ಮಾನವ ಸೇರಿದಂತೆ ಭೂಮಿ ಮೇಳಿರುವ ಪ್ರತಿಯೊಂದು ಜೀವಿಗಳೂ ಬದುಕಲು ಗಾಳಿ, ನೀರು, ಆಹಾರ ಹೇಗೆ ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ. ಸಂಪೂರ್ಣ ನಿದ್ದೆ ಪ್ರತಿದಿನಕ್ಕೆ ದೇಹದಲ್ಲಿ ನವ ಚೈತನ್ಯವನ್ನು ತರುತ್ತದೆ. ಮಾನವರ ವಿಷಯಕ್ಕೆ ಬಂದರೆ ಪ್ರತಿಯೊಬ್ಬರಿಗೂ ನಿದ್ರೆ ಅತ್ಯಗತ್ಯವಾಗಿ ಬೇಕೇಬೇಕು.
ಆಧುನಿಕ ಬದುಕಿನ ಜೀವನ ಶೈಲಿ, ಬದುಕಿನ ಜಂಜಾಟ ಹಾಗೂ ಕೆಲಸಗಳ ಒತ್ತಡದ ನಡುವೆ ಉತ್ತಮವಾದ, ನೆಮ್ಮದಿಯುತವಾದ ನಿದ್ರೆ ಮಾಡುವುದು ಇಂದಿನ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಉತ್ತಮ ನಿದ್ದೆಯೇ ಉತ್ತಮ ಆರೋಗ್ಯಕ್ಕೆ ಸೂತ್ರಧಾರಿ. ಈ ನಿಟ್ಟಿನಲ್ಲಿ ಯಾವ ವಯಸ್ಸಿನಲ್ಲಿ ಎಷ್ಟು ತಾಸುಗಳ ಕಾಲ ನಿದ್ದೆ ಮಾಡಬೇಕು (Best Time To Sleep) ಎನ್ನುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಮೆಕ್ಸಿಕೋದ ನ್ಯಾಷನಲ್ ಸ್ಲೀಪ್ ಪೌಂಡೇಶನ್ ವಿವಿಧ ವಯಸ್ಸಿನವರ ಎಷ್ಟು ಸಮಯ ನಿದ್ದೆ ಮಾಡಬೇಕು ಎನ್ನುವುದರ ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆರೋಗ್ಯಕರ ಜೀವನಕ್ಕಾಗಿ ಕಡಿಮೆ ಹಾಗೂ ಹೆಚ್ಚು ನಿದ್ದೆಯ ನಡುವಿನ ಸಮತೋಲನದ ಪ್ರಾಮುಖ್ಯತೆಯನ್ನು ಈ ಸಂಶೋಧನೆ ತಿಳಿಯಪಡಿಸಿದೆ.
ರಾತ್ರಿ 10 ಗಂಟೆಗೆ ಮಲಗುವವರಿಗೆ ಹೋಲಿಸಿದರೆ ಮಧ್ಯರಾತ್ರಿಯ ನಂತರ ಮಲಗುವವರಲ್ಲಿ ಹೃದಯ ರಕ್ತನಾಳದ ಅಪಾಯ ಶೇ.12 ರಷ್ಟು ಹೆಚ್ಚಿದೆ ಎನ್ನುವುದು ಈ ಸಂಶೋಧನೆಯಲ್ಲಿ ತಿಳಿದಿದೆ. ಆದ್ದರಿಂದ, ಎಲ್ಲರೂ ರಾತ್ರಿ 10 ಹಾಗೂ 11 ರ ನಡುವೆ ಮಲಗಬೇಕು ಎಂದು ಸಂಶೋದನೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಆದರೂ, ಆಧುನಿಕ ಜೀವನಶೈಲಿ, ವೈಯಕ್ತಿಕ ಬದುಕಿ ಅನಿವಾರ್ಯತೆಗಳು ಹಾಗೂ ಅಗತ್ಯತೆಗಳು, ಕೆಲಸದ ಸಮಯದಲ್ಲಿನ ಸ್ಥಿತ್ಯಂತರಗಳ ಕಾರಣದಿಂದಾಗಿ ಈ ಸಮಯದಲ್ಲಿ ನಿದ್ದೆ ಮಾಡುವುದು ಕಷ್ಟಸಾಧ್ಯವಾಗಿದೆ.
Best Time To Sleep : ವಯಸ್ಸಿನ ಅನುಗಣವಾದ ನಿದ್ದೆ ಮಾಡಬೇಕಾದ ಸಮಯ ಹೀಗಿದೆ :
ನ್ಯಾಷನಲ್ ಸ್ಲೀಪ್ ಪೌಂಡೇಶನ್ ವಯಸ್ಸಿನ ಆಧಾರದ ಮೇಲೆ ಆರೋಗ್ಯಕರ ಜೀವನಕ್ಕಾಗಿ, ಚೈತನ್ಯಯುತ ಜೀವನಕ್ಕಾಗಿ ಯಾರು ಎಷ್ಟು ತಾಸುಗಳ ಕಾಲ ನಿದ್ದೆ ಮಾಡಬೇಕು ಎನ್ನುವುದನ್ನು ಶಿಫಾರಸ್ಸು ಮಾಡಿದ್ದಾರೆ.
1) 0 – 3 ತಿಂಗಳು: ಕನಿಷ್ಟ 14 ರಿಂದ ಗರಿಷ್ಟ 17 ಗಂಟೆಗಳ ಕಾಲ ನಿದ್ದೆ ಮಾಡಬೇಕು. 09 ಗಂಟೆಗಳಿಗಿಂತ ಕಡಿಮೆ ಅಥವಾ 19 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಬಾರದು.
2) 04 – 11 ತಿಂಗಳು : ಕನಿಷ್ಟ 12 ರಿಂದ ಗರಿಷ್ಟ 15 ಗಂಟೆಗಳ ಕಾಲ ನಿದ್ದೆ ಮಾಡಬೇಕು. 10 ಗಂಟೆಗಳಿಗಿಂತ ಕಡಿಮೆ ಹಾಗೂ 18 ಗಂಟೆಗಳಿಗಿಂತ ಹೆಚ್ಚು ಅವಧಿ ನಿದ್ರಿಸಬಾರದು.
3) 1 – 2 ವರ್ಷಗಳು : ಕನಿಷ್ಟ 11 ರಿಂದ ಗರಿಷ್ಟ 14 ಗಂಟೆಗಳ ತಾಸು ನಿದ್ರಿಸಬೇಕು. 6 ತಾಸುಗಳಿಗಿಂತ ಕಡಿಮೆ ಹಾಗೂ 16 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
4) 3 – 5 ತಾಸುಗಳು : ಕನಿಷ್ಟ 10 ರಿಂದ ಗರಿಷ್ಟ 13 ಗಂಟೆಗಳ ತಾಸು ನಿದ್ರಿಸಬೇಕು. 8 ತಾಸುಗಳಿಗಿಂತ ಕಡಿಮೆ ಹಾಗೂ 14 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
5) 6 – 13 ವರ್ಷಗಳು : ಕನಿಷ್ಟ 9 ರಿಂದ ಗರಿಷ್ಟ 11 ಗಂಟೆಗಳ ತಾಸು ನಿದ್ರಿಸಬೇಕು. 7 ತಾಸುಗಳಿಗಿಂತ ಕಡಿಮೆ ಹಾಗೂ 12 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
6) 14 – 17 ವರ್ಷಗಳು : ಕನಿಷ್ಟ 8 ರಿಂದ ಗರಿಷ್ಟ 10 ಗಂಟೆಗಳ ತಾಸು ನಿದ್ರಿಸಬೇಕು. 7 ತಾಸುಗಳಿಗಿಂತ ಕಡಿಮೆ ಹಾಗೂ 11 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
7) 18 – 25 ವರ್ಷಗಳು : ಕನಿಷ್ಟ 7 ರಿಂದ ಗರಿಷ್ಟ 9 ಗಂಟೆಗಳ ತಾಸು ನಿದ್ರಿಸಬೇಕು. 6 ತಾಸುಗಳಿಗಿಂತ ಕಡಿಮೆ ಹಾಗೂ 11 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
8) 26 – 64 ವರ್ಷಗಳು : ಕನಿಷ್ಟ 7 ರಿಂದ ಗರಿಷ್ಟ 9 ಗಂಟೆಗಳ ತಾಸು ನಿದ್ರಿಸಬೇಕು. 6 ತಾಸುಗಳಿಗಿಂತ ಕಡಿಮೆ ಹಾಗೂ 10 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
9) 65 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು : ಕನಿಷ್ಟ 7 ರಿಂದ ಗರಿಷ್ಟ 8 ಗಂಟೆಗಳ ತಾಸು ನಿದ್ರಿಸಬೇಕು. 5 ತಾಸುಗಳಿಗಿಂತ ಕಡಿಮೆ ಹಾಗೂ 9 ತಾಸುಗಳಿಗಿಂತ ಹೆಚ್ಚು ನಿದ್ರಿಸಬಾರದು.
ವಯಸ್ಸಿಗನುಗುಣವಾಗಿ ಕಡಿಮೆ ನಿದ್ದೆ ಮಾಡುವುದು ಹಾಗೂ ಅತಿ ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಉತ್ತಮವಾದ ಕ್ರಮವಲ್ಲ (Best Time To Sleep) ಎನ್ನುವುದನ್ನು ಸಂಶೋಧನೆ ನಿರೂಪಿಸಿದೆ. ಈ ಸಂಶೋಧನೆ ವರದಿಯನ್ನು ಮನೋವಿಜ್ಞಾನಿಗಳು, ಮಕ್ಕಳ ವೈದ್ಯರು ಹಾಗೂ ಮೋ ವೈದ್ಯರು ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿರುವವರೆಲ್ಲರೂ ಒಪ್ಪಿದ್ದಾರೆ.
ನೀವೂ ಸಹಿತ ನಿಮ್ಮ ವಯಸ್ಸಿಗನುಗುಣವಾಗಿ ನಿಗದಿತವಾದಷ್ಟೇ ನಿದ್ದೆಯನ್ನೇ ಮಾಡಿ, ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಹಾಗೂ ಸದೃಢ ಆರೋಗ್ಯವನ್ನು ರೂಢಿಸಿಕೊಳ್ಳಿ.