ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂಗಳನ್ನು ಕಡೆಗಣಿಸಿ ಇತರ ಮತಗಳನ್ನು ಓಲೈಕೆ ಮಾಡುವ ರಾಜಕಾರಣ ನಡೆಸುತ್ತಿದೆ ಎನ್ನುವ ಆರೋಪ ಹೊಸದೇನಲ್ಲ. ಅದರಂತೆ ಹಲವು ಪ್ರಕರಣಗಳಲ್ಲಿಯೂ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದ್ದು, ಇದೀಗ ರಾಜ್ಯದ ಎರಡು ಭಾಗಗಳಲ್ಲಿ ಅಂಗನವಾಡಿ ಟೀಚರ್ (Anganavadi Teacher Post) ಗಳಿಗೆ ಉರ್ದು ಭಾಷೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು. ರಾಜ್ಯ ಕಾಂಗ್ರೆಸ್ ಸರ್ಕಾರ ದೇಶವಿರೋಧಿ ಹೇಳಿಕೆ, ಹಬ್ಬಗಳ ಆಚರಣೆ ಹಾಗೂ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ ಹಲವು ಬಾರಿ ತಮ್ಮ ಓಲೈಕೆಯ ಮು*ಸ್ಲಿಂ ಅಪರಾಧಿಗಳನ್ನು ಕಾಪಾಡಿದ್ದಲ್ಲದೇ, ಹಿಂದೂ ಕಾರ್ಯಕರ್ತರು ಯಾವುದಾದರೂ ಸಣ್ಣಪುಟ್ಟ ವಿವಾದಗಳಲ್ಲಿ ತಗುಲುಹಾಕಿಕೊಂಡರೂ ಅವರ ವಿರುದ್ಧ ತತ್ ಕ್ಷಣ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನವನ್ನೂ ನೀಡಿದೆ. ಅದರ ನಡುವೆ ಅಂಗನವಾಡಿ ಶಿಕ್ಷಕರ ನೇಮಕಾತಿಯಲ್ಲೂ ಸರ್ಕಾರದ ನಡೆ ವಿವಾದಕ್ಕೀಡಾಗಿದೆ.
Anganavadi Teacher Post: ಯಾವ ಜಿಲ್ಲೆಯ ನೇಮಕಾತಿಯಲ್ಲಿ ವಿವಾದ?
ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕರೆಯಲಾಗಿರುವ ಅಂಗನವಾಡಿ ಟೀಚರ್ಗಳ ನೇಮಕಾತಿಗೆ ಇತ್ತೀಚೆಗೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ, ರಾಜ್ಯದ ಈ ಎರಡು ಪ್ರದೇಶಗಳಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ದಾಯವಾಗಿ ಉರ್ದು ಭಾಷೆ ತಿಳಿದಿರಬೇಕು ಎಂದು ನಮೂದಿಸಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲಾ ಗ್ರಾಮೀಣ ವ್ಯಾಪ್ತಿ ಹಾಗೂ ಮೂಡಿಗೆರೆ ನಗರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರ ಹುದ್ದೆ (Anganavadi Teacher Post) ಗಳಿಗೆ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಯಲ್ಲಿ, ಉರ್ದುವನ್ನು ಕಡ್ಡಾಯ ಭಾಷೆಯಾಗಿ ಸರ್ಕಾರ ನಿಗದಿಪಡಿಸಿದೆ. ಸ್ಥಳೀಯವಾಗಿ ಉರ್ದು ಭಾಷೆ ಮಾತನಾಡುವವರ ಅಥವಾ ಮು*ಸ್ಲಿಂ ಬಾಹುಳ್ಯವಿರುವ ಪ್ರದೇಶವಾಗಿರುವ ಸಾಧ್ಯತೆಯಿದ್ದರೂ ಕೂಡ, ನಾಡಭಾಷೆಯನ್ನು ಹೊರತುಪಡಿಸಿ, ಸ್ಥಳೀಯ ಮತಬ್ಯಾಂಕ್ಗಾಗಿ ಸರ್ಕಾರ ಉರ್ದು ಭಾಷೆಯನ್ನು ಆ ಭಾಗದಲ್ಲಿ ಕಡ್ಡಾಯ ಮಾಡಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸರ್ಕಾರದ ನಡೆಯನ್ನು ವ್ಯಾಪಕವಾಗಿ ಖಂಡಿಸಿದ ಬಿಜೆಪಿ
ಈ ಅಧಿಸೂಚನೆಯನ್ನು ಭಾರತೀಯ ಜನತಾ ಪಕ್ಷ ಹಾಗೂ ಇತರ ಸಂಘಟನೆಗಳು, ಸ್ಥಳೀಯರು ತೀವ್ರವಾಗಿ ಟೀಕಿಸಿದ್ದು, ಇದು ಕೇವಲ ಮು*ಸ್ಲಿಂ ಮತೀಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸರ್ಕಾರ ನಡೆಸಿದ ಪ್ಲಾನ್ ಎಂದಿವೆ. ಅಷ್ಟೇ ಅಲ್ಲದೇ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದ್ದು, ಅಂಗನವಾಡಿ ಟೀಚರ್ ನೇಮಕಾತಿಯಲ್ಲಿ ಸರ್ಕಾರದ ಈ ನಡೆ ಅಸಹ್ಯ ರಾಜಕೀಯದ ಪರಮಾವಧಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಈಗಾಗಲೇ ಎಲ್ಲೆಡೆ ವ್ಯಾಪಕ ವಿವಾದ ಭುಗಿಲೆದ್ದಿದ್ದು, ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.