ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಕನ್ನಡ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಕ್ಕೆ ಯಾರೆಲ್ಲಾ ಸ್ಪರ್ಧಿಗಳಾಗಲಿದ್ದಾರೆ ಎನ್ನುವ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ಎಲ್ಲೆಡೆ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆಯಾಗುತ್ತಿದ್ದರೂ ಕೂಡ, ಯಾರಿಗೂ ನೈಜ ಅಭ್ಯರ್ಥಿಗಳ ಪಟ್ಟಿಯನ್ನು ಬಿಗ್ ಬಾಸ್ ವೇದಿಕೆ ಅಥವಾ ಕಲರ್ಸ್ ಕನ್ನಡ ಬಾಹಿನಿ ಬಿಟ್ಟುಕೊಟ್ಟಿಲ್ಲ. ಆದರೆ, ಇದೀಗ ಒಂದು ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದ್ದು, ಅದರ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
ಕನ್ನಡ ಬಿಗ್ ಬಾಸ್ ಗೆ ಈ ಬಾರಿ ಕಿಚ್ಚ ಸುದೀಪ (Kiccha Sudeepa) ಅವರು ನಡೆಸಿಕೊಡುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ವಾಹಿನಿ ಹಲವು ಬಾರಿ ಅಭಿಮಾನಿಗಳಿಗೆ ತಲೆನೋವು ನೀಡಿತ್ತು. ಒಮ್ಮೆ ಸುದೀಪ್ ಅವರ ಹ್ಯಾಷ್ ಟ್ಯಾಗ್ ರಿಮೂವ್ ಮಾಡಿದರೆ, ಇನ್ನೊಮ್ಮೆ ಸುದೀಪ್ ಅವರ ಫೋಟೋ ಇಲ್ಲದೇ, ಕೇವಲ ಕಣ್ಣಿನ ಚಿತ್ರವಿರುವ ಪ್ರೋಮೋವನ್ನು ಬಿಡುಗಡೆ ಮಾಡಿತ್ತು. ಆದರೆ, ಕೊನೆಗೂ ಪ್ರೆಸ್ ಮೀಟ್ ಮೂಲಕ ಸುದೀಪ್ ಅವರೇ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವುದು ಖಚಿತವಾದ ಮೇಲೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
Bigg Boss Kannada 11: ಸ್ಪರ್ಧಿಗಳ ಲಿಸ್ಟ್ ಲೀಕ್, ಇಲ್ಲಿದೆ ವಿವರ!
ಆದರೆ, ಸ್ಪರ್ಧಿಗಳ ವಿಚಾರವಾಗಿ ಯಾವುದೇ ಸುಳಿವು ಬಿಟ್ಟುಕೊಡದ ಕಲರ್ಸ್ ಕನ್ನಡ, ಈ ಬಾರಿಯ ಬಿಗ್ ಬಾಸ್ನಲ್ಲಿಇರುವ ಎರಡು ಮನೆಗಳ ಕಾನ್ಸೆಪ್ಟ್ನ್ನು ಜಾಹೀರುಗೊಳಿಸಿತ್ತು. ಮನೆ ಪ್ರವೇಶಿಸುವ ಮುನ್ನವೇ ಸ್ವರ್ಗ ಮತ್ತು ನರಕ ಎನ್ನುವ ಎರಡು ಮನೆಗಳಿಗೆ ಸ್ಪರ್ಧಿಗಳನ್ನು ಕಳುಹಿಸಲು ಪ್ಲಾನ್ ಮಾಡಿರುವ ಬಿಗ್ ಬಾಸ್ (Bigg Boss Kannada 11) ವೇದಿಕೆ, ಈ ಬಾರಿಯ ಸ್ಪರ್ಧಿಗಳ ಹೆಸರನ್ನು ಗೌಪ್ಯವಾಗಿ ಇರಿಸಿರುವಂತೆಯೇ, ಇದೀಗ ಸ್ಪರ್ಧಿಗಳ ಪಟ್ಟಿಯೊಂದು ಲೀಕ್ ಆಗಿದೆ ಎನ್ನಲಾಗಿದೆ.
ಗ್ರ್ಯಾಂಡ್ ಪ್ರೀಮಿಯರ್ ಶೋ ಗೆ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಿಸುವುದಾಗಿ ಹೇಳಿರುವ ಬಿಗ್ ಬಾಸ್, ಇನ್ನಷ್ಟೇ ಅದರ ಬಗ್ಗೆ ಅಪ್ಡೇಟ್ ನೀಡಬೇಕಿದ್ದು, ಅದರ ನಡುವೆಯೇ ಈ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದೆ.
ಈಗ ಲೀಕ್ ಆಗಿದೆ ಎನ್ನಲಾದ ಬಿಗ್ ಬಾಸ್ (Bigg Boss Kannada 11) ಪ್ರೋಮೋದಲ್ಲಿ ಸ್ಪರ್ಧಿಗಳ ಮಬ್ಬಾದ ಫೋಟೋಗಳ ಸ್ಕ್ರೀನ್ ಶಾಟ್ ಇದ್ದಂತೆ ಕಾಣುತ್ತಿದೆ. ರೆಡ್ ಲೈಟ್ ಬ್ಯಾಕ್ಗ್ರೌಂಡ್ನಲ್ಲಿ ಕಾಣುತ್ತಿರುವ ಈ ಲಿಸ್ಟ್ನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್, ರಾನಿ ಚಿತ್ರದ ಹೀರೋ ಕಿರಣ್ ರಾಜ್, ನಟಿ ಪ್ರೇಮಾ, ಹರಿಪ್ರಿಯಾ, ಎಸ್ ನಾರಾಯಣ್ ಪುತ್ರ ಪಂಕಜ್, ನಟಿ ಭಾವನಾ ಮೆನನ್, ಕಿರುತೆರೆ ನಟಿ ಗೌತಮಿ ಜಾಧವ್, ಸೀರಿಯಲ್ ನಟ ಅಕ್ಷಯ್ ನಾಯಕ್ ಅವರ ಫೋಟೋ ಲೀಕ್ ಆಗಿದ್ದು, ಇವರು ಬಿಗ್ಬಾಸ್ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ಸ್ಪರ್ಧಿಗಳ ಡಿಟೇಲ್ಸ್ ಇಲ್ಲಿದೆ:
1. ಭೂಮಿಕಾ ಬಸವರಾಜ್
ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಖತ್ ರೀಲ್ಸ್ಗಳಿಂದ ಎಲ್ಲರಿಗೂ ಚಿರಪರಿಚಿತರಾಗಿರುವ ಭೂಮಿಕಾ ಬಸವರಾಜ್, ಇನ್ಸ್ಟಾಗ್ರಾಮ್ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡೆಸುವ ರೀಲ್ಸ್ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಫೇಮಸ್ ಆದವರು. ಪಾಸಿಟಿವ್ ನೆಗೆಟಿವ್ ಕಮೆಂಟ್ಗಳಿಂದ ಸುದ್ದಿಯಾಗಿರುವ ಈಕೆ ಈ ಬಾರಿಯ ಕನ್ನಡ ಬಿಗ್ ಬಾಸ್ನ ಸಂಭಾವ್ಯ ಅಭ್ಯರ್ಥಿ ಎನ್ನಲಾಗಿದೆ.
2. ಕಿರಣ್ ರಾಜ್
ಕನ್ನಡತಿ ಧಾರಾವಾಹಿಯಲ್ಲಿ ರಂಜಿನಿ ರಾಘವನ್ ಅವರಿಗೆ ಜೋಡಿಯಾಗಿ ನಟಿಸಿ ಎಲ್ಲರಿಗೂ ಇಷ್ಟವಾಗಿದ್ದ ಕಿರಣ್ ರಾಜ್, ತನ್ನ ಮೂಟಿವೇಶನ್ ವಿಡಿಯೋಗಳು ಹಾಗೂ ಸಖತ್ ಲುಕ್ನಿಂದಲೇ ಎಲ್ಲರಿಗೂ ಇಷ್ಟದ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ಕನ್ನಡದ ಮೊದಲ ಚಿತ್ರ ರಾನಿ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ್ದಲ್ಲದೇ, ಅದೇ ಸಮಯಕ್ಕೆ ಕಾರು ಅಪಘಾತಕ್ಕೆ ತುತ್ತಾಗಿದ್ದೂ ಸುದ್ದಿಯಾಗಿತ್ತು. ಇವರೂ ಈ ಬಾರಿ ಬಿಗ್ ಬಾಸ್ಗೆ ಬರಲಿದ್ದಾರೆ ಎನ್ನಲಾಗಿದೆ.
3. ಪ್ರೇಮಾ
ನಟಿ ಪ್ರೇಮಾ, 90 ರ ದಶಕದಿಂದ ಕಳೆದ 10-15 ವರ್ಷಗಳ ಹಿಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ನಾಯಕಿಯಾಗಿ ಬಣ್ಣ ಹಚ್ಚಿದ್ದವರು. ಓಂ, ಆಪ್ತಮಿತ್ರ, ಯಜಮಾನ ಮುಂತಾದ ಚಿತ್ರಗಳಲ್ಲಿ ದಿಗ್ಗಜ ನಟರಿಗೆ ಜೋಡಿಯಾಗಿ ನಟಿಸಿ, ಮದುವೆಯ ನಂತರ ಚಿತ್ರರಂಗದಿಂದ ದೂರವುಳಿದಿದ್ದವರು, ಇದೀಗ ರಿಯಾಲಿಟಿ ಶೋ ಮಹಾನಟಿ ಗೆ ಜಡ್ಜ್ ಆಗುವ ಮೂಲಕ ಮತ್ತೆ ರಂಗಕ್ಕೆ ಮರಳಿದವರು. ಇವರೂ ಸಂಭಾವ್ಯ ಸ್ಪರ್ಧಿ ಎನ್ನಲಾಗಿದೆ.
4. ಹರಿಪ್ರಿಯಾ
ಅಪ್ಪಟ ಕನ್ನಡದ ನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ, ಎಲ್ಲರಿಗೂ ಪ್ರಿಯರಾಗಿರುವ ಹರಿಪ್ರಿಯಾ, ಇತ್ತೀಚೆಗಷ್ಟೇ ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಅವರನ್ನು ಮದುವೆಯಾಗಿದ್ದರು. ಇವರು ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿದ್ದರೂ, ಬರುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ.
5. ಪಂಕಜ್ ನಾರಾಯಣ್
ದಿಗ್ಗಜ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ, ಪಂಕಜ್ ಎಸ್ ನಾರಾಯಣ್, ಕನ್ನಡದಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿ ನೇಪಥ್ಯಕ್ಕೆ ಸರಿದಿದ್ದು, ನಿಜಾನಾ ನೀನೇನಾ ಹಾಡು ಮೂಲಕ ಸುದ್ದಿಯಾಗಿದ್ದರು. ಇವರೂ ಕೂಡ ಈ ಬಾರಿ ಬಿಗ್ ಬಾಸ್ ಬರುವ ಸಾಧ್ಯತೆ ದಟ್ಟವಾಗಿದೆ.
6. ಭಾವನಾ ಮೆನನ್
ಕ್ಯೂಟ್ ಬಹುಭಾಷಾ ನಟಿ ಭಾವನಾ ಮೆನನ್ ಜಾಕಿ, ಬಚ್ಚನ್, ಟಗರು ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ, ಒಮ್ಮೆ ಕಿಡ್ನಾಪ್ ಆಗಿದ್ದಾರೆನ್ನುವ ಸುದ್ದಿಗೂ ಒಳಗಾಗಿದ್ದವರು. ತನ್ನ ನಗುಮುಖ ಹಾಗೂ ಉತ್ತಮ ನಟನೆಯಿಂದ ಜನಮನ್ನಣೆ ಗಳಿಸಿರುವ ಇವರು ಕೂಡ ಬಿಗ್ ಬಾಸ್ ಬರುವ ಸಾಧ್ಯತೆಯಿದೆ.
7. ಗೌತಮಿ ಜಾಧವ್
ಕನ್ನಡ ಕಿರುತೆರೆಯ ಸತ್ಯ ಸೀರಿಯಲ್ನ ಟಾಮ್ ಬಾಯ್ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಗೌತಮಿ ಜಾಧವ್ ಈ ಬಾರಿ ಬಿಗ್ ಬಾಸ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸಖತ್ ಬೋಲ್ಡ್ ಆಗಿರುವ ಈಕೆ ತನ್ನ ಇನ್ಸ್ಟಾಗ್ರಾಮ್ ಮೂಲಕವೂ ಪರಿಚಿತರಾಗಿದ್ದು, ರೀಲ್ಸ್ ಹಾಗೂ ತನ್ನ ಹಲ್ಲಿನ ಅಂದದ ಮೂಲಕ ಬಹಳ ಜನರಿಗೆ ಇಷ್ಟವಾಗಿದ್ದಾರೆ.
8. ಅಕ್ಷಯ್ ನಾಯಕ್
ಸತ್ಯ ಧಾರವಾಹಿಯಲ್ಲಿ ಸಿದ್ದಾಂತ್ ಪಾತ್ರ ಮಾಡುತ್ತಿರುವ ಮಂಡ್ಯದ ಅಕ್ಷಯ್ ನಾಯಕ್, ನಟನಾ ಕ್ಷೇತ್ರದಲ್ಲಿ ಸಾಕಷ್ಟು ಅವಮಾನ ಎದುರಿಸಿ ಬಂದವರು. ತನ್ನ ಪಾತ್ರದ ಮೂಲಕ ಜನಮೆಚ್ಚುಗೆ ಗಳಿಸಿರುವ ಅಕ್ಷಯ್, ಬಿಗ್ ಬಾಸ್ ಮನೆ ಪ್ರವೇಶಿಸೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನೂ ಖಚಿತ ಸುದ್ದಿ ಬಿಟ್ಟುಕೊಡದ ಕಲರ್ಸ್ ಕನ್ನಡ
ಆದರೆ, ಈ ಪಟ್ಟಿ ಅಧಿಕೃತವೇ ಅಥವಾ ಇಲ್ಲವೇ ಎನ್ನುವುದು ಇನ್ನೂ ಗೊಂದಲದಲ್ಲಿಯೇ ಇದ್ದು, ಇವರಲ್ಲಿ ಹರಿಪ್ರಿಯಾ ಹಾಗೂ ಭಾವನಾ ಮೆನನ್ ಸ್ಪರ್ಧಿಸುವ ಸಾಧ್ಯತೆಗಳೇ ಇಲ್ಲ ಎನ್ನಲಾಗಿದೆ. ಆದರೂ, ಉಳಿದವರ ಹೆಸರು ಈ ಮುಂಚೆಯೂ ಕೇಳಿಬಂದ ಹಿನ್ನೆಲೆಯಲ್ಲಿ ಫೈನಲ್ ಲಿಸ್ಟ್ ಎನ್ನುವುದು ಬಹುತೇಕ ಖಚಿತ ಎನ್ನುತ್ತಿದ್ದಾರೆ ಫ್ಯಾನ್ಸ್.
ಇವರೊಂದಿಗೆ ಇತರ ಸಂಭಾವ್ಯ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ಜ್ಯೂನಿಯರ್ ದರ್ಶನ್ ಖ್ಯಾತಿಯ ಅವಿನಾಶ್, ಗಾಯಕಿ ಐಶ್ವರ್ಯಾ ರಂಗರಾಜನ್, ಜಾಹ್ನವಿ, ಬೈಕ್ ವ್ಲಾಗರ್ ಲೇಕಿ ಗೋಸ್ವಾಮಿ, ಖ್ಯಾತ ನಟಿ ಚಂದ್ರಪ್ರಭಾ, ಸುಕೃತಾ ನಾಗ್, ಹುಲಿ ಕಾರ್ತಿಕ್, ಭವ್ಯಾ ಗೌಡ ಮುಂತಾದವರ ಹೆಸರುಗಳು ದಟ್ಟವಾಗಿ ಕೇಳಿಬರುತ್ತಿದ್ದು, ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಟಿಕೆಟ್ ಪಡೆಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.