ಒಂದು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ದೊರೆತರೆ ಅದು ಅತ್ಯಂತ ಶ್ರೇಷ್ಠ ಚಿತ್ರ ಎನ್ನುವ ಮಾತು ಜನಜನಿತ. ಆಸ್ಕರ್ ಪ್ರಶಸ್ತಿ ವಿಶ್ವ ಮಟ್ಟದಲ್ಲಿ ನೀಡುವುದರಿಂದ ಆ ಪ್ರಮಾಣದ ಪೈಪೋಟಿಯೂ ಸರ್ವೇ ಸಾಮಾನ್ಯ. ಇದೀಗ, 97ನೇ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಅಂತಿಮವಾಗಿ ʼಲಾಪತಾ ಲೇಡೀಸ್’ (Laapataa Ladies) ಚಿತ್ರ ಆಯ್ಕೆಯಾಗಿದೆ.
ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು 29 ಚಿತ್ರಗಳ ರೇಸ್ನಲ್ಲಿದ್ದವು. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವುದೇ ಸಾಕಷ್ಟು ಜನ ನಿರ್ದೇಶಕರಿಗೆ ಹೆಮ್ಮೆಯ ಸಂಗತಿಯಾಗಿದೆ. 2023 ರಲ್ಲಿ ಆಸ್ಕರ್ ಪ್ರಶಸ್ತಿಯ ಉತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ ʼದಿ ಎಲಿಫೆಂಟ್ ವಿಸ್ಪರಸ್ʼ ಚಿತ್ರ ಪ್ರಶಸ್ತಿ ವಿಜೇತನಾಗಿತ್ತು. ಈ ವರ್ಷ ಲಾಪತಾ ಲೇಡೀಸ್ (Laapataa Ladies) ಚಿತ್ರ ನಾಮನಿರ್ದೇಶನಗೊಂಡಿದ್ದು, ಪ್ರಶಸ್ತಿತ ರೇಸ್ನಲ್ಲಿ ಪಾಲ್ಗೊಳ್ಳಲಿದೆ.
ಸ್ಪರ್ಧೆಯಲ್ಲಿದ್ದ ಚಿತ್ರಗಳು :
ಆಸ್ಕರ್ ಪ್ರಶಸ್ತಿಗೆ ಭಾರತದ ಚಿತ್ರಗಳನ್ನು ಭಾರತೀಯ ಚಲನಚಿತ್ರ ಅಕಾಡೆಮಿ (FFI) ಆಯ್ಕೆ ಮಾಡುತ್ತದೆ. 97ನೇ ಅಕಾಡೆಮಿಯ ರೇಸ್ನಲ್ಲಿ ಹಿಂದಿ ಭಾಷೆಯ 12 ಚಿತ್ರಗಳು, ತಮಿಳಿನ 6 ಚಿತ್ರಗಳು, ಮಲಯಾಳಂನ 4 ಚಿತ್ರಗಳು, ತೆಲುಗು ಹಾಗೂ ಮರಾಠಿಯ 3 ಚಿತ್ರಗಳು, ಒಡಿಯಾದ 1 ಚಿತ್ರ ಒಳಗೊಂಡಂತೆ ಒಟ್ಟು 29 ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವರ್ಷ ಕನ್ನಡದ ಯಾವುದೇ ಚಿತ್ರ ಆಸ್ಕರ್ ನಾಮನಿರ್ದೇಶನ ಸ್ಪರ್ಧೆಗೂ ಆಯ್ಕೆಯಾಗದಿರುವುದು ವಿಷಾದದ ಸಂಗತಿ.
ಈ ಎಲ್ಲಾ ಚಿತ್ರಗಳ ಕಠಿಣ ಸ್ಪರ್ಧೆಯ ನಡುವೆ ಹಿಂದಿಯ ಬಾಲಿವುಡ್ ನ ಲಾಪತಾ ಲೇಡೀಸ್ ಚಿತ್ರ ಆಯ್ಕೆಯಾಗಿದೆ. ಈ ಚಿತ್ರ ಬಿಡುಗಡೆಯಾದ ಮೇಲೆ ಇಡೀ ದೇಶದ ಗಮನ ಸೆಳೆದಿತ್ತು. ಮಹಿಳಾ ಸಮಾನತೆಯನ್ನು ಸಾರುವ ಚಿತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಅಂತಮ ಹಂತದಲ್ಲಿ ನಟ ವಿಜಯ್ ಸೇತುಪತಿ ನಟನೆಯ ತಮಿಳಿನ ಮಹಾರಾಜ ಚಿತ್ರ ಹಾಗೂ ಈ ಚಿತ್ರಗಳ ನಡುವೆ ಭಾರಿ ಪ್ರಮಾಣದ ಪೈಪೋಟಿ ಏರ್ಪಟ್ಟಿತ್ತು. ಕೊನೆ ಕ್ಷಣದಲ್ಲಿ ಲಾಪತಾ ಲೇಡೀಸ್ (Laapataa Ladies) ಚಿತ್ರ ಆಯ್ಕೆಯಾಗಿದೆ ಎಂದು ತಿಳಿದುಬಂದಿದೆ.
ಲಾಪತಾ ಲೇಡೀಸ್ ಚಿತ್ರ (Laapataa Ladies) :
ಹಿಂದಿಯ ಈ ಚಿತ್ರವು ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರ ನಿರ್ದೇಶನದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ. ನೂತನ ನಟರುಗಳನ್ನೇ ಒಳಗೊಂಡಿದ್ದ ಚಿತ್ರದ ಕಥೆ ಪ್ರೇಕ್ಷಕರನ್ನು ತನ್ನತ್ತ ಸೆಳೆದಿತ್ತು. ಚಿತ್ರ ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ ಈ ಚಿತ್ರ ಕೇವಲ 24 ಕೋಟಿ ರೂ. ಗಳಿಕೆಯನ್ನು ಕಂಡಿದೆ.
ತನ್ನ ನಿರ್ದೇಶನ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕಿ ಕಿರಣ್ ರಾವ್ ಅವರು, ತಮ್ಮ ಇಡೀ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ, ನನ್ನ ಕನಸು ನನಸಾಗಿದೆ ಎಂದಿದ್ದಾರೆ.
View this post on Instagram
ಮಹಾರಾಜ, ಎನಿಮಲ್, ಕಲ್ಕಿ2898 ಎಡಿ, ಚಂದು ಚಾಂಪಿಯನ್, ಹನುಮಾನ್, ವೀರ ಸಾವರ್ಕರ್, ಆರ್ಟಿಕಲ್ 370 ಸೇರಿದಂತೆ, ರಾಷ್ಟ್ರಪ್ರಶ್ತಿಯನ್ನು ಮುಡಿಗೇರಿಸಿಕೊಂಡ ತಮಿಳಿನ ಆಟಂ ಚಿತ್ರವೂ ಸ್ಪರ್ಧೆಯಲ್ಲಿದ್ದವು.
ಸಿನೆಮಾ, ಮನೋರಂಜನೆ, ಕ್ರೀಡೆ, ರಾಜಕೀಯ ಸೇರಿದಂತೆ ಪ್ರತಿ ಕ್ಷಣದ ಅಪ್ ಡೇಟ್ಗಳಿಗಾಗಿ ಕರ್ನಾಟಕ ಡೈಲಿ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.