ಯಶಸ್ವಿ ಕೈಗಾರಿಕೋದ್ಯಮಿ, ಭಾರತಾಂಬೆಯ ಹೆಮ್ಮೆಯ ಸುಪುತ್ರ ಹಾಗೂ ಬಡವರ ಸಂಕಷ್ಟಕ್ಕೆ ಅಂತಃಕರಣದ ಪ್ರತಿಸ್ಪಂದನೆ ನೀಡಿದ ಶ್ರೇಷ್ಠ ದಾನಿ ರತನ್ ಟಾಟಾ ಅವರು. ದೇಶದ ಉದ್ಯಮಗಳಿಗೆ ಹೊಸ ದಿಕ್ಕು ತೋರಿಸಿದ ಅವರ ಸಾಧನೆ ಇಡೀ ದೇಶಕ್ಕೆ ಮಾದರಿ. 60 ವರ್ಷಗಳ ಸುದೀರ್ಘ ಅನುಭವದ ಮಾತುಗಳು ಯುವ ಸಮುದಾಯಕ್ಕೆ ಸ್ಪೂರ್ತಿಯ (Ratan Tata Quotes ) ಸೆಲೆಯಾಗಿವೆ.
ಭಾರತದ ಅನರ್ಘ್ಯ ರತ್ನ ರತನ್ ಟಾಟಾ ಅವರ ಸ್ಪೂರ್ತಿದಾಯಕ (Ratan Tata Quots) ಮಾತುಗಳು ಇಲ್ಲಿವೆ!
“ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಕಬ್ಬಿಣವನ್ನು ನಾಶ ಮಾಡುತ್ತದೆ. ಅದೇ ರೀತಿ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಥಿತಿ ಅವರನ್ನು ನಾಶ ಮಾಡಬಹುದು.”
“ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ.”
“ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿಯಾಗಿ ಮಾಡುತ್ತೇನೆ.”
“ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸೋಲು ಕಾಣುವ ಏಕೈಕ ಮಾರ್ಗ ಎಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.”
“ಬದುಕಿನ ಕೊನೆಯಲ್ಲಿ, ನಾವು ತೆಗೆದುಕೊಳ್ಳದ ಅವಕಾಶಗಳಿಗೆ ಮಾತ್ರ ನಾವು ವಿಷಾದಪಡುತ್ತೇವೆ.”
“ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ. ಏಕೆಂದರೆ, ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದೇ ತೋರಿಸುತ್ತದೆ.”
“ನೀವು ವೇಗವಾಗಿ ನಡೆಯಬೇಕೆಂದರೆ ದಯವಿಟ್ಟು ಒಬ್ಬರೇ ನಡೆಯಿರಿ. ಆದರೆ, ತುಂಬಾ ದೂರದವರೆಗೆ ನಡೆಯಬೇಕೆಂದರೆ ನೀವು ಇನ್ನೊಬ್ಬರೊಂದಿಗೆ ಹೆಜ್ಜೆ ಹಾಕಿ.”
“ಹೊಸ ಆಲೋಚನೆಗಳಿಂದ ಮಾತ್ರ ಅದ್ವಿತೀಯವಾದುದನ್ನು ಸಾಧಿಸಲು ಸಾಧ್ಯ.”
“ನೀವು ನಿಮ್ಮ ಕೆಲಸ ಹಾಗೂ ಖಾಸಗಿ ಜೀವನದ ನಡುವಿನ ಸಮತೋಲನದ ಬಗ್ಗೆ ಮಾತಾಡುವ ಬದಲು ನಿಮ್ಮ ಕೆಲಸ ಹಾಗೂ ಖಾಸಗಿ ಜೀವನದ ಪರಸ್ಪರ ಸಮ್ಮಿಲನದ ಬಗ್ಗೆ ಆಲೋಚಿಸಿ. ಇವೆರಡನ್ನೂ ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳಿ.”
“ನೀವು ಯಾರೊಂದಿಗಾದರೂ ವ್ಯವಹರಿಸುವಾಗ ಅವರನ್ನು ಗೌರವಿಸುವುದು, ಅವರಲ್ಲಿ ಸಹಾನುಭೂತಿಯನ್ನು ಹೊಂದುವುದನ್ನು ಬಿಡಬೇಡಿ. ಅವೇ ನಿಮ್ಮ ಏಳ್ಗೆಗೆ ದಾರಿದೀಪ.”
“ಸೋಲಿಗೆ ಎಂದಿಗೂ ಹೆದರಬೇಡಿ. ಜೀವನದಲ್ಲಿ ಯಶಸ್ಸನ್ನು ಸವಿಯಲು ಮತ್ತು ಮುಂದೆ ಸಾಗಲು ಸೋಲು ಉತ್ತಮ ಮಾರ್ಗವಾಗಿದೆ.”
“ನೀವು ಕನಸಿನಿಂದ ಪ್ರಾರಂಭಿಸಿ ಉತ್ಸಾಹದಿಂದ ಕೆಲಸ ಮಾಡಿದಾಗ, ಯಶಸ್ಸು ಬರುತ್ತದೆ. ಅಂದರೆ ನಿಮ್ಮ ಸಣ್ಣ ಕನಸನ್ನು ಪೂರೈಸಲು ಉತ್ಸಾಹದಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತೆ.”
“ಯಶಸ್ಸನ್ನು ಎಂದಿಗೂ ನಿಮ್ಮ ತಲೆಗೆ ಹೋಗಲು ಬಿಡಬೇಡಿ ಮತ್ತು ಸೋಲು ನಿಮ್ಮ ಹೃದಯವನ್ನು ಮುರಿಯಲು ಎಂದಿಗೂ ಬಿಡಬೇಡಿ. ಸೋಲನ್ನು ಸಂತೋಷದಿಂದ ಸ್ವೀಕರಿಸಿ, ಮತ್ತೆ ಪ್ರಯತ್ನ ಮಾಡಿದ್ರೆ ಯಶಸ್ಸು ಖಚಿತ.”
ರತನ್ ಟಾಟಾ ಅವರ ಸ್ಫೂರ್ತಿದಾಯಕ ಮಾತುಗಳು (Ratan Tata Quotes ) ಯುವ ಸಮುದಾಯಕ್ಕೆ ಮಾತ್ರವಲ್ಲದೇ ವಿದ್ಯಾರ್ಥಿಗಳು, ಯುವಕರು ಹಾಗೂ ಹೊಸತನದ ತುಡಿತದಲ್ಲಿರುವ ಎಲ್ಲರಿಗೂ ದಾರಿದೀಪವಾಗಿವೆ.