ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧಿತನಾಗಿ ಜೈಲಿನಲ್ಲಿರುವ ನಟ ದರ್ಶನ್ (Darshan) ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಬಂದಿದೆ. ನಟ ದರ್ಶನ್ ಶೀಘ್ರವೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಹೌದು, ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿರುವ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು, ನಟ ದರ್ಶನ್ ಅಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಭವಿಷ್ಯ ನುಡಿದ ತಕ್ಷಣವೇ ತಾಯಿ ಮುಕಾಂಬಿಕಾ ದೇವಿಯ ವಿಗ್ರಹದ ಬಲಭಾಗದಿಂದ ಹೂ ಬಿದ್ದಿದೆ. ದೇವಿಯ ಹೂ ಪ್ರಸಾದ ಹಾಗೂ ದರ್ಶನ ಅವರ ಜನ್ಮ ಜಾತಕವು ಶುಭ ಸಮಯವನ್ನು ಸೂಚಿಸುತ್ತಿದೆ. ಮುಂದೆ ಎಲ್ಲವೂ ಒಳ್ಳೆಯದಾಗಲಿದೆ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಕಳೆದ 4 ತಿಂಗಳುಗಳಿಂದ ಜೈಲಿನ ಕಂಬಿಯ ಹಿಂದೆ ಬಂಧಿತನಾಗಿರುವ ದರ್ಶನ್ (Darshan) ಅವರಿಗೆ ಇದು ಖಂಡಿತಾ ಶುಭ ಸುದ್ದಿ. ಇತ್ತೀಚೆಗಷ್ಟೇ ನಟ ದರ್ಶನ್ ಅವರು ಬೆನ್ನುನೋವಿನ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ ಅವರನ್ನು ಜೂನ್ 11 ರಂದು ವಶಕ್ಕೆ ಪಡೆದಿದ್ದರು. ವಿಚಾರಣೆ ಮುಕ್ತಾಯವಾದ ನಂತರ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದೀಗ ನ್ಯಾಯಾಂಗ ಬಂಧನದ ಅಡಿ ನಟ ದರ್ಶನ್ ರನ್ನು ಬಳ್ಳಾರಿಯ ಜೈಲಿನಲ್ಲಿ ಇರಿಸಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಸೇರಿದಂತೆ 17 ಜನ ಬಂಧನಕ್ಕೊಳಗಾಗಿದ್ದರು. ಈಗಾಗಲೇ 3 ಜನ ಆರೋಪಿಗಳಿಗೆ ಜಾಮೀನು ದೊರಕಿದೆ.
ತೀವ್ರ ಬೆನ್ನುನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆತಂದು ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ದರ್ಶನ್ ಆರೋಗ್ಯದ ಬಗ್ಗೆ ಹೈಕೋರ್ಟ್ಗೆ ಬಳ್ಳಾರಿ ಜೈಲಾಧಿಕಾರಿ ಮಾಹಿತಿ ನೀಡಬೇಕಾಗಿರುವುದುರಿಂದ ಈ ಸ್ಕ್ಯಾನಿಂಗ್ ಅವಶ್ಯಕವಾಗಿತ್ತು. ಇದೇ ಅಕ್ಟೋಬರ್ 28ರ ಒಳಗಾಗಿ ಜೈಲಾಧಿಕಾರಿ ಹೈಕೋರ್ಟ್ಗೆ ಮಾಹಿತಿ ನೀಡಬೇಕಿದೆ.
ಕಳೆದ 124 ದಿನಗಳಿಂದ ದರ್ಶನ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ಪ್ರಕರಣದಲ್ಲಿ ಪವಿತ್ರಾಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ತೂಗುದೀಪ (Darshan) ಎ2 ಆರೋಪಿಯಾಗಿದ್ದಾರೆ.