ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿಯವರು (Radhika Kumaraswamy) ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲವಾಗಿರಲಿಲ್ಲ. 2022ರಲ್ಲಿ ನಟ ರವಿ ಚಂದ್ರನ್ ಅವರ ರವಿ ಬೋಪಣ್ಣ ಸಿನೆಮಾದಲ್ಲಿ ಕೊನೆಯದಾಗಿ ಬಣ್ಣಹಚ್ಚಿದ್ದರು. ಆದರೆ, ಇದೀಗ ಹಲವು ವರ್ಷಗಳ ವಿರಾಮದ ನಂತರ ರಾಧಿಕಾ ಕುಮಾರಸ್ವಾಮಿಯವರು ಭೈರಾದೇವಿಯಾಗಿ (Bhairadevi Movie) ಮರಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ಭೈರಾದೇವಿ ಸಿನೆಮಾವು (Bhairadevi Movie) ನವರಾತ್ರಿ ಹಬ್ಬದ ಮೊದಲ ದಿನವಾದ ಅಕ್ಟೋಬರ್ 03 ರಂದು ಬಿಡುಗಡೆಯಾಗಲಿದೆ. ನಟ ರಮೇಶ್ ಅರವಿಂದ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ (Ramesh Aravind) ಹಾಗೂ ರಾಧಿಕಾ ಕುಮಾರಸ್ವಾಮಿಯವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಶ್ರೀಜೈ ದಸರಾ ಸಂದರ್ಭದಲ್ಲಿಯೇ ಚಿತ್ರ ಬಿಡುಗಡೆಗೆ ನಿರ್ಧರಿಸಿರುವುದರಿಂದ ಬೈರಾದೇವಿಯ ಆರ್ಭಟ ಹೇಗಿರಲಿದೆ ಎನ್ನುವುದನ್ನು ಕಾಯ್ದೆ ನೋಡಬೇಕಿದೆ.
ಭೈರಾದೇವಿ ಚಿತ್ರವನ್ನು (Bhairadevi Movie) ರಾಧಿಕಾ ಕುಮಾರಸ್ವಾಮಿಯವರೇ (Radhika Kumaraswamy), ಶಮಿಕ ಪ್ರೊಡಕ್ಷನ್ ಬ್ಯಾನರ್ (Shamika Production Banner) ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರವಿ ರಾಜ್ ಹಾಗೂ ಯಾದವ್ ಅವರೂ ಸಹ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ.
ಇದನ್ನೂ ಓದಿ : ಆಸ್ಕರ್ಗೆ ನಾಮನಿರ್ದಶನವಾಯ್ತು ಭಾರತದ ಏಕೈಕ ಚಿತ್ರ – ಸ್ಪರ್ಧೆಯಲ್ಲಿದ್ದ ಚಿತ್ರಗಳಿವು!
ರಾಧಿಕಾ ಕುಮಾರಸ್ವಾಮಿಯವರು ಈ ಗಾಗಲೇ ಸಿನೆಮಾದ ಪ್ರಚಾರಕ್ಕೆ ಚಾಲನೆ ನೀಡಿದ್ದು, ಸಾಂಪ್ರದಾಯಿಕ ಪ್ರಚಾರ ಮಾಧ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ತಾವೇ, ಮೊದಲು ಆಟೋ ಚಲಾವಣೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಿರುವುದು ಎಲ್ಲರ ಗಮನ ಸೆಳೆದಿದೆ.
Bhairadevi Movie: ಬಾಲಿವುಡ್ನಲ್ಲೂ ಬರಲಿದೆ ರಾಧಿಕಾ ಚಿತ್ರ??
ರಾಧಿಕಾ ಕುಮಾರಸ್ವಾಮಿಯವರ (Radhika Kumaraswamy) ಭೈರಾದೇವಿ ಚಿತ್ರ (Bhairadevi Movie) ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾಲಿವುಡ್ ನಲ್ಲಿ ಅವರ ಮತ್ತೊಂದು ಚಿತ್ರ ಬಿಡುಗಡೆಯಾಗಲಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಜೊತೆ ನಟಿಸಿರುವ ʼಅಜಾಗ್ರತʼ ಚಿತ್ರ (Ajagrata Film) ಬಿಡುಗಡೆಗೆ ಸಿದ್ಧಗೊಂಡು ನಿಂತಿದೆ.
ಇನ್ನು, ಈ ಚಿತ್ರದಲ್ಲಿ ಜೆ.ಎಸ್.ವಾಲಿ ಛಾಯಾಚಿತ್ರಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿದೆ. ಚಿತ್ರದ ತಾರಾಗಣದಲ್ಲಿ, ರಂಗಾಯಣ ರಘು, ರವಿಶಂಕರ್, ಸ್ಕಂದ ಅಶೋಕ್, ಅನು ಮುಖರ್ಜಿ, ಮಾಳವಿಕಾ ಅವಿನಾಶ್ ಮತ್ತು ಸುಚೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಈ ಚಿತ್ರದ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿಯವರು, ಭೈರಾದೇವಿ ಸಿನೆಮಾ ಗೆದ್ದರೆ ನಾನು ಚಿತ್ರರಂಗದಲ್ಲಿ ಉಳಿಯುತ್ತೇನೆ. ಸೋತೆ, ಇದೇ ನನ್ನ ಕೊನೆಯ ಸಿನೆಮಾ ಆಗಬಹುದು. ಈ ಚಿತ್ರ ಯಶಸ್ಸುಗಳಿಸಿದರೆ ಮತ್ತೊಂದು ಸಿನೆಮಾ ಮಾಡುತ್ತೇನೆ, ಸಿನೆಮಾ ಗೆಲ್ಲುವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇದೇ ಅಕ್ಟೋಬರ್ 03 ರಾಧಿಕಾ ಕುಮಾರಸ್ವಾಮಿ ಹಾಗೂ ರಮೇಶ್ ಅರವಿಂದ್ ನಟನೆಯ ಭೈರಾದೇವಿ ಚಿತ್ರ ಬಿಡುಗಡೆಯಾಗಲಿದೆ. ಕೊರೋನಾ ಸಂಕಷ್ಟದಿಂದ ಕನ್ನಡ ಚಿತ್ರರಂಗ ಸ್ವಲ್ಪ ಸ್ವಲ್ಪವಾಗಿ ಮೇಲೆ ಬರುತ್ತಿರುವುದು ಖುಷಿಯ ಸಂಗತಿ. ಇದೇ ಸಂದರ್ಭದಲ್ಲಿ, ಕನ್ನಡದ ಪ್ರೇಕ್ಷಕರೂ ಚಿತ್ರಮಂದಿರಗಳತ್ತ ಧಾವಿಸುವುದೂ ಅವಶ್ಯಕವಾಗಿದೆ.