ಕನ್ನಡದ ಬಿಗ್ ಬಾಸ್ ಸೀಸನ್ ಬರೋಬ್ಬರಿ 10 ಸೀಸನ್ʼಗಳನ್ನು ಪೂರೈಸಿ, ದಶಮಾನದ ಯಶಸ್ಸು ಗಳಿಸಿ ಇದೀಗ, 11ನೇ ಸೀಸನ್ʼಗೆ (Bigg Boss Season 11) ಕಾಲಿಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯು ಈಗಾಗಲೇ ಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಿ ವೀಕ್ಷಕರಲ್ಲಿ ಕುತೂಹಲ ಗೋಡೆ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಬಿಗ್ ಬಾಸ್ ನಿರೂಪಕರ ವಿಷಯದಲ್ಲೂ ದ್ವಂದ್ವಗಳನ್ನು ಸೃಷ್ಠಿಸಿದೆ.
ಕಳೆದ 10 ಸೀಸನ್ʼಗಳನ್ನು ನಟ ಕಿಚ್ಚ ಸುದೀಪ್ ಅವರು ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಸೀಸನ್ʼನಲ್ಲಿ ಕಿಚ್ಚ ಸುದೀಪ್ʼಗೆ (Kichcha Sudeep) ಕೊಕ್ ಕೊಡಲಾಗಿದೆಯಾ ಎನ್ನುವಂತಹ ಅನುಮಾನಗಳು ನೂತನ ಪ್ರೋಮೋದಿಂದ ಸೃಷ್ಠಿಯಾಗಿದೆ. ಆದಾಗ್ಯೂ, ಇದು ಕಲರ್ಸ್ ಕನ್ನಡ ವಾಹಿನಿಯ ಗಿಮಿಕ್, ಕಿಚ್ಚ ಸುದೀಪ್ (Kichcha Sudeep) ಅವರೇ ಮತ್ತೊಮ್ಮೆ ನಿರೂಪಕರಾಗಿದ್ದಾರೆ ಎನ್ನುವ ಮಾಹಿತಿಯೂ ತಿಳಿದುಬಂದಿದೆ.
Bigg Boss Season 11: ಕುತೂಹಲ ಹೆಚ್ಚಿಸಿದ ಪ್ರೋಮೋ ರಿಲೀಸ್
ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ, ಈ ಬಾರಿ ಯಾವೆಲ್ಲ ಅಭ್ಯರ್ಥಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಬಹುದು ಎಂಬ ಚರ್ಚೆಗಳು ಶುರುವಾಗಿವೆ. ಪ್ರತಿ ಸೀಸನ್ ಅಲ್ಲೂ ಮಾಧ್ಯಮ ಕ್ಷೇತ್ರದಿಂದಲೂ ಓರ್ವರನ್ನು ಆಯ್ಕೆ ಮಾಡುವುದರಿಂದ ಈ ಬಾರಿ ಯಾವ ಸ್ಪರ್ಧಿ ಬಿಗ್ ಬಾಸ್ಗೆ (Bigg Boss Season 11) ಆಯ್ಕೆಯಾಗಿದ್ದಾರೆ ಎನ್ನುವ ಕುತೂಹಲವೂ ಮೂಡಿದೆ. ಈ ಹಿಂದೆ ನಿರೂಪಕರಾಗಿದ್ದ ಕಿರಿಕ್ ಕೀರ್ತಿಯವರು (Kirik Keerti), ರೆಹಮಾನ್ ಅವರು (rehaman Hassan), ಗೌರೀಶ್ ಅಕ್ಕಿಯವರು (Gourish Akki), ಸೋಮಣ್ಣ ಮಾಚಿಮಾಡ (Somanna Machimada) ಅವರು ಹಾಗೂ ಪತ್ರಕರ್ತರಾದ ರವಿ ಬೆಳೆಗೆರೆ (Ravi Belegere), ಭಾವನಾ ಬೆಳೆಗೆರೆ (Bhavana Belegere) ಹಾಗೂ ಚಕ್ರವರ್ತಿ ಚಂದ್ರಚೂಡ್ (Chakravarthy Chandrachood) ಅವರೂ ಬಿಗ್ ಬಾಸ್ ಮನೆಯ ಅನುಭವ ಪಡೆದಿದ್ದಾರೆ.
ಬಿಗ್ ಬಾಸ್ ಮನೆ ಪ್ರವೇಶಿಸಬಹುದಾದ ನ್ಯೂಸ್ ನಿರೂಪಕರು ಇವರೇ!
ಅದ್ದರಿಂದ, ಈ ಬಾರಿ ಯಾವ ಪತ್ರಕರ್ತರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು, ಬಿಗ್ ಬಾಸ್ ಮನೆಗೆ ಹೋಗಬಹುದಾದ ಪ್ರಮುಖರ ಲಿಸ್ಟ್ ಅನ್ನು ಮಾಡಲಾಗಿದೆ. ಈ ಕೆಳಗಿನವರಲ್ಲಿ ಯಾರಾದರೊಬ್ಬರು ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದೆ.
1) ಸುಕನ್ಯಾ ಸಂಪತ್ (Sukanya Sampath)
ಕನ್ನಡದ ಖ್ಯಾತ ವಾಹಿನಿಯಾದ ಟಿವಿ9 ಅಲ್ಲಿ ಸುದೀರ್ಘ ವರ್ಷಗಳ ಕಾಲ ನಿರೂಪಕಿಯಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಮನೆಯಲ್ಲಿದ್ದಾರೆ. ಈ ಸಲ ಇವರು Bigg Boss Season 11 ಮನೆ ಪ್ರವೇಶಿಸಬಹುದಾದ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
2) ದಿವ್ಯಾ ವಸಂತ್ (Divya Vasanth)
ಕನ್ನಡದ ಬಿಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ನಿರೂಪಕಿಯಾಗಿದ್ದ ಕೆಲಸ ಮಾಡಿರುವ ದಿವ್ಯಾ ವಸಂತ್ ಅವರೂ ಬಿಗ್ ಬಾಸ್ ಸೀಸನ್ 11ಕ್ಕೆ ಪ್ರವೇಶ ಮಾಡುವ ಸಾಧ್ಯತೆಯಿದೆ. ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಕೊಡುವ ಮೂಲಕ ಪ್ರಸಿದ್ಧರಾಗಿದ್ದರು. ಇತ್ತೀಚಿನ ದಿನಗಳವರೆಗೂ ಇವರೂ ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿದ್ದರು.
3) ರಾಧಾ ಹಿರೇಗೌಡರ್ (Radha Hiregowdar)
ರಾಜ್ಯದ ಫೈರ್ ಬ್ರ್ಯಾಂಡ್ ಪತ್ರಕರ್ತೆ, ನಿರೂಪಕಿ ಎಂದೇ ಖ್ಯಾತರಾಗಿರುವ ರಾಧಾರ ಹಿರೇಗೌಡರ್ ಅವರು Bigg Boss Season 11 ಮನೆ ಪ್ರವೇಶಿಸುವ ಸಂಭವವಿದೆ. ಈ ಹಿಂದೆ ಹಲವು ಭಾರಿ ಇವರಿಗೆ ಆಫರ್ ಬಂದಿದ್ದರೂ, ಆ ಮನವಿಗಳನ್ನು ತಿರಸ್ಕರಿಸಿದ್ದರು. ಪ್ರಸ್ತುತ ಗ್ಯಾರೇಂಟಿ ನ್ಯೂಸ್ ಕನ್ನಡ ವಾಹಿನಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
4) ಹರೀಶ್ ನಾಗರಾಜ್ (Harish Nagaraj)
ದಿಗ್ವಿಜಯ ನ್ಯೂಸ್ ವಾಹಿನಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಹರೀಶ್ ನಾಗರಾಜ್ ಅವರು ಈ ಸಲ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಗುಸುಗುಸು ಮಾಧ್ಯಮ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
5) ಅಜಿತ್ ಹನುಮಕ್ಕನವರ್
ಪ್ರಸ್ತುತ, ಏಷಿಯಾನೆಟ್ ಸುವರ್ಣ ವಾಹಿನಿಯ ಸಂಪಾದಕರಾಗಿರುವ ಅಜಿತ್ ಹನುಮಕ್ಕನವರ್ (Ajit Hanumakkanavar) ರಾಜ್ಯದ ಮಾಧ್ಯಮ ಕ್ಷೇತ್ರದ ಹಿರಿಯರಾಗಿದ್ದು, ತಮ್ಮ ವಸ್ತುನಿಷ್ಠ ನಿರೂಪಣೆಯಿಂದಲೇ ಇವರು ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ಇವರು, ಇತ್ತೀಚೆಗೆ ನಟ ದರ್ಶನ್ ಅವರ ಕೊಲೆ ಕೇಸ್ʼನಲ್ಲಿ ಆರೋಪಿತರ ಮೇಲೆ ವಸ್ತುನಿಷ್ಠ ವರದಿಯ ಕಾರಣಕ್ಕೆ, ದರ್ಶನ್ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ, ಅವಮಾನಕರ ಭಾಷೆಯ ಬಳಕೆಯನ್ನು ಇವರು ಅನುಭವಿಸುತ್ತಿದ್ದು. ಪ್ರಸ್ತುತ ರಾಜ್ಯದ ಸಾಮಾಜಿಕ ಜಾಲತಾಣಗಳಲ್ಲಿ ಇವರು ಟ್ರೆಂಡಿಂಗ್ʼನಲ್ಲಿರುವ ಕಾರಣಕ್ಕೆ ಇವರಿಗೂ ಕಲರ್ಸ್ ಕನ್ನಡ ವಾಹಿನಿ ಮನವಿ ಮಾಡಿಕೊಂಡಿದ್ದು, ಇವರೂ ಬಿಗ್ ಬಾಸ್ ಸೀಸನ್ 11 ಕ್ಕೆ (Bigg Boss Season 11) ಎಂಟ್ರಿ ಕೊಟ್ಟರೆ ಅಚ್ಚರಿಯಿಲ್ಲ.