ನಟಭಯಂಕರ ಜ್ಯೂ.ಎನ್ಟಿಆರ್ (Jr. NTR) ಅವರ ಸೋಲೋ ಆಕ್ಟಿಂಗ್ ಸಿನಿಮಾ ರಿಲೀಸ್ ಕಾಣದೇ ಭರ್ತಿ ಆರು ವರ್ಷವಾಗಿದೆ. ಬಹಳಷ್ಟು ಫ್ಯಾನ್ಸ್ಗಳು ಎನ್ಟಿಆರ್ ಅವರ ಯಾವ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಆರು ವರ್ಷಗಳ ಕಾಲ ಕಾದು ಕುಳಿತಿದ್ದಾರೆ ಎನ್ನುವುದನ್ನು ನಂಬುತ್ತೀರಾ? ಹೌದು. ಇದೀಗ ರಿಲೀಸ್ ಆದ ದೇವರ ಚಿತ್ರ (Devara Movie) ಬಿಟ್ಟು ಕಳೆದ ಆರು ವರ್ಷಗಳಲ್ಲಿ ಎನ್ಟಿಆರ್ ಅವರು ಯಾವುದೇ ಸೋಲೋ ಸಿನಿಮಾಗಳಲ್ಲಿ ನಟಿಸಿಲ್ಲ.
ಆದರೆ, ಅವರು ಜೊತೆಯಾಗಿ ನಟಿಸಿದ ಚಿತ್ರಗಳು ಸೂಪರ್ಹಿಟ್ ಆಗಿದ್ದು, ಅದರಲ್ಲೂ RRR ಚಿತ್ರವಂತೂ ಸೂಪರ್ಹಿಟ್ ಆಗಿದ್ದು, ಅದರ ನಾಟು ಸಾಂಗ್ಗೆ ಆಸ್ಕರ್ ಪ್ರಶಸ್ತಿ ಒಲಿದುಬಂದಿರುವುದು ಗೊತ್ತೇ ಇದೆ. ಇದೀಗ ಜ್ಯೂ.ಎನ್ಟಿಆರ್ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದು, ಆರು ವರ್ಷಗಳ ನಂತರ ತಮ್ಮ ಸೋಲೋ ಚಿತ್ರ ‘ದೇವರ’ದಲ್ಲಿ ಬಣ್ಣ ಹಚ್ಚಿ, ಫ್ಯಾನ್ಸ್ ಕ್ರೇಜ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಇಂದು ತೆರೆಕಂಡ ಬಹುಕೋಟಿ ವೆಚ್ಚದ ದೇವರ ಪಾರ್ಟ್- 1 ಚಿತ್ರ ಹೇಗಿದೆ ಹಾಗೂ ಚಿತ್ರದ ಒಟ್ಟು ಕಥೆ ಏನು ಅನ್ನೋದನ್ನ ಕಂಪ್ಲೀಟ್ ಆಗಿ ಹೇಳ್ತೀವಿ ನೋಡಿ.
Devara Movie Review: ಆರು ವರ್ಷಗಳ ನಂತರ Jr.NTR ಚಿತ್ರ ಹೇಗಿದೆ?
ದೇವರ ಚಿತ್ರದ ಬಗ್ಗೆ ಎಲ್ಲಾ ಅಭಿಮಾನಿಗಳೂ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೈಲರ್, ಟೀಸರ್ಗಳಲ್ಲಿ ಅತ್ಯಂತ ಸಖತ್ ಆಗಿ ಚಿತ್ರದ ಮೇಕಿಂಗ್ ಮೂಡಿಬಂದಿದ್ದು, ಇಂದು ಥಿಯೇಟರ್ನಲ್ಲಿ ದೇವರ ನೋಡಿದ ಅಭಿಮಾನಿ ದೇವರುಗಳ ಅಭಿಪ್ರಾಯ ಹೇಗಿತ್ತು? ನೋಡೋಣ ಬನ್ನಿ.
ದೇವರ ಎನ್ನುವ ದರೋಡೆಕೋರನ ಸುತ್ತ ಹೆಣೆದಿರುವ ಈ ಚಿತ್ರ, ಹಲವು ಪಾತ್ರಗಳನ್ನು ಹೊಂದಿದೆ. ಬುಡಕಟ್ಟು ಜನಾಂಗದವರು ಕಡಲ್ಗಳ್ಳರಾಗಿ ಬದಲಾದಾಗ, ಅವರಲ್ಲೊಬ್ಬನಾದ ದೇವರನಿಗೆ ಯಾವ ರೀತಿ ತನ್ನ ತಪ್ಪಿನ ಅರಿವಾಗುತ್ತದೆ ಎನ್ನುವುದು ಒಂದೆಡೆಯಾದರೆ, ಆತನ ಮಗನಾದ ವರ (ಜ್ಯೂ.ಎನ್ಟಿಆರ್) ಅಪ್ಪನ ಅಪ್ಪಣೆಯನ್ನು ಹೇಗೆ ಪಾಲಿಸುತ್ತಾನೆ? ಅಲ್ಲಿ ಎದುರಾಗುವ ದೊಡ್ಡ ಸವಾಲುಗಳೇನು? ಭೈರ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಚಿತ್ರ ನೋಡಬೇಕು.
Devara Movie Review: ಆಕ್ಷನ್ ಸಖತ್ ಫೀಲ್ ಕೊಡೋ ದೇವರ ಪಾರ್ಟ್ 1
ಚಿತ್ರ ಕಂಪ್ಲೀಟ್ ಆಕ್ಷನ್ ಪ್ಯಾಕ್ ಚಿತ್ರವಾಗಿದ್ದು, ಅದೆಷ್ಟೋ ಸಮಯದಿಂದ ಜ್ಯೂ.ಎನ್ಟಿಆರ್ ಅವರನ್ನು ತೆರೆಯ ಮೇಲೆ ನಾಯಕನಾಗಿ ಕಾಣಲು ಕಾದವರಿಗೆ ಸಖತ್ ಖುಷಿ ಸಿಕ್ಕಿದೆ. ದೇವರ (Devara Movie) ಟ್ರೈಲರ್ನಲ್ಲಿರುವಂತೆಯೇ ಕಂಪ್ಲೀಟ್ ಆಕ್ಷನ್ ಸೀನ್ಗಳಲ್ಲಿ ಜ್ಯೂ.ಎನ್ಟಿಆರ್ ಕಿಂಗ್ ಆಗಿ ಮೆರೆದಿದ್ದು, ಆಕ್ಷನ್ ಮೇಕಿಂಗ್ ಕೂಡ ಬಹಳ ಅದ್ಭುತವಾಗಿದೆ.
ಚಿತ್ರದ ಕಥೆ ಚೆನ್ನಾಗಿದೆ. ಆದರೆ, ಚಿತ್ರದ ಮೇಕಿಂಗ್ನಲ್ಲಿ ಕಥೆಯನ್ನು ಅಷ್ಟಾಗಿ ಬಳಸಿಕೊಂಡಿಲ್ಲ ಎನ್ನುವುದು ಕಾಣುತ್ತಿದೆ. ಅಷ್ಟೇ ಅಲ್ಲದೇ, ಚಿತ್ರದ ಪ್ರಮುಖ ಸೀನ್ಗಳಲ್ಲಿ ಸಪೋರ್ಟಿಂಗ್ ಸ್ಕ್ರೀನ್ ಪ್ಲೇ ಕೂಡ ಅಷ್ಟಾಗಿ ಸಾಥ್ ನೀಡಿಲ್ಲ. ಆದರೆ, ದೇವರ ಹಾಗೂ ವರ ಪಾತ್ರದ ಆಕ್ಷನ್ ಸೀನ್ಗಳನ್ನು ಅದ್ಭುತವಾಗಿಯೇ ತೋರಿಸಲಾಗಿದೆ.
ಇನ್ನು ಚಿತ್ರದ ಸಿನೇಮಾಟೋಗ್ರಫಿ ಕೂಡ ಚೆನ್ನಾಗಿದ್ದು, ಅಲ್ಲಲ್ಲಿ ಚಿಕ್ಕಪುಟ್ಟ ಕರೆಕ್ಷನ್ಗಳು ಬೇಕು ಅನ್ನಿಸಬಹುದಷ್ಟೆ. ಅದರೊಂದಿಗೆ ಚಿತ್ರದ ಸಂಗೀತ ಕೂಡ ಅಷ್ಟಾಗಿ ಹೈಲೈಟ್ ಆಗುವಂತೆ ಇಲ್ಲವಾಗಿದ್ದು, ಅನಿರುದ್ಧ್ ರವಿಚಂದರ್ ಅವರು ಇನ್ನೂ ಸ್ವಲ್ಪ ಎಫರ್ಟ್ ಹಾಕಬಹುದಿತ್ತೇನೋ ಅನಿಸುತ್ತದೆ.
ದೇವರ (Devara Movie) ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ಬಣ್ಣ ಹಚ್ಚಿದ್ದರೂ, ಅವರಿಗೆ ಅಷ್ಟಾಗಿ ಸೀನ್ಗಳು ಕಾಣಿಸುವುದಿಲ್ಲ. ಆದರೂ, ತನ್ನ ಪಾತ್ರವನ್ನು ಆಕೆ ಚೆನ್ನಾಗಿಯೇ ನಿಭಾಯಿಸಿದ್ದಾರೆ ಎನ್ನಬಹುದು. ಇನ್ನು, ಸೈಫ್ ಆಲಿ ಖಾನ್ ಅವರ ಭೈರ ಪಾತ್ರ ಅಷ್ಟಾಗಿ ಕಿಕ್ ನೀಡದಿದ್ದರೂ, ಅವರನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ಎನ್ನುವ ಭಾವನೆ ಮೂಡುವುದು ಸಹಜ.
ದೇವರ ಕ್ಲೈಮಾಕ್ಸ್ ಮಾತ್ರ ಸಖತ್!
ಇನ್ನು ಚಿತ್ರದ ಕ್ಲೈಮಾಕ್ಸ್ ಹಾಗೂ ಸರಿಸುಮಾರು ಅಂತಿಮ ಭಾಗದ ಸೀನ್ಗಳು ಚಿತ್ರವನ್ನು ಸಖತ್ ಆಗಿ ಕೊಂಡುಹೋಗುತ್ತವೆ. ಎರಡನೇ ಪಾರ್ಟ್ಗೆ ಪೀಠಿಕೆ ಎನ್ನಬಹುದಾದ ಈ ಕ್ಲೈಮಾಕ್ಸ್ ಮಾತ್ರ ಈ ಚಿತ್ರದ ಸಂಪೂರ್ಣ ಹೈಲೈಟ್. ಮೊದಲಾರ್ಧ ಮತ್ತು ಎರಡನೇ ಅರ್ಧದಲ್ಲಿ ದೇವರ (Devara Movie) ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿಯೂ ಮಾಡಬಹುದಿತ್ತು ಎನ್ನುವುದು ಹಲವರ ಅಭಿಪ್ರಾಯ.
ಒಟ್ಟಾರೆ, ಡೈರೆಕ್ಟರ್ ಶಿವು ಅವರ ನಿರ್ದೇಶನ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎನ್ನಬಹುದಾದರೂ, ಆಚಾರ್ಯ ಚಿತ್ರದಲ್ಲಾದ ಮಿಸ್ಟೇಕ್ಸ್ಗಳನ್ನು ಇಲ್ಲಿ ತಿದ್ದಿಕೊಂಡಿದ್ದಲ್ಲಿ ಇನ್ನಷ್ಟು ಸಖತ್ ಆಗಿ ಚಿತ್ರ ಮೂಡಿಬರಬಹುದಿತ್ತು. ಆದರೂ, ಜ್ಯೂ.ಎನ್ಟಿಆರ್ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಈಎ ಚಿತ್ರ ಆಕ್ಷನ್ ಸೀನ್ಗಳ ಮೂಲಕ ಸಖತ್ ಫೀಲ್ ಕೊಡುವುದಂತೂ ಪಕ್ಕಾ. ಪ್ರಕಾಶ್ ರಾಜ್, ತಲ್ಲೂರಿ ರಾಮೇಶ್ವರಿ, ಕಳೈಯಾರಸನ್ ಮುಂತಾದವರ ಪಾತ್ರ ನಿರ್ವಹಣೆ ಚೆನ್ನಾಗಿದ್ದು, ಕನ್ನಡಿಗ, ರಾಜ ರಾಣಿ ಸೀರಿಯಲ್ ಹಾಗೂ ಕೆಜಿಎಫ್ ಖ್ಯಾತಿಯ ತಾರಕ್ ಪೊನ್ನಣ್ಣ ಕೂಡ ಒಂದು ಪಾತ್ರವನ್ನು ನಿಭಾಯಿಸಿದ್ದು, ಬಹಳ ಅಚ್ಚುಕಟ್ಟಾಗಿದೆ.
ಒಟ್ಟಾರೆ, ಜ್ಯೂ.ಎನ್ಟಿಆರ್ ಅಭಿಮಾನಿಗಳಿಗೆ ಹಾಗೂ ಆಕ್ಷನ್ ಪ್ರಿಯರಿಗೆ ಈ ಚಿತ್ರ ಸಖತ್ ಫೀಲ್ ಕೊಡೋದಂತೂ ಖಂಡಿತಾ. ಚಲನಚಿತ್ರಗಳನ್ನು ಥಿಯೇಟರ್ನಲ್ಲೇ ನೋಡಿ ಹಾಗೂ ಸಿನಿಕಲಾವಿದರನ್ನು ಪ್ರೋತ್ಸಾಹಿಸಿ.