ಜೀಪ್ ಇಂಡಿಯಾ ಭಾರತದ ಮಾರುಕಟ್ಟೆಗೆ ನೂತನ ನಾಲ್ಕು ಎಸ್ಯುವಿಗಳನ್ನು ಬಿಡುಗಡೆಗೊಳಿಸಿದೆ. ಈ ಹಿಂದೆ ಬಹುತೇಕ ಬೇಡಿಕೆ ಇದ್ದಾಗ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಇಂಡಿಯಾದ ಮೆರಿಡಿನ್ ಎಸ್ಯುವಿಗಳು ಹೆಚ್ಚಿನ ಮಾರಾಟ ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಮತ್ತಷ್ಟು ಸುಧಾರಣೆಗೊಳಿಸಿ ಸಂಸ್ಥೆಯು ನೂತನ ಎಸ್ಯುವಿಗಳನ್ನು (Jeep Meridian Suv 2025) ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ನಾಲ್ಕು ವಿಧದ ಮೆರಿಡಿನ್ ಎಸ್ಯುವಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಆರಂಭಿಕ ಬೆಲೆ 24.99 ಲಕ್ಷ (ಎಕ್ಸ್ ಶೋರೂಂ) ನಿಗದಿ ಮಾಡಲಾಗಿದೆ. ಐದು ಮತ್ತು ಏಳು-ಆಸನಗಳ ಕಾನ್ಫಿಗರೇಶನ್ಗಳಲ್ಲಿ ನಾಲ್ಕು ರೂಪಾಂತರಗಳನ್ನು ಹೊರ ತರಲಾಗಿದೆ. ಅವುಗಳೆಂದರೆ ಜೀಪ್ ಮೆರಿಡಿಯನ್ ಲಾಂಗಿಟ್ಯೂಡ್, ಜೀಪ್ ಮೆರಿಡಿಯನ್ ಲಾಂಗಿಟ್ಯೂಡ್ ಪ್ಲಸ್, ಜೀಪ್ ಮೆರಿಡಿಯನ್ ಲಿಮಿಟೆಡ್ (O) ಮತ್ತು ಜೀಪ್ ಮೆರಿಡಿಯನ್ ಓವರ್ಲ್ಯಾಂಡ್.
2025 ಜೀಪ್ ಮೆರಿಡಿಯನ್ನ ಹೊರಭಾಗದಲ್ಲಿ ಕಂಪೆನಿಯು ಈ ಹಿಂದಿನಂತೆಯೇ ಉಳಿಸಿಕೊಂಡಿದ್ದು, ಇಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದರ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮತ್ತು ಸ್ಲಿಕ್ ಎಲ್ಇಡಿ ಟೈಲ್ ಲ್ಯಾಂಪ್ಗಳು ಈ ಜೀಪಿಗೆ ಆಕರ್ಷಕ ನೋಟವನ್ನು ನೀಡಿದಂತಿದೆ.
ವೈಶಿಷ್ಠ್ಯತೆಗಳು :
ಬಿಡುಗಡೆಯಾದ ನೂತನ ರೂಪಾಂತರ ಜೀಪುಗಳಲ್ಲಿ ಹಲವು ಬದಲಾಣೆಗಳಲ್ಲು ಮಾಡಲಾಗಿದ್ದು, ಹೊಸ ತಂತ್ರಜ್ಞಾನಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಜೀಪಿನಲ್ಲಿ 10.1 ಇಂಚಿನ್ ಸಿಸ್ಟಮ್, 10.2 ಇಂಚಿನ ಡಿಜಿಟಲ್ ಇನ್ಸ್ರುಮೆಂಟ್ ಪ್ಯಾನೆಲ್ ನೀಡಲಾಗಿದೆ. ಇವುಗಳ ಜೊತೆಗೆ ಡ್ಯುಯಲ್ ಜೋನ್ ವಾತಾವರಣ ನಿಯಂತ್ರಕ, ವೈರ್ ಲೆಸ್ ಚಾರ್ಜರ್, ಆಪಲ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಒದಗಿಸಲಾಗಿದೆ.
ಜೀಪ್ ಮೆರಿಡಿಯನ್ ಲಾಂಗಿಟ್ಯೂಡ್ ಪ್ಲಸ್ ಜೀಪನ್ನು ಮಾತ್ರ ಐದು ಆಸನಗಳ ಮಾದರಿಯಲ್ಲಿ ಬಿಡುಗಡೆ ಮಾಡಿದ್ದರೆ, ಉಳಿದ ಜೀಪುಗಳನ್ನು ಏಳು ಆಸನಗಳಲ್ಲಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಆದಾಗ್ಯೂ, ಈ ಜೀಪುಗಳಲ್ಲಿ ವೆಂಟಿಲೇಟ್ ಫ್ರಂಟ್ ಸೀಟ್ ಮತ್ತು ಸನ್ ರೂಫ್ ನಂತಹ ವೈಶಿಷ್ಠ್ಯತೆಗಳು ಲಭ್ಯವಿಲ್ಲ.
ಈ ನವೀಕರಣಗೊಂಡ ಜೀಪ್ ಮೆರಿಡಿಯನ್ನ ಪವರ್ಟ್ರೇನ್ನಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಇದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 168bhp ಪವರ್ ಮತ್ತು 350Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
Jeep Meridian Suv 2025 ಬೆಲೆಗಳು (ಎಕ್ಸ್ ಶೋ ರೂಂ) :
ಲಾಂಗಿಟ್ಯೂಡ್ (5-ಸೀಟು) : 24.99 ಲಕ್ಷ ರೂ.
ಲಾಂಗಿಟ್ಯೂಡ್ ಪ್ಲಸ್ : 27.5 ಲಕ್ಷ ರೂ.
ಲಿಮಿಟೆಡ್ (O) : 30.49 ಲಕ್ಷ ರೂ.
ಓವರ್ಲ್ಯಾಂಡ್ : 36.49 ಲಕ್ಷ ರೂ.
ಜೀಪ್ ಇಂಡಿಯಾವು ಈ ನೂತನ ಜೀಪ್ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ನೂತನ ವಿಕ್ರಮ ಸಾಧಿಸುವ ದೃಷ್ಟಿ ನೆಟ್ಟಿದೆ. ಈ ಜೀಪ್ ಗಳು ಭಾರತೀಯರ ಮನಸ್ಸು ಗೆಲ್ಲುತ್ತವಾ ಎನ್ನವುದನ್ನು ಕಾದು ನೋಡಬೇಕಾಗಿದೆ.