Jio Best Plan : ಭಾರತೀಯ ಟೆಲಿಕಮ್ಯುನಿಕೇಷನ್ಸ್ ವಿಭಾಗದಲ್ಲಿ ತ್ರಿವಳಿ ಚಕ್ರವರ್ತಿಗಳಾದ ಏರ್ಟೆಲ್, ಜಿಯೋ ಹಾಗೂ ವಿಐ ಆರ್ಭಟದ ನಡುವೆ ಬಿಎಸ್ಎನ್ಎಲ್ ಖಡಕ್ ಎಂಟ್ರಿ ನೀಡಿದೆ. ನೂತನ ಅವತಾರದಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಬಿಎಸ್ಎನ್ಎಲ್ ಮೊದಲ ಹೊಡೆತದಲ್ಲಿಯೇ ಜಿಯೋ ಸಂಸ್ಥೆಯನ್ನು ಚಿಂತೆಗೀಡು ಮಾಡಿದೆ.
ಆರಂಭದ 6 ತಿಂಗಳುಗಳ ಕಾಲ ಉಚಿತ ಆಫರ್ ನೀಡಿ, ದೇಶದಲ್ಲಿ ತನ್ನದೇ ಗ್ರಾಹಕರನ್ನು ಹೊಂದಿರುವ ಜಿಯೋ ಸಂಸ್ಥೆಗೆ ಇದೀಗ ಭೀತಿಯುಂಟಾಗಿದೆ. ಬಿಎಸ್ಎನ್ಎಲ್ ಸಂಸ್ಥೆಯೂ ತನ್ನ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಹಕರು ಜಿಯೋ ತೊರೆದು ಬಿಎಸ್ಎನ್ಎಲ್ ಸೇರ್ಪಡೆಯಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹಾಗೂ ನೂತನ ಗ್ರಾಹಕರನ್ನು ಸೆಳೆಯಲು ಜಿಯೋ ಹೊಸ ರೀಚಾರ್ಜ್ ಆಫರ್ (Jio Best Plan) ಒಂದನ್ನು ಬಿಡುಗಡೆ ಮಾಡಿದೆ. ಆ ರೀಚಾರ್ಜ್ ಪ್ಲ್ಯಾನ್ ಯಾವುದು, ಅದರಿಂದ ಯಾವೆಲ್ಲ ಸೌಲಭ್ಯಗಳು ದೊರಕುತ್ತದೆ ಎನ್ನುವುದನ್ನು ನೋಡೋಣ ಬನ್ನಿ…
ಜಿಯೋ ನೂತನ ಪ್ಲ್ಯಾನ್ :
ಜಿಯೋ ಸಂಸ್ಥೆಯು ತನ್ನ ಬಳಕೆದಾರರಿಗಾಗಿ ನೂತನ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್ ಇತರೆ ನೆಟ್ ವರ್ಕ್ ಸಂಸ್ಥೆಗಳಿಗಿಂತ ಉತ್ತಮವಾದ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಲಿದೆ.
ಹೌದು, ಜಿಯೋ ಸಂಸ್ಥೆಯ ರೂ. 999 ಪ್ಲ್ಯಾನ್ ಬಳಕೆದಾರರಿಗೆ ಅತ್ಯುತ್ತಮ ಪ್ಲ್ಯಾನ್ (Jio Best Plan) ಆಗಿದೆ. ನೀವು 999 ರೂ.ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಂಡು ರೀಚಾರ್ಜ್ ಮಾಡಿದರೆ, ನಿಮಗೆ ಬರೋಬ್ಬರಿ 98 ದಿನಗಳ ವರೆಗೆ ಸುದೀರ್ಘವಾದ ವ್ಯಾಲಿಡಿಟಿ ದೊರೆಯುತ್ತದೆ. ಈ ಅವಧಿಯಲ್ಲಿ ನೀವು ಪ್ರತಿನಿತ್ಯ 2 ಜಿಬಿ ಹೈ ಸ್ಪೀಡ್ ಡೇಟಾವನ್ನು, ಅನಿಯಮಿತ ಕೃಎಗಳನ್ನು ಹಾಗೂ ಪ್ರತಿನಿತ್ಯ 100 ಸಂದೇಶಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ, ನಿಮ್ಮ ಮೊಬೈಲ್ 5ಜಿ ಗೆ ಬೆಂಬಲಿಸುತ್ತಿದ್ದಲ್ಲಿ, ಅನಿಯಮಿತ 5ಜಿ ಇಂಟರ್ ನೆಟ್ ಅನ್ನೂ ಬಳಕೆ ಮಾಡಬಹುದಾಗಿದೆ. 5 ಜಿ ಇಂಟರ್ ನೆಟ್ ಸೌಲಭ್ಯ ಪಡೆಯಲು ಸೆಂಟಿಗ್ಸ್ ಅಲ್ಲಿ ಕೆಲವುಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಈ ರೀಚಾರ್ಜ್ ಪ್ಲ್ಯಾನ್ ಜೊತೆಗೆ ಸಪ್ಲಿಮೆಂಟರಿಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಜಿಯೋ ಕ್ಲೌಡ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆದು ವ್ಯಾಲಿಡಿಟಿ ಅವಧಿಯವರೆಗೆ ಆನಂದಿಸಬಹುದು.
ಈ ಪ್ಲ್ಯಾನ್ ಮೂಲಕ ನೀವು 98 ದಿನಗಳ ವರೆಗೆ ಒಟ್ಟು 196 ಜಿ ಉಚಿತ 4ಜಿ ಇಂಟರ್ನೆಟ್ ಬಳಸಬಹುದು. ಆ ಈ ಮೂಲಕ ಪ್ರತಿದಿನ 10 ರೂ.ಗಳಂತೆ 98 ದಿನಗಳಿಗೆ ನೀವು 999 ರೂ.ಗಳ ಪ್ಲ್ಯಾನ್ ಬಳಸಿದಂತಾಗುತ್ತದೆ. 20 ರೂ.ಗೆ ಕೇವಲ 1 ಜಿಬಿ ಡೇಟಾ ಪಡೆಯುವ ಈ ಸಂದರ್ಭದಲ್ಲಿ, 10 ರೂ.ಗೆ ಪ್ರತಿದಿನ 2 ಜಿಬಿ ಇಂಟರ್ನೆಟ್, 100 ಎಸ್ಎಂಎಸ್, ಅನಿಯಮಿತ ಕರೆ ಹಾಗೂ ಉಚಿತ ಜಿಯೋ ಚಂದಾದಾರಿಕೆ ದೊರೆಯುತ್ತಿದೆ.
ನೀವೂ ಜಿಯೋ ಗ್ರಾಹಕರಾಗಿದ್ದಲ್ಲಿ ನಿಮ್ಮ ಅಪರೇಟರ್ಗಳ ಬಳಿ ಈ ಪ್ಲ್ಯಾನ್ ಬಗ್ಗೆ ವಿಚಾರಿಸಿ ತಿಳಿಯಿರಿ. ಮೈ ಜಿಯೋ ಅಪ್ಲಿಕೇಷನ್ ಗೆ ಭೇಟಿ ನೀಡುವ ಮೂಲಕವೂ ನೀವೂ ಈ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಬಹುದು.