ರೈತರ ಸಬಲೀಕರಣ ಮಾಡಬೇಕು ಎಂದು ನರೇಂದ್ರ ಮೋದಿಯವರ ಎನ್ಡಿಎ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Scheme) ಜಾರಿಗೆ ತಂದಿದೆ. ಈ ಯೋಜನೆಯ ಜಾರಿಯಾದಾಗಿನಿಂದ ಪ್ರತಿ 4 ತಿಂಗಳಿಗೆ ಒಂದು ಕಂತಿನಂತೆ ರೂ. 2,000/-ಗಳ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ
ಕೇಂದ್ರ ಸರ್ಕಾರ ಇದುವರೆಗೂ 17 ಕಂತುಗಳನ್ನು ರೈತರ ಖಾತೆಗಳಿಗೆ ನೇರ ಜಮಾ ಮಾಡಿದೆ. ಇದೀಗ 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದ ರೈತರಿಗೆ ಶುಭಸುದ್ದಿ ನೀಡಿದೆ. ಮಹಾರಾಷ್ಟ್ರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ 18ನೇ ಕಂತಿನ ಹಣ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಕ್ಟೋಬರ್ 05 ರಂದು ಮಹಾರಾಷ್ಟ್ರದ ವಾಶಿಮ್ ನಲ್ಲಿ ಜರುಗುವ ಕಾರ್ಯಕ್ರಮದ ಮೂಲಕ 18ನೇ (PM Kisan 18th Instalment) ಕಂತಿನ ಹಣ ರೈತರ ಖಾತೆಗೆ ವರ್ಗಾಯಿಸಲಿದ್ದಾರೆ. ಯೋಜನೆಯಡಿ ನೋಂದಣಿಯಾಗಿರುವ ದೇಶದ 9.5 ಕೋಟಿ ರೈತರಿಗೆ ಬರೋಬ್ಬರಿ ರೂ. 20,000 ಕೋಟಿ ರೂ.ಗಳನ್ನು ವರ್ಗಾಯಿಸಲಾಗುತ್ತದೆ.
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ :
ಅತಿಸಣ್ಣ ಹಾಗೂ ಸಣ್ಣ ರೈತರ ನೆರವಿಗೆ ಪಿಎಂ ಕಿಸಾನ್ ಯೋಜನೆಯನ್ನು (PM Kisan Scheme) 2019 ರಲ್ಲಿ ನರೇಂದ್ರ ಮೋದಿಯವರ (PM Narendra Modi) ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನುಸಾರ ನೋಂದಣಿಯಾದ ರೈತರಿಗೆ ವಾರ್ಷಿಕ 6,000 ರೂ.ಗಳನ್ನು 3 ಕಂತುಗಳಲ್ಲಿ 2,000 ರೂ.ಗಳಂತೆ ವರ್ಗಾಯಿಸಲಾಗುತ್ತದೆ.
ಯೋಜನೆ ಜಾರಿಯಾದಾಗಿನಿಂದ ಈ ವರೆಗೆ 17 ಕಂತುಗಳಲ್ಲಿ ರೈತರ ಖಾತೆಗೆ ನೇರ ಹಣ ವರ್ಗಾಯಿಸಲಾಗಿದೆ. ಆರಂಭದಲ್ಲೇ ನೋಂದಣಿಯಾದ ರೈತರಿಗೆ 17 ಕಂತುಗಳ ಮೂಲಕ 34,000 ರೂ.ಗಳನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ 18ನೇ ಕಂತಿನ ಹಣವನ್ನೂ ಬಿಡುಗಡೆಗೊಳಿಸಲಾಗುತ್ತದೆ.
18ನೇ ಕಂತಿಗೆ ಇನ್ನೂ ಒಂದು ವಾರದ ಕಾಲಾವಕಾಶ ಇರುವುದರಿಂದ ರೈತರ ತಮ್ಮ ಕೆವೈಸಿ ಸರಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಅಲ್ಲದೇ, NPCI ನಲ್ಲಿ ಆದಾರ್ ಜೋಡಣೆ ಆಗಿದೆಯೇ, ಬ್ಯಾಂಕ್ ವಿವರಗಳು ಸರಿಯಿವೆಯೇ ಎನ್ನುವುದನ್ನು ಪರಿಶಿಲಿಸಿಕೊಳ್ಳಿ. ಪಿಎಂ ಕಿಸಾನ್ ಅಧಿಕೃತ ಜಾಲತಾಣಕ್ಕೆ (PM Kisan Scheme) ಭೇಟಿ ನೀಡುವ ಮೂಲಕ ನಿಮ್ಮ ಕೆವೈಸಿ ಪರಿಶೀಲಿಸಿಕೊಳ್ಳಬಹುದು. ಇಲ್ಲವೇ, ಸ್ಥಳೀಯ ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕಚೇರಿಗಳಿಗೂ ತೆರಳಿ ಪರಿಶೀಲಿಸಿಕೊಳ್ಳಬಹುದು.
ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ :
ಕೇಂದ್ರ ಕೃಷಿ ಇಲಾಖೆಯು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರಿಶೀಲಿಸುವ ವಿಧಾನ ಈ ಕೆಳಕಂಡಂತಿದೆ.
1) ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ (ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ)
2) ನಂತರ ಪಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಬೇಕು.
3) ಅನಂತರ ಬರುವ ಫಾರ್ಮ್ ನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮವನ್ನು ಆಯ್ಕೆ ಆಡಿ, Get Report ಮೇಲೆ ಕ್ಲಿಕ್ ಮಾಡಬೇಕು.
4) ಆಗ ಈ ಯೋಜನೆಯಡಿ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿ ದೊರೆಯುತ್ತದೆ.
5) ಈ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಗ್ರಾಮ ಆಡಳಿತಾಧಿಕಾರಿನ್ನು ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು.
ರಾಜ್ಯದಲ್ಲಿಯೂ ಈ ಹಿಂದಿನ ಬಿ.ಎಸ್ ಯಡಿಯೂರಪ್ಪನವರ (BS Yadiyurappa) ನೇತೃತ್ವದ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಪಿಎಂ ಕಿಸಾನ್ ಯೋಜಯಯಲ್ಲಿ ಕೇಂದ್ರದ 6 ಸಾವಿರ ರೂ.ಗಳ ಜೊತೆಗೆ 4 ಸಾವಿರ ರೂ.ಗಳನ್ನು ಸೇರಿಸಿ ನೀಡಲಾಗುತ್ತಿತ್ತು. ಆ ವೇಳೆ ರೈತರಿಗೆ ವರ್ಷದಲ್ಲಿ ಒಟ್ಟು 5 ಕಂತುಗಳಲ್ಲಿ ಹಣ ದೊರೆಕುತ್ತಿತ್ತು.