ಕಳೆದ ಹಣಕಾಸು ವರ್ಷದಲ್ಲಿ ಮಳೆಯ ಅಭಾವದಿಂದಾಗಿ, ಕೇವಲ ನಗರ ಭಾಗದಲ್ಲಷ್ಟೇ ಅಲ್ಲದೇ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕೃಷಿಪ್ರಧಾನ ಹಳ್ಳಿ ಪ್ರದೇಶಗಳಲ್ಲಿ ಕೃಷಿಗಷ್ಟೇ ಅಲ್ಲದೇ, ಕುಡಿಯುವ ನೀರಿಗೂ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಾ ಡ್ಯಾಂ (Karnataka Dams) ಗಳು ಖಾಲಿಯಾಗಿ, ಅದರಲ್ಲೂ ಕೆಲವು ಡ್ಯಾಂಗಳಲ್ಲಿ ಎಂದೂ ಕಾಣದ ಆಳದ ಪ್ರದೇಶಗಳು ಬರಿದಾಗಿ ಮೇಲೆ ಕಾಣಿಸಿದ್ದವು. ಆದರೆ, ಈ ಬಾರಿ ವರುಣ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾನೆ.
ಹೌದು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ, ಈ ಬಾರಿ ಒಂದೇ ಸಮನೆ ಸುರಿದ ದಾಖಲೆಯ ಮಳೆಗೆ ರಾಜ್ಯದ ಎಲ್ಲಾ ಡ್ಯಾಂಗಳು ತುಂಬಿ ತುಳುಕುತ್ತಿದ್ದು, ಮಳೆಗಾಲ ಕಳೆದು ಎರಡು ತಿಂಗಳಾದರೂ ಎಲ್ಲಾ ಡ್ಯಾಂಗಳು ಇನ್ನೂ ಸ್ವಲ್ಪವೂ ಖಾಲಿಯಾಗದೆ ಮೈದುಂಬಿಕೊಂಡಿವೆ.
ಈ ಬಾರಿ ಮಳೆಯೇನು ಸಾಮಾನ್ಯ ಪ್ರಮಾಣದಲ್ಲಿರಲಿಲ್ಲ. ಜೂನ್ 4 ಕ್ಕೆ ಕೇರಳದಿಂದ ಕರ್ನಾಟಕಕ್ಕೆ ಆಗಮಿಸಿದ ಮುಂಗಾರು ಪ್ರಾರಂಭದಲ್ಲಿ ಸ್ವಲ್ಪ ಕುಂಟುತ್ತಾ ಸುರಿದರೂ, ಒಂದೆರಡು ವಾರದ ನಂತರ ಒಂದೇ ಸಮನೆ ವಿಪರೀತವಾಗಿ ಸುರಿಯಲು ಆರಂಭಿಸಿತ್ತು. ಸರಿಸುಮಾರು ಜುಲೈ ಅಂತ್ಯದೊಳಗೆ, ಸಂಪೂರ್ಣವಾಗಿ ಖಾಲಿಯಾಗಿದ್ದ ಜಲಾಶಯಗಳು (Karnataka Dams) ತುಂಬಿದ್ದವೂ ಹಾಗೂ ಹೊರಹರಿವು ಬಿಡಲೇಬೇಕಾದ ಸ್ಥಿತಿ ಎದುರಾಗಿತ್ತು. ಆದರೆ, ಸೆಪ್ಟೆಂಬರ್ನಲ್ಲಿಯೂ ಮತ್ತೆ ಅಷ್ಟೇ ಉತ್ತಮ ಮಳೆಯಾಗುತ್ತಿರುವ ಕಾರಣ, ಡ್ಯಾಂಗಳು ಮತ್ತೆ ಭರ್ತಿಯಾಗಿದ್ದು, ಈ ಬಾರಿ ಎರದು ಬೆಳೆ ಅಥವಾ ಕೃಷಿ ಹಾಗೂ ಇತರ ಕಾರ್ಯಗಳಿಗೆ ನೀರಿನ ಕೊರತೆ ಉಂಟಾಗದು ಎನ್ನುವ ನಿರೀಕ್ಷೆಯಿದೆ.
Karnataka Dams: ಯಾವೆಲ್ಲಾ ಡ್ಯಾಂಗಳು ಫುಲ್?
ಈಗಾಗಲೇ ಕೆಆರ್ಎಸ್, ತುಂಗಭದ್ರಾ, ಹೇಮಾವತಿ, ಲಿಂಗನಮಕ್ಕಿ, ಸೂಪಾ ಮುಂತಾದ ರಾಜ್ಯದ ಬಹುತೇಕ ಎಲ್ಲಾ ಡ್ಯಾಂಗಳು ತಮ್ಮ ಗರಿಷ್ಟ ಮಟ್ಟವನ್ನೇ ತಲುಪಿದ್ದು, ಸುರಕ್ಷತಾ ಮಟ್ಟವನ್ನು ಮೀರಿದಾಗ ನೀರು ಹೊರಬಿಡಲಾಗುತ್ತಿದೆ.
ಇತ್ತೀಚೆಗಷ್ಟೇ ತುಂಗಭದ್ರಾ ಡ್ಯಾಂ (Tungabhadra Dam) ನ ಕ್ರಸ್ಟ್ ಗೇಟ್ ತುಂಡಾದ ಕಾರಣ ಅಪಾರ ಪ್ರಮಾಣದ ನೀರು ಸೋರಿಕೆಯಾಗಿತ್ತು. ಕಾಲುವೆಯ ನೀರನ್ನೇ ನಂಬಿ ಉತ್ತಮ ಕೃಷಿಯ ಕನಸು ಕಂಡಿದ್ದ ಹಲವು ರೈತರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದರು. ಅಷ್ಟೇ ಅಲ್ಲದೇ, ಕರ್ನಾಟಕದ ಗಡಿಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಿಗೂ ಪ್ರವಾಹದ ಭಯ ಎದುರಾಗಿತ್ತು. ಆದರೆ, ತಾತ್ಕಾಲಿಕ ಗೇಟ್ ಅಳವಡಿಕೆಯ ನಂತರವೂ ಉತ್ತಮ ಮಳೆಯಾಗಿ ಗರಿಷ್ಟ ಮಟ್ಟದ ನೀರು ಸಂಗ್ರಹವಾದ ಕಾರಣ, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಜಲಾಶಯಗಳಲ್ಲಿ ದಾಖಲೆಯ ಮಟ್ಟದ ನೀರು ಸಂಗ್ರಹ
ಕರ್ನಾಟಕದ ಎಲ್ಲಾ ಜಲಾಶಯ (Karnataka Dams)ಗಳಲ್ಲಿ ಕಳೆದ ವರ್ಷದ ಇದೇ ಸಮಯದ ನೀರಿನ ಮಟ್ಟಕ್ಕೆ ಹೋಲಿಸಿದರೆ, ಪ್ರಸ್ತುತ ನೀರಿನ ಮಟ್ಟ ಕಳೆದ ಬಾರಿಗಿಂತ 315 ಟಿಎಂಸಿಯಷ್ಟು ಹೆಚ್ಚಿದೆ ಎನ್ನಲಾಗಿದ್ದು, ಕೃಷಿಗೆ ಹಾಗೂ ಇತರ ಕಾರ್ಯಗಳಿಗೆ ಕಳೆದ ಬಾರಿಯಂತೆ ಈ ಬಾರಿ ಯಾವುದೇ ಸಮಸ್ಯೆ ಉಂಟಾಗಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ನಿಂದ ಆರಂಭವಾದ ಮುಂಗಾರಿನಿಂದ ಈವರೆಗೆ ಎಲ್ಲಾ ಜಲಾಶಯಗಳಲ್ಲಿ ಸರಿಸುಮಾರು 2000 ಟಿಎಂಸಿ ನೀರು ಶೇಖರಣೆಯಾಗಿದ್ದು, 1300 ಟಿಎಂಸಿಗಳಷ್ಟು ನೀರನ್ನು ಸುರಕ್ಷತಾ ದೃಷ್ಟಿಯಿಂದ ಹೊರಕ್ಕೆ ಹರಿಯಬಿಡಲಾಗಿದೆ.
ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಕರ್ನಾಟಕದ ಹಲವು ಭಾಗಗಳ ರೈತರಿಗೆ ಈ ಬಾರಿಯ ಮಳೆ ಹಾಗೂ ಹಾಗೂ ಡ್ಯಾಂ (Karnataka Dams) ಗಳ ಮೂಲಕ ನೀರಾವರಿ ಬಹಳ ಸಮಾಧಾನ ತಂದಿದ್ದು, ಹಿಂಗಾರು ಮಳೆಯೂ ಉತ್ತಮವಾಗಿ ಸುರಿದರೆ, ವರ್ಷದ ಎರಡನೇ ಬೆಳೆಗೆ ಯಾವುದೇ ತೊಂದರೆಯಾಗದು ಎನ್ನಲಾಗಿದೆ. ಅಷ್ಟೇ ಅಲ್ಲದೇ, ಕುಡಿಯುವ ನೀರು ಹಾಗೂ ಇತರ ಅವಶ್ಯಕತೆಗಳಿಗೆ ನೀರು ಕಡಿಮೆಯಾಗುವ ಸಂಭವ ಇಲ್ಲವಾಗಿದ್ದರೂ, ಬೆಂಗಳೂರು ಮಾತ್ರ ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವುದು ಸರ್ಕಾರಕ್ಕೆ ಹಾಗೂ ಜಲಮಂಡಳಿಗೆ ತಲೆನೋವು ಉಂಟುಮಾಡಿದೆ.