ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆ (Horticulture Department) ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ವಿವಿಧ ಯಂತ್ರೋಪಕರಣ ಸೇರಿದಂತೆ ತೋಟಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ. ಈ ಸೌಲಭ್ಯಗಳನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಹತೆ ಏನು,ಅರ್ಜಿ ಸಲ್ಲಿಸುವ ವಿಧಾನ ಹೇಗೆ ಈ ಎಲ್ಲಾ ವಿವರಗಳು ಇಲ್ಲಿವೆ ನೋಡಿ.
ರಾಜ್ಯ ತೋಟಗಾರಿಕೆ ಇಲಾಖೆಯಿಂದ ಕೃಷಿಕರಿಗಾಗಿ ವಿವಿಧ ಯಂತ್ರೋಪಕರಣಗಳು ಹಾಗೂ ಬೀಜಗಳು, ಶೇಖರಣಾ ಘಟಕ ಮುಂತಾದ ಸೌಲಭ್ಯಗಳೊಂದಿಗೆ ಸಹಾಯಧನ ನೀಡಲಾಗುತ್ತಿದ್ದು, ಕೃಷಿಕರು ತಮ್ಮ ಅಗತ್ಯ ವಸ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯನ್ನು ಪರಿಗಣಿಸಿ ಸೂಕ್ತ ಸಹಾಯಧನ ನೀಡಲಾಗುತ್ತದೆ.
Horticulture Department ನಿಂದ ಯಾವೆಲ್ಲ ಸಹಾಯಧನ ದೊರೆಯಲಿದೆ?
- ತೋಟಗಾರಿಕೆ ಇಲಾಖೆಯಿಂದ ಕೃಷಿ ಕಾರ್ಯಗಳಿಗೆ ಮಿನಿ ಟ್ರ್ಯಾಕ್ಟರ್ (Mini Tractor)
- ಅಡಿಕೆ (Areca Palm), ಕಾಳುಮೆಣಸು(Black Pepper), ಕೋಕೋ (Cacao) ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಪರಿಶಿಷ್ಟ ಜಾತಿ (Scheduled Caste) ಯ ರೈತರಿಗೆ ಸಂಸ್ಕರಣ ಘಟಕ ಸ್ಥಾಪಿಸಲು ಸಹಾಯಧನ
- ಡ್ರ್ಯಾಗನ್ ಫ್ರುಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ
- ಹಸಿರು ಮನೆ ನಿರ್ಮಾಣಕ್ಕಾಗಿ 9000 ಸಿಎಂಟಿ ಸಾಮರ್ಥ್ಯದ ನೀರು ಸಂಗ್ರಹಣಾ ಘಟಕ ಸ್ಥಾಪನೆಗೆ ಸಹಾಯಧನ
ಆಸಕ್ತರು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ರೈತರು, ತಮ್ಮ ತಾಲ್ಲೂಕಿನ ಹಿರಿಯ ತೋಟಗಾರಿಕಾ ನಿರ್ದೇಶಕರ ಕಚೇರಿ ಅಥವಾ ತೋಟಗಾರಿಕಾ ಇಲಾಖಾ (Horticulture Department) ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಇಂತಿವೆ:
- ಆಧಾರ್ ಕಾರ್ಡ್ ಜೆರಾಕ್ಸ್
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ಪೋರ್ಟ್ ಸೈಜ್ ಫೋಟೋ
- ಪಹಣಿ ಪತ್ರ ಅಥವಾ ಆರ್ಟಿಸಿ (RTC)
- ಪಡಿತರ ಚೀಟಿ ಪ್ರತಿ
- ಜಂಟಿ ಮಾಲಕತ್ವ ಇದ್ದಲ್ಲಿ, ಪ್ರತಿ ಮಾಲಿಕರ ಸಹಿಯುಳ್ಳ ಮಾಲಕರ ಒಪ್ಪಿಗೆ ಪ್ರಮಾಣಪತ್ರ
ಈ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರ ಅರ್ಜಿಯ ಸಿಂಧುತ್ವವನ್ನು ಪರಿಶೀಲಿಸಿ, ಅವರ ಆದಾಯ ಹಾಗೂ ಇತರ ವಿವರಗಳನ್ನು ಆಧರಿಸಿ ಅರ್ಹ ಫಲಾನುಭವಿಗಳನ್ನು ತೋಟಗಾರಿಕಾ ಇಲಾಖೆ (Horticulture Department) ಗುರುತಿಸಲಿದೆ. ಫಲಾನುಭವಿಗಳ ಆಯ್ಕೆಯಾದ ನಂತರ ಅವರ ಕೋರಿಕೆಯ ತೋಟಗಾರಿಕಾ ಸೌಲಭ್ಯಕ್ಕೆ ಅನುದಾನ ಅಥವಾ ಸಹಾಯಧನ ನೀಡಲಾಗುತ್ತದೆ.
ಆಸಕ್ತ ರೈತರು, ತೋಟಗಾರಿಕಾ ಇಲಾಖೆಯ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಇಲಾಖೆ ಪ್ರಕಟಣೆ ನೀಡಿದ್ದು, ಅರ್ಹ ರೈತರಿಗೆ ಈ ಯೋಜನೆ ಅಥವಾ ಸೌಲಭ್ಯದ ಫಲ ದಕ್ಕಲಿದೆ. ತೋಟಗಾರಿಕೆಯಲ್ಲಿ ಉತ್ತಮ ಇಳುವರಿ ಹಾಗೂ ಯಶಸ್ಸು ಕಾಣಲು ಇಲಾಖೆಯ ಈ ಸಹಾಯಧನ ಸಹಕಾರಿಯಾಗಲಿದ್ದು, ರೈತಾಪಿ ವರ್ಗದವರು ಸಮರ್ಪಕವಾಗಿ ಇಂತಹ ಯೋಜನೆಯನ್ನು ಬಳಸಿಕೊಳ್ಳಬೇಕಿದೆ.