ಕನ್ನಡದ ಟಾಪ್ ನಂಬರ್ 1 ಧಾರವಾಹಿ ಎಂಬ ಕ್ಯಾತಿ ಪಡೆಯುವ ಮೂಲಕ ಅಮೃತಧಾರೆ ಧಾರಾವಾಹಿ ನೂತನ ದಾಖಲೆ ನಿರ್ಮಿಸಿದೆ. 2023ರ ಮೇ 29 ರಂದು ಆರಂಭವಾಗಿರುವ ಅಮೃಧಾರೆ ಧಾರಾವಾಹಿ (Amruthadaare Serial) ಜನರ ಮೆಚ್ಚುಗೆ ಗಳಿಸಿತ್ತು. ಆರಂಭದಲ್ಲಿ ಕೆಲ ವಾರಗಳ ವರೆಗೆ ಕನ್ನಡದ ಟಿಆರ್ಪಿಯಲ್ಲಿ ಅಮೃತಧಾರೆಯೇ ಅಗ್ರಸ್ಥಾನ ಪಡೆದಿತ್ತು.
ಅನಂತರ ಕೆಲ ವಾರಗಳಲ್ಲಿ ಈ ಧಾರಾವಾಹಿಯ ಜನಪ್ರಿಯತೆ ತುಸು ಇಳಿಕೆಯಾಗಿತ್ತು. ಟಿಆರ್ಪಿಯಲ್ಲೂ ಅಮೃತಧಾರೆ ಕೆಳಗೆಬಿದ್ದಿತ್ತು. ಇದೀಗ, 39ನೇ ವಾರದಲ್ಲಿ ಮತ್ತೆ ಎದ್ದು ಬಂದಿರುವ ಅಮೃಧಾರೆ ಧಾರಾವಾಹಿ (Amruthadaare Serial) ಮತ್ತೊಮ್ಮೆ ಅಗ್ರಜ ಸ್ಥಾನ ಪಡೆದುಕೊಂಡಿದೆ. 39ನೇ ವಾರದ ಟಿಆರ್ಪಿ ವಿಭಾಗದಲ್ಲಿ ಅಮೃತಧಾರೆ ಕನ್ನಡದ ನಂಬರ್ 1 ಧಾರಾವಾಹಿಯಾಗಿ ಮೂಡಿಬಂದಿದೆ.
39ನೇ ವಾರದ ಟಾಪ್ 5 ಧಾರಾವಾಹಿಗಳ ಪಟ್ಟಿ :
1) ಅಮೃತಧಾರೆ ಧಾರಾವಾಹಿ
2) ಲಕ್ಷ್ಮೀ ನಿವಾಸ ಧಾರಾವಾಹಿ
3) ಶ್ರಾವಣಿ ಸಬ್ರಮಣ್ಯ ಧಾರಾವಾಹಿ
4) ಪುಟ್ಟಕ್ಕನ ಮಕ್ಕಳು ಧಾರಾವಾಹಿ
5) ಲಕ್ಷ್ಮೀ ಬಾರಮ್ಮ ಧಾರಾವಾಹಿ
ಹಿಂದಿಯ ʼಬಡೆ ಹಚ್ಚೆ ಲಗ್ತೆ ಹೈನ್ʼ ಧಾರಾವಾಹಿಯ ಅಪರಾವತಾರವೇ ಕನ್ನಡದ ಅಮೃತಧಾರೆ ಧಾರಾವಾಹಿ (Amruthadaare Serial). ಕಳೆದ ವರ್ಷವಷ್ಟೇ ಆರಂಭವಾಗಿರುವ ಈ ಧಾರಾವಾಹಿ ಕನ್ನಡದ ಮನೆಮನೆಯನ್ನೂ ತಲುಪಿದೆ. ಸಾಕಷ್ಟು ಮಹಿಳೆಯರು ಈ ಧಾರಾವಾಹಿಯ ವೀಕ್ಷಣೆ ಮಾಡುತ್ತಿದ್ದಾರೆ. ಈ ಧಾರಾವಾಹಿಯ ಲೀಡ್ ರೋಲ್ನಲ್ಲಿ ಛಾಯಾಸಿಂಗ್ ಹಾಗೂ ರಾಜೇಶ್ ನಟರಂಗ ನಟಿಸುತ್ತಿದ್ದಾರೆ.
ಇತ್ತೀಚಿನ ವಾರಗಳವರೆಗೆ ನಟಿ ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ಸ್ಥಾನದಲ್ಲಿ ಭದ್ರವಾಗಿತ್ತು. ಇದೀಗ, ಧಾರಾವಾಹಿಯ ಸಮಯ ಬದಲಾಗಿದ್ದರಿಂದ ʼಲಕ್ಷ್ಮೀ ನಿವಾಸʼ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಮಯ ಬದಲಾವಣೆ ಮಾಡಿದ್ದರೂ, ಟಿಆರ್ಪಿಯಲ್ಲಿ ಅಂತಹ ದೊಡ್ಡ ಮಟ್ಟದ ವ್ಯತ್ಯಾಸಗಳೇನೂ ಆಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇದು ಧಾರಾವಾಹಿಯ ಜನಪ್ರಿಯತೆಯನ್ನು ತೋರಿಸುತ್ತದೆ.
ಇನ್ನಿತರೆ ಜನಪ್ರಿಯ ಧಾರಾವಾಹಿಗಳಾಗಿರುವ ಅಣ್ಣಯ್ಯ, ಸೀತಾ ರಾಮ ಧಾರಾವಾಹಿಗಳ ಟಿಆರ್ಪಿ ವೀಕ್ಷಣೆಯಲ್ಲಿ ವಾರದಿಂದ ವಾರಕ್ಕೆ ಕಳಪೆ ಪ್ರದರ್ಶನ ನೀಡುತ್ತಿವೆ. ಕಳೆದ ವಾರವಷ್ಟೇ ಬಿಗ್ ಬಾಸ್ ಸೀಸನ್ 11 ಆರಂಭವಾಗಿರುವುದರಿಂದು ಕನ್ನಡದ ಧಾರವಾಹಿಗಳ ವೀಕ್ಷಣೆಯ ಮೇಲೂ ಇದರ ಪರಿಣಾಮ ಬೀರಿದೆ. ಬಿಗ್ ಬಾಸ್ ಪ್ರಸಾರವಾಗುವ ಸಮಯದಲ್ಲಿಯೇ ಇನ್ನಿತರೆ ವಾಹಿನಿಗಳಲ್ಲಿ ಪ್ರಸಾರವಾಗಿದ ಧಾರಾವಾಹಿಗಳ ಮೇಲೆ ಇದರ ಎಫೆಕ್ಟ್ ಇದ್ದೇ ಇರಲಿದೆ.