ರಾಜ್ಯದಲ್ಲಿ ಶಿಕ್ಷಕರ ಪರ್ಮನೆಂಟ್ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿಲ್ಲ ಎನ್ನುವ ಕೂಗು ಬಹಳ ವ್ಯಾಪಕವಾಗಿ ಕೇಳಿಬರುತ್ತಿತ್ತು. ಹಲವಾರು ಶಾಲೆಗಳಲ್ಲಿ ಶಿಕ್ಷಕರ ಅಥವಾ ಬೋಧಕರ ಅತೀವ ಕೊರತೆಯಿದ್ದರೂ ಕೂಡ, ಆ ಹುದ್ದೆಗಳ ನೇಮಕಾತಿ (Teachers Vacancy) ಗೆ ಸರ್ಕಾರದಿಂದ ಯಾವುದೇ ಆದೇಶ ಬರದ ಕಾರಣ, ಶಾಲಾ ಮಂಡಳಿಗಳು ಹಾಗೂ ಪ್ರಾಂಶುಪಾಲರು, ಅತಿಥಿ ಶಿಕ್ಷಕರ ಮೊರೆಹೋಗಬೇಕಾದದ್ದು ಬಹಳ ಅವಶ್ಯವಾಗಿತ್ತು.
ಆದರೆ, ಇದೀಗ ಸರ್ಕಾರಿ ಶಿಕ್ಷಕ ಹುದ್ದೆಗೆ ಕಾಯುತ್ತಿರುವ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಹೌದು. ರಾಜ್ಯ ಸರ್ಕಾರವು ತನ್ನ 2024-25 ನೇ ಸಾಲಿನ ಬಜೆಟ್ನಲ್ಲಿ ಪರ್ಮನೆಂಟ್ ಶಿಕ್ಷಕರ ನೇಮಕಾತಿ ನಡೆಸುವುದಾಗಿ ಘೋಷಿಸಿತ್ತು. ಅಷ್ಟೇ ಅಲ್ಲದೇ, 2024-25 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಂಜೂರಾಗಿ ಸರಿಸುಮಾರು 6,584 ಹುದ್ದೆಗಳಲ್ಲಿ ಶೇ. 80 ರಷ್ಟು ಅಂದರೆ, 5,267 ಶಿಕ್ಷಕರ ಹುದ್ದೆ (Teachers Vacancy) ಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆಯ ಅಯುಕ್ತರು ಸರ್ಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ಸರ್ಕಾರ, ಹುದ್ದೆಗಳ ಭರ್ತಿಗೆ ಆದೇಶ ನೀಡಿದೆ.
Teachers Vacancy: ಯಾವೆಲ್ಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಶೀಘ್ರ ಆದೇಶ?
ಹಾಗಿದ್ದರೆ ಸರ್ಕಾರ ಕರೆಯಲು ಯೋಜನೆ ರೂಪಿಸಿರುವ ಈ ಶಿಕ್ಷಕರ ಹುದ್ದೆಗಳು ಯಾವ್ಯಾವುವು ಹಾಗೂ ವಿದ್ಯಾರ್ಹತೆಗಳೇನು? ನೋಡೋಣ ಬನ್ನಿ.
- ಪ್ರಾಥಮಿಕ ಶಾಲಾ ಶಿಕ್ಷಕರು – 1 ರಿಂದ 5 ನೇ ತರಗತಿಯವರೆಗೆ – ಡಿ.ಎಡ್
- ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು – 6 ರಿಂದ 8 ನೇ ತರಗತಿ – ಪದವಿಯೊಂದಿಗೆ ಬಿ.ಎಡ್
- ದೈಹಿಕ ಶಿಕ್ಷಣ ಶಿಕ್ಷಕರು – ಗ್ರೇಡ್ 2 – ಪದವಿಯೊಂದಿಗೆ ಬಿ.ಪಿ.ಎ.ಡಿ ಶಿಕ್ಷಣ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪರೀಕ್ಷೆ ಹೇಗೆ?
ಸರ್ಕಾರಿ ಶಿಕ್ಷಕ ಹುದ್ದೆ (Teachers Vacancy) ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯೊಂದಿಗೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ನೇಮಕಾತಿ ಅಧಿಸೂಚನೆ ಇಲಾಖೆಯಿಂದ ಬಿಡುಗಡೆಗೊಳ್ಳಲಿದೆ.
ವರ್ಷಾನುಗಟ್ಟಲೆ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಾ ಕಾಯುತ್ತಿರುವ ಆಕಾಂಕ್ಷಿಗಳಿಗೆ ಈ ಸುದ್ದಿ ಸಂತಸ ತಂದಿದ್ದು, ಸರ್ಕಾರದ ಅಧಿಸೂಚನೆಯನ್ನೇ ಕಾಯುತ್ತಾ ಕುಳಿತಿರುವವರಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿ ಎನ್ನುವುದೇ ಹಾರೈಕೆ.