ ಗಡುವು ನೀಡಿದೆ. ಆ ಗಡುವಿನೊಳಗೆ BEML ರೈಲುಗಳನ್ನು ತಯಾರಿಸಿಕೊಡಬೇಕಿದ್ದು, 250 ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯದ ಇಂಜಿನ್ಗಳನ್ನು BEML ಸಂಯೋಜಿತ ಸಂಸ್ಥೆಯಾದ ಮೇಧಾ ಸರ್ವೋ ಡ್ರೈವ್ಸ್ ಜಂಟಿಯಾಗಿ ತಯಾರಿಸಿಕೊಡಲಿದೆ ಹಾಗೂ ಆ ಇಂಜಿನ್ಗಳ ಸಾಮರ್ಥ್ಯವರ್ಧನೆ ಹಾಗೂ ಇತರ ಡಿಟೈಲಿಂಗ್ಗಳನ್ನು BEML ನಿರ್ವಹಿಸಲಿದೆ.
ರೈಲು ನಿರ್ಮಾಣ ಪ್ರಾಜೆಕ್ಟ್ ಜಪಾನ್ ಕೈತಪ್ಪಿದ್ದು ಹೇಗೆ?
ಈ ಟೆಂಡರ್ ಕರೆಯುವ ಮುನ್ನ, ದೇಶದ ಮೊದಲ ಬುಲೆಟ್ ಟ್ರೈನ್ (First Bullet Train) ಗಳ ನಿರ್ಮಾಣದ ಗುತ್ತಿಗೆಯನ್ನು ಜಪಾನ್ಗೆ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ನಿರ್ಮಾಣ ಹಾಗೂ ನಿರ್ವಹಣಾ ವೆಚ್ಚ ಬಹಳ ಹೆಚ್ಚಾಗಿರುವುದರಿಂದ, ಸ್ಥಳೀಯವಾಗಿಯೇ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ICF ಮೂಲಕ ಆ ಟೆಂಡರ್ ಬೆಂಗಳೂರಿನ ಕಂಪನಿಗೆ ದೊರಕಿದೆ.
India’s First Bullet Train: ದೇಶದ ಮೊದಲ ಬುಲೆಟ್ ಟ್ರೈನ್ ವಿಶೇಷತೆಗಳು!
ಈ ಮಾರ್ಗದ ಮೊದಲ ಬುಲೆಟ್ ಟ್ರೈನ್ ಡಿಸೆಂಬರ್ 2026 ರ ಸಮಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗಿದ್ದು, ಮೊದಲ ಬುಲೆಟ್ ಟ್ರೈನ್ ಸೇವೆ ಸೂರತ್ – ಬಿಲಿಮೋರಾ ವಿಭಾಗದ ನಡುವೆ ಸಂಚರಿಸಲಿದೆ. ಪ್ರತಿ ಟ್ರೈನ್ನಲ್ಲಿಯೂ 3+2 ಸೀಟಿಂಗ್ ವಿನ್ಯಾಸದ ಏಳು ಕೋಚ್ಗಳಿರಲಿದ್ದು, ಒಂದು 2+2 ವಿನ್ಯಾಸದ ಎಕ್ಸಿಕ್ಯೂಟಿವ್ ಕೋಚ್ ಕೂಡ ಇರಲಿದೆ. ಒಟ್ಟು 175 ಜನ ಪ್ರಯಾಣಿಕರು ಒಮ್ಮೆಗೆ ಸಂಚರಿಸಬಹುದಾದ ಈ ಮೊದಲ ಬುಲೆಟ್ ಟ್ರೈನ್ (India’s First Bullet Train), ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ವಿಸ್ತರಣೆಯಾಗಬಹುದು ಎನ್ನುವ ನಿರೀಕ್ಷೆಯಿದೆ.
ದೇಶದಲ್ಲಿ ಪ್ರಪ್ರಥಮ ಬುಲೆಟ್ ಟ್ರೈನ್ ಸೇವೆಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಜನತೆ ಕಾತರರಾಗಿದ್ದು, ಸರ್ಕಾರ ಇತರ ನಗರಗಳ ಯಾವ ಮಾರ್ಗಗಳಿಗೆ ಬುಲೆಟ್ ಟ್ರೈನ್ ಸೇವೆ ನೀಡಲಿದೆ ಹಾಗೂ ಅದರ ನಿರ್ವಹಣೆ ಹೇಗೆ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೇ.