ದಸರಾ ಹಬ್ಬದ ಪ್ರಯುಕ್ತ ಪ್ಲಿಫ್ಕಾರ್ಟ್ ನಲ್ಲಿ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಆಫರ್ನಲ್ಲಿ ಎಲ್ಲಾ ವಸ್ತುಗಳ ಬೆಲೆಯೂ ಗಣನೀಯವಾಗಿ ಇಳಿಕೆ ಕಂಡಿವೆ. ಇದರಲ್ಲಿ ಪ್ರಮುಖವಾಗಿ 70,000 ರೂ. ಮೂಲ ಬೆಲೆಯ IPhone 15 ಕೇವಲ 36,000 ರೂ.ಗಳಿಗೆ ದೊರಕುತ್ತಿದೆ.
ಪ್ಲಿಫ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆಫರ್ಗಳು ಇಂದು ಸೆಪ್ಟಂಬರ್ 27 ರಿಂದ ಅಕ್ಟೋಬರ್ 26ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು, ದೈನಂದಿನ ಬಳಕೆಯ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಸೇರಿದಂತೆ ಎಲ್ಲಾ ವಸ್ತುಗಳಿಗೆ ಶೇ.30 ರಿಂದ ಶೇ.40 ರ ವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ.
ಈ ಆಫರ್ನಲ್ಲಿ ನೀವು ಅತ್ಯಂತ ಕಡಿಮೆ ದರದಲ್ಲಿ ಈ ಫೋನ್ ಬ್ರ್ಯಾಂಡ್ ಮೊಬೈಲ್ ಗಳನ್ನು ಖರೀದಿಸಬಹುದಾಗಿದೆ. ಐ ಫೋನ್ ಮೊಬೈಲ್ ಗಳ ಮೇಲೆ ಪ್ಲಿಫ್ಕಾರ್ಟ್ ಭರ್ಜರಿ ಡಿಸ್ಕೌಂಟ್ ಹಾಗೂ ಆಫರ್ಗಳನ್ನು ನೀಡಿದೆ. ಐ ಫೋನ್ 16 ಬಿಡುಗಡೆಯ ನಂತರ ಐ ಫೋನ್ 14 ಹಾಗೂ 15 ಮೊಬೈಲ್ಗಳ ಬೆಲೆ ಇಳಿಕೆ ಮಾಡಲಾಗಿದೆ.
IPhone 15 Mobile ಬೆಲೆ :
ಈ ಬಿಗ್ ಬಿಲಿಯನ್ ಡೇಶ್ ಆಫರ್ ನಲ್ಲಿ ನೀವು 70 ಸಾವಿರ ರೂ. ಮೂಲ ಬೆಲೆಯ IPhone 15 ಮೊಬೈಲ್ ಅನ್ನು ಕೇವಲ 36,650 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಕುರಿತ ಆಫರ್ ನೋಡೋಣ ಬನ್ನಿ.
ಐ ಫೋನ್ 15 ಮೊಬೈಲ್ನ ಮೂಲ ಬೆಲೆ 70,000 ಆಗಿದ್ದು, ಬಿಗ್ ಬಿಲಿಯನ್ ಡೇಸ್ ಆಫರ್ ನಲ್ಲಿ ಇದು 54,999 ರೂ.ಗಳಿಗೆ ದೊರಕಲಿದೆ. ಇದಕ್ಕೆ ಹಲವು ಆಫರ್ ಹಾಗೂ ಡಿಸ್ಕೌಂಟ್ಗಳನ್ನು ಸೇರ್ಪಡೆ ಮಾಡಬೇಕಷ್ಟೆ.
54,999 ರೂ. ಬೆಲೆಯ ಐ ಫೋನ್ ಅನ್ನು ನೀವು HDFC ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಎಕ್ಸ್ಚೇಂಜ್ ಡಿಸ್ಕೌಂಟ್ 1,500 ರೂ., ಕ್ಯಾಶ್ಬ್ಯಾಕ್ 3,500 ರೂ. ದೊರಕಲಿದ್ದು, ಎಫೆಕ್ಟಿವ್ ಬೆಲೆ 49,999 ರೂ.ಗಳಾಗಲಿದೆ.
ಇದೇ ಮೊಬೈಲ್ ಅನ್ನು HDFC Credit Card EMI ಮೂಲಕ ಖರೀದಿಸಿದರೆ, ಎಕ್ಸ್ಚೇಂಜ್ ಡಿಸ್ಕೌಂಟ್ 1,500 ರೂ. ಹಾಗೂ ಕ್ಯಾಶ್ಬ್ಯಾಕ್ 4,000 ರೂ. ದೊರಕಲಿದ್ದು, ಎಫೆಕ್ಟಿವ್ ಬೆಲೆ 49,499 ರೂ.ಗಳಾಗಲಿದೆ.
ಯುಪಿಐ ಪಾವತಿಯ ಮೂಲಕ ಮೊಬೈಲ್ ಖರೀದಿಸಿದರೆ, ಎಕ್ಸ್ಚೇಂಜ್ ಡಿಸ್ಕೌಂಟ್ 1,500 ರೂ. ಹಾಗೂ ಕ್ಯಾಶ್ಬ್ಯಾಕ್ 1,500 ರೂ. ದೊರಕಲಿದ್ದು, ಎಫೆಕ್ಟಿವ್ ಬೆಲೆ 51,999 ರೂ.ಗಳಾಗಲಿದೆ. ಪ್ಲಿಫ್ಕಾರ್ಟ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಎಕ್ಸ್ಚೇಂಜ್ ಡಿಸ್ಕೌಂಟ್ 1,500 ರೂ. ಹಾಗೂ ಕ್ಯಾಶ್ಬ್ಯಾಕ್ 2,674.95 ರೂ. ದೊರಕಲಿದ್ದು, ಎಫೆಕ್ಟಿವ್ ಬೆಲೆ 50,824 ರೂ.ಗಳಷ್ಟಾಗಲಿದೆ.
49,999 ರೂ.ಗಳಿಗೆ ದೊರಕುವ ಈ ಮೊಬೈಲ್ ಗೆ ನಿಮ್ಮ ಹಳೆಯ ಮೊಬೈಲ್ ಗಳನ್ನು 13,500 ರೂ.ಗಳ ವರೆಗಿನ ಬೆಲೆಗೆ ಎಕ್ಸ್ಚೇಂಜ್ ಮಾಡಬಹುದಾಗಿದೆ. ಆ ಮೂಲಕ 54,999 ರೂ. ಮೌಲ್ಯದ IPhone 15 ನಿಮಗೆ ಕೇವಲ 36,650 ರೂ.ಗಳಿಗೆ ಖರೀದಿಸಬಹುದಾಗಿದೆ.