ಇತ್ತೀಚೆಗಷ್ಟೇ ಮಳಯಾಳಂ ಚಿತ್ರರಂಗದಲ್ಲಿ ಭುಗಿಲೆದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಮುಖವಾಗಿ ಕೇಳಿಬಂದ ಹೆಸರು ಸಿದ್ದಿಕ್ (Actor Siddique). ಹಲವು ಮಳಯಾಳಂ ನಟಿಯರು ತಮಗೆ ಮಳಯಾಳಂ ಇಂಡಸ್ಟ್ರಿಯಲ್ಲಿ ಲೈಂಗಿಕವಾಗಿ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ, ನಟ ಸಿದ್ದಿಕ್ ಅವರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು.
ಆ ಪ್ರಕಾರ ರಚನೆಯಾದ ಹೇಮಾ ಕಮಿಟಿ (HEMA Committe) ವರದಿ ಬೆನ್ನಲ್ಲೇ ನಟ ಸಿದ್ದಿಕ್ ಬಂಧನದ ಭೀತಿಯನ್ನು ಎದುರಿಸಿದ್ದರು. ಅದರಂತೆಯೇ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಆದರೆ, ಆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಇದೀಗ ಲುಕೌಟ್ ನೋಟಿಸ್ ಜಾರಿ ಮಾಡಿದೆ.
ಹೌದು. ತನ್ನ ವಿರುದ್ಧದ ಆರೋಪಗಳು ಸಾಬೀತಾಗಬಹುದಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ನಟ ಸಿದ್ದಿಕ್ (Actor Siddique), ತನ್ನ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಸಂತ್ರಸ್ತೆಯ ದೂರಿನನ್ವಯ ತನಿಖೆ ನಡೆಸಿದ ತನಿಖಾ ತಂಡ ಹಾಗೂ ಪೊಲೀಸರು, ಸಂತ್ರಸ್ತೆಯ ಹೇಳಿಕೆಯನುಸಾರ ಬಲವಾದ ಸಾಕ್ಷಿಗಳನ್ನು ಕಲೆಹಾಕಿದ್ದರು ಹಾಗೂ ಆ ಎಲ್ಲಾ ಸಾಕ್ಷಿಗಳು ನಟ ಸಿದ್ದಿಕ್ ಅವರ ವಿರುದ್ಧವಾಗಿಯೇ ಇವೆ ಎಂದು ತಿಳಿದುಬಂದಿದೆ.
ನಡೆದ ಘಟನೆ ಏನು?
ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯಳಾಗಿದ್ದ ತನ್ನನ್ನು, 2016 ರ ಜನವರಿ 28 ರಂದು ಸಿದ್ದಿಕ್ (Actor Siddique) ಅವರ ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದಾಗ, ತಿರುವನಂತಪುರದ ಮಸ್ಕತ್ ಎನ್ನುವ ಹೆಸರಿನ ಹೋಟೆಲ್ವೊಂದರಲ್ಲಿ ಸಿದ್ದಿಕ್ ತನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಹಾಗೂ ಬೆದರಿಕೆಯನ್ನೂ ಹಾಕಿದ್ದರು ಎಂದು ಯುವತಿಯೊಬ್ಬರು ದೂರು ನೀಡಿದ್ದರು.
ದೌರ್ಜನ್ಯದ ನಂತರ ತಾನು ಮನೋವೈದ್ಯರ ಬಳಿ ಚಿಕಿತ್ಸೆ ಪಡೆದಿರುವುದಾಗಿ ಯುವತಿ ನೀಡಿರುವ ಹೇಳಿಕೆಯನ್ನು ಆಧರಿಸಿ ಕಾಕ್ಕನಾಡ್ ಹಾಗೂ ಪನಂಬಿಳ್ಳಿ ಎಂಬ ಎರಡು ಕಡೆಗಳಲ್ಲಿ ವೈದ್ಯರ ಹೇಳಿಕೆಯನ್ನು ಹಾಗೂ ದಾಖಲೆಗಳನ್ನು ಪೊಲೀಸರು ಪಡೆದಿದ್ದು, ಅವು ಸಂತ್ರಸ್ತೆಯ ಹೇಳಿಕೆಗೆ ಪೂರಕವಾಗಿವೆ ಎಂದು ತನಿಖಾ ತಂಡ ತಿಳಿಸಿದೆ. ಅಷ್ಟೇ ಅಲ್ಲದೇ, ಸಿದ್ದಿಕ್ ತಂಗಿದ್ದ ಹೋಟೆಲ್ ದಾಖಲೆಗಳು ಕೂಡ ದೊರಕಿದ್ದು, ಅದರಲ್ಲಿಯೂ ತಂಗಿದ್ದರ ಬಗ್ಗೆ ಪುರಾವೆ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ: Shani Effect: ದೀಪಾವಳಿಯ ನಂತರ ಈ 5 ರಾಶಿಯವರಿಗೆ ಅದೃಷ್ಟ
Actor Siddique ಬಂಧನಕ್ಕೆ ಪೊಲೀಸ್ ಬಲೆ
ಈ ಎಲ್ಲಾ ವರದಿಯನ್ನಾಧರಿಸಿ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿರುವುದರಿಂದ, ಇದೀಗ ಸಿದ್ದಿಕ್ ಅವರನ್ನು ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ. ತನ್ನೆರಡೂ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಸಿದ್ದಿಕ್ ಅವರನ್ನು ಶೀಘ್ರದಲ್ಲೇ ಹುಡುಕಿ ಬಂಧಿಸುತ್ತೇವೆ ಎಂದು ತನಿಖಾ ತಂಡ ಹೇಳಿದ್ದರೆ, ಅತ್ತ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ದಿಕ್ ತಂಡ ನಿರ್ಧರಿಸಿದೆ ಎಂದು ಅವರ ಆಪ್ತವಲಯ ತಿಳಿಸಿದೆ.
ಇತ್ತೀಚಿನ ಸುದ್ದಿಗಳ ಪ್ರಕಾರ ಸಿದ್ದಿಕ್ ಅವರ ಮೊಬೈಲ್ ಎರಡು ಬಾರಿ ರಿಂಗ್ ಆಗಿ ನಂತರ ಮತ್ತೆ ಸ್ವಿಚ್ ಆಫ್ ಆಗಿದ್ದು, ಅದರ ನೆಟ್ವರ್ಕ್ ಟ್ರೇಸಿಂಗ್ಗೆ ಪೊಲೀಸರು ಕೂಡಲೇ ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗಿದೆ.
ಏನೇ ಇರಲಿ, ನಟಿಯಾಗುವ ಕನಸು ಕಾಣುವ ಮುಗ್ಧ ಯುವತಿಯರನ್ನು ತಮ್ಮ ತೆವಲಿಗೆ ಬಳಸಿಕೊಳ್ಳುವ ಇಂತಹ ಹೀನಾಯ ಪ್ರವೃತ್ತಿ ಸಂಪೂರ್ಣವಾಗಿ ಕೊನೆಯಾಗಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ಎಲ್ಲರ ಆಶಯ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲೂ ಕೂಡ ಲೈಂಗಿಕ ದೌರ್ಜನ್ಯದ ವಿರುದ್ಧ ನಟನ್ ಚೇತನ್ ಅಹಿಂಸ ಅವರ ಫೈರ್ ಟೀಂ ಕೂಡ ಒಂದೆಡೆ ಪ್ರಯತ್ನ ನಡೆಸುತ್ತಿದ್ದು, ಅದು ಎಲ್ಲಿಯತನಕ ತಲುಪುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.