ಎಲ್ಲರ ಮನೆಯಲ್ಲೂ ಜಿರಳೆ, ನೊಣ ಹಾಗೂ ಹಲ್ಲಿಗಳ ಕಾಟ ಸರ್ವೇ ಸಾಮಾನ್ಯ. ಮಳೆಗಾಲದಲ್ಲಂತೂ ಈ ಪ್ರಮಾಣ ಹೇಳತೀರದಷ್ಟು ಅಸಹನೀಯವಾಗಿರುತ್ತದೆ. ಈ ಅವಧಿಯಲ್ಲಿ ಬ್ಯಾಕ್ಟೀರಿಯಾಗಳ ಸಂಚಾರ ಹೆಚ್ಚಾಗಿರುತ್ತದೆ. ಮೆನಯನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು ಇವುಗಳ ಓಡಾಟಕ್ಕೆ ಕಾರಣವಾಗಬಹುದು.
ಅಡುಗೆ ಮನೆ, ಸ್ನಾನಗೃಹ ಹಾಗೂ ಶೌಚಾಲಯ ಸೇರಿದಂತೆ ಮನೆಯ ವಿವಿಧ ಭಾಗಗಳಲ್ಲಿ ಜಿರಳೆ, ನೊಣ ಹಾಗೂ ಹಲ್ಲಿಗಳ ಸಂಚಾರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವುಗಳ ಓಡಾಟವನ್ನೂ ಲುಘವಾಗಿ ಪರಿಗಣಿಸಬಾರದು. ಇವು ಅಡುಗೆ ಮನೆಯಲ್ಲಿದ್ದರೆ ನಾವು ತಿನ್ನುವ ಆಹಾರವನ್ನು ಕಲುಷಿತಗೊಳಿಸುತ್ತವೆ. ಕೆಲವೊಂದು ಸಲ ಅಡುಗೆ ಊಟದಲ್ಲಿಯೇ ಬಿದ್ದು ಸತ್ತಿರುವುದನ್ನು ಕಾಣುತ್ತೇವೆ. ಆದ್ದರಿಂದ, ಮನೆಯಲ್ಲಿ ಜಿರಳೆ, ನೊಣ ಹಾಗೂ ಹಲ್ಲಿಗಳ ಸಂಚಾರವನ್ನು ನಿಯಂತ್ರಿಸುವುದು ಎಲ್ಲರ ಜವಾಬ್ದಾರಿ. ಮನೆ ಹಾಗೂ ಆವರಣದ ಒಳಗಡೆ ಕೀಟಗಳ ಓಡಾಟವನ್ನು ಹೇಗೆ ನಿಯಂತ್ರಿಸಬೇಕು (How to control cockroaches) ಎನ್ನುವುದನ್ನು ನೋಡೋಣ.
ನಿಯಂತ್ರಣಕ್ಕೆ ಇರುವ ಮಾರ್ಗೋಪಾಯಗಳು (How to control cockroaches) :
ನೈಸರ್ಗಿಕ ಕೀಟನಾಶಕಗಳು :
ಮನೆಯಲ್ಲಿನ ಹಾಗೂ ಮನೆಯ ಆವರಣದಲ್ಲಿನ ಕೀಟಗಳ ನಾಶಕ್ಕೆ ನೈಸರ್ಗಿಕವಾದ ಕೀಟನಾಶಕಗಳನ್ನು ಬಳಸಬಹುದು. ನೈಸರ್ಗಿಕ ಕೀಟ ನಾಶಕವು ಅತಿ ಶೀಘ್ರದಲ್ಲಿಯೇ ಕೀಟಗಳನ್ನು ಕೊಲ್ಲುತ್ತದೆ. ಅಲ್ಲದೇ, ಇವರ ಮನೆಯಲ್ಲಿ ವಾಸಿಸುವವರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಬಿರಿಯಾನಿ ಎಲೆಯಿಂದ ಮಾಡಿದ ಕೀಟನಾಶಕ, ಬೇವಿ ಎಲೆಗಳು ಮತ್ತು ಬೇವಿನ ಎಣ್ಣೆಯಿಂದ ಮಾಡಿದ ಕೀಟನಾಶಕಗಳು ಬಳಕೆ ಮಾಡಬಹುದು. ಬೇವಿನ ಎಲೆಯ ಕೀಟನಾಶಕವು ಹೆಚ್ಚಿನ ಪ್ರಭಾವ ಬೀರುತ್ತದೆ.
ಅಡುಗೆ ಸೋಡಾ ಮತ್ತು ಉಪ್ಪು :
ಅಡುಗೆ ಸೋಡಾ ಮತ್ತು ಉಪ್ಪಿನ ಮಿಶ್ರಣವು ಕೀಟಗಳನ್ನು ಓಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಕೀಟಗಳು ಓಡಾಡುವ ಜಾಗಗಳಲ್ಲಿ ಈ ಮಿಶ್ರಣವನ್ನು ಸಿಂಪಡಿಸಿದರೆ ಸಾಕು, ಇರುವೆಗಳು ಹಾಗೂ ಜಿರಳೆಗಳು ನಿಮ್ಮ ಮನೆಯಲ್ಲಿ ಒಂದೂ ಕಾಣಿಸುವುದಿಲ್ಲ.
ಡ್ರೈನಿಂಗ್ ಸಿಸ್ಟಂ ಕ್ಲೀನಿಂಗ್ :
ಮನೆಯಲ್ಲಿನ ಹಾಗೂ ಮನೆಯ ಪಕ್ಕದಲ್ಲೇ ಇರುವ ಟ್ರೈನೇಜ್ ಸಿಸ್ಟಂಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇವುಗಳ ಸ್ವಚ್ಛವಾಗಿಲ್ಲದಿದ್ದರೆ, ಜಿರಳೆ, ಜೀರುಂಟೆ ಸೇರಿದಂತೆ ಇನ್ನಿತರೆ ಕೀಟಗಳು ನಮ್ಮ ಮನೆಯನ್ನು ವಾಸಸ್ಥಾನವಾಗಿ ಮಾಡಿಕೊಳ್ಳುತ್ತವೆ. ಇವುಗಳು ಮನೆಯಲ್ಲಿ ವಿಸ್ತರಿಸದಂತೆ ಹಾಗೂ ಅವುಗಳ ನಾಶಕ್ಕಾಗಿ ಕಾರ್ಬೊಲಿಕ್ ಆಮ್ಲ ಮತ್ತು ಮಾರ್ಜಕದಿಂದ ಸ್ನಾನಗೃಹ ಹಾಗೂ ಸಿಂಕ್ʼಗಳನ್ನು ಸ್ವಚ್ಛಮಾಡಬೇಕು.
ವಿನೆಗರ್ ಸ್ಪ್ರೇ :
ಕೀಟಗಳನ್ನು ನಾಶಮಾಡಲು ನೀವು ವಿನೆಗರ್ ಸ್ಪ್ರೇ ಅನ್ನೂ ಬಳಸಬಹುದು. ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟಗಳು ಇರುವ ಸ್ಥಳ ಮತ್ತು ಆ ಸ್ಥಳದ ಸುತ್ತಲೂ ಸಿಂಪಡಿಸಿದೆ ಕೀಟಗಳು ನಾಶವಾಗುತ್ತವೆ.
ಪುದೀನಾ :
ಪುದೀನಾ ಎಲೆಗಳನ್ನು ಉಪಯೋಗಿಸಿಯೂ ಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಕೀಟಗಳನ್ನು ಓಡಿಸಬಹುದು. ಆವರಣದಲ್ಲಿ ಪುದೀನಾ ಎಲೆಗಳನ್ನು ಚೂರು-ಚೂರು ಮಾಡಿ ಹಾಕಬೇಕು. ಆ ಮೂಲಕ ಆವರಣದಲ್ಲಿರುವ ಎರೆಹುಳು ಸೇರಿದಂತೆ ಇನ್ನಿತರ ಕೀಟಗಳು ಓಡಿಹೋಗುತ್ತವೆ. ಪುದೀನಾದ ವಾಸನೆಯು ಕೀಟಗಳನ್ನು ಓಡಿಸುವಲ್ಲಿ ಸಹಾಯ ಮಾಡುತ್ತದೆ. ಪುದೀನಾದ ಎಲೆಗಳಲ್ಲು ಅಡುಗೆಮನೆ ಹಾಗೂ ಇತರೆ ಪ್ರದೇಶಗಳಲ್ಲೂ ಬಳಸಬಹುದು.
ನಾವೆಲ್ಲರೂ ನಮಗೆ ರೋಗ ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸುತ್ತೇವೆಯೋ, ಹಾಗೆಯೇ ಮನೆಯಲ್ಲಿ ಕೀಟಗಳು ವಾಸಿಸದಂತೆ ಜಾಗ್ರತೆ ವಹಿಸಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ಇದಕ್ಕೆಲ್ಲ ರಾಮಬಾಣ. ಆದಾಗ್ಯೂ, ನಿಮ್ಮ ಮನೆಯಲ್ಲಿ ಹಲ್ಲಿ, ಜಿರಳೆ ಸೇರಿದಂತೆ ಇನ್ನಿತರೆ ಕೀಟಗಳು ಬಂದಲ್ಲಿ ಈ ಮೇಲಿನ ಕ್ರಮಗಳನ್ನು ಅನುಸರಿಸಬಹುದು.