ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ತನ್ನ ಮೂರನೇ ಅವಧಿಯಲ್ಲಿ ಕೆಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಅದರಂತೆಯೇ ಇದೀಗ ಕೆಲವು ಯೋಜನೆಗಳ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲು ಇಚ್ಛಿಸಿದ್ದು, ಆ ಬದಲಾವಣೆಗಳು ಅಕ್ಟೋಬರ್ 1 ರಿಂದಲೇ ಜಾರಿಗೆ ಬಂದಿವೆ. ಹಾಗಿದ್ದರೆ ಕೇಂದ್ರ ಸರ್ಕಾರದ ಯಾವ ಯೋಜನೆಗಳ ಮಾರ್ಗಸೂಚಿ (Central Govt Rules) ಗಳಲ್ಲಿ ಅಂತಹ ಮಹತ್ವದ ಬದಲಾವಣೆಗಳನ್ನು ತರಲಾಗಿದೆ ಅನ್ನೋದನ್ನ ನೋಡೋಣ ಬನ್ನಿ.
ಹಲವು ಜನಪರ ಯೋಜನೆಗಳು ಹಾಗೂ ಆದೇಶಗಳಲ್ಲಿನ ಮಾರ್ಗಸೂಚಿಗಳನ್ನು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹಾಗೂ ದೇಶದ ಅಧಿಕೃತ ದಾಖಲೆಗಳ ಸಮರ್ಪಕ ಬಳಕೆಯನ್ನು ಅನುವಾಗಿಸಲು, ರೂಲ್ಸ್ಗಳಲ್ಲಿ ತಂದ ಮಹತ್ವದ ಬದಲಾವಣೆಗಳು ಇಲ್ಲಿವೆ ನೋಡಿ:
Central Govt Rules: ಪಾನ್ ಕಾರ್ಡ್ ಸಂಬಂಧಿತ ಪ್ರಕ್ರಿಯೆಗಳಿಗೆ ಆಧಾರ್ ಕಡ್ಡಾಯವಲ್ಲ
ಇದುವರೆಗೆ ಪಾನ್ ಕಾರ್ಡ್ (PAN Card) ಅಥವಾ ಆದಾಯ ತೆರಿಗೆ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಐಡಿ ಕಡ್ಡಾಯವಾಗಿತ್ತು. ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ವಿಚಾರದಲ್ಲಿ ಆಧಾರ್ ಕಾರ್ಡ್ (Aadhaar Card) ನಮೂದಿಸುವುದು ಅಥವಾ ಲಿಂಕ್ ಮಾಡುವುದನ್ನು ಈವರೆಗೆ ಕಡ್ಡಾಯಗೊಳಿಸಲಾಗಿತ್ತು. ಆದರೆ ಇನ್ನು ಮುಂದೆ ಪಾನ್ ಸಂಬಂಧಿತ ಯಾವುದೇ ಪ್ರಕ್ರಿಯೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರ ತಿಳಿಸಿದೆ. ಆ ಮೂಲಕ ಆಧಾರ್ ಕಾರ್ಡ್ ಬಗ್ಗೆ ಇದ್ದ ರೂಲ್ಸ್ (Central Govt Rules) ನಲ್ಲಿ ಮಹತ್ವದ ಬದಲಾವಣೆ ತಂದಂತಾಗಿದೆ.
ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿಯೂ ಬದಲಾವಣೆ
ಇತ್ತೀಚೆಗೆ ಅತ್ಯಂತ ಪ್ರಚಾರ ಪಡೆದುಕೊಳ್ಳುತ್ತಿರುವ ಅಂಚೆ ಕಚೇರಿಯ ಸಣ್ಣ ಉಳಿತಾಯ ಸ್ಕೀಂಗಳು, ಅದರಲ್ಲೂ ಮುಖ್ಯವಾಗಿ ಪಿಪಿಎಫ್ (PPF) ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಇತರ ಯೋಜನೆಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಈ ಯೋಜನೆಗಳಲ್ಲಿ ಖಾತೆ ತೆರೆಯುವ ಅಪ್ರಾಪ್ತ (Minor) ಮಕ್ಕಳ ಖಾತೆಗಳಿಗೆ ಇನ್ನು ಮುಂದೆ ಹೆತ್ತವರ ಖಾತೆಯ ವಿವರಗಳನ್ನು ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೇ, ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳು, ಅಪ್ರಾಪ್ತ ವಯಸ್ಕರ ಖಾತೆಗಳು ಹಾಗೂ ಅನಿವಾಸಿ ಭಾರತೀಯರ ಖಾತೆಗಳ ವಿಸ್ತರಣೆಯಲ್ಲೂ ಹಲವು ಬದಲಾವಣೆ (Central Govt Rules) ಗಳನ್ನು ತರಲಾಗಿದೆ.
ಟಿಡಿಎಸ್ ಪಾವತಿಯಲ್ಲಿ ಸರ್ಕಾರಿ ಬಾಂಡ್ಗಳಿಗೆ ಬದಲಾದ ರೂಲ್ಸ್
ಕೇಂದ್ರ ವಿತ್ತ ಸಚಿವಾಲಯದಡಿ ಬರುವ ಟಿಡಿಎಸ್ (TDS) ಪಾವತಿ ಪ್ರಕ್ರಿಯೆಯಲ್ಲಿಯೂ ಅಕ್ಟೋಬರ್ 1 ರಿಂದ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಯಡಿ ಬರುವ ಕೆಲವು ನಿರ್ದಿಷ್ಟ ಬಾಂಡ್ಗಳಿಗೆ 10% ಟಿಡಿಎಸ್ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೇ, ಜೀವ ವಿಮೆ ಪಾಲಿಸಿ, ಮನೆ ಬಾಡಿಗೆ ಪಾವತಿ ಹಾಗೂ ಇತರ ವ್ಯವಹಾರಗಳಿಗೂ ಹೊಸ ಟಿಡಿಎಸ್ ರೂಲ್ಸ್ ಅನ್ವಯವಾಗುತ್ತಿದೆ.
ಭವಿಷ್ಯ ನಿಧಿ ಮತ್ತು ಆಯ್ಕೆ(F&O) ಗಳಲ್ಲಿ ಬರುವ ಭದ್ರತಾ ವ್ಯಹವಾರ ತೆರಿಗೆಯ ಸ್ಲ್ಯಾಬ್ ಹೆಚ್ಚಳವಾಗಲಿದ್ದು, ಅಕ್ಟೋಬರ್ 1 ರಿಂದಲೇ ಈ ಹೊಸ ರೂಲ್ಸ್ (Central Govt Rules) ಅನ್ವಯವಾಗುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಬಳಕೆಯಾಗುವ ಈ ಒಪ್ಪಂದಗಳಲ್ಲಿನ ತೆರಿಗೆಯ ಮೊತ್ತ ಆಯ್ಕೆಗಳಿಗೆ ಪ್ರೀಮಿಯಂ ಮೇಲೆ 0.0625% ನಿಂದ 0.1% ಹೆಚ್ಚಳವಾದರೆ, ಭವಿಷ್ಯ ನಿಧಿಯ ಮಾರಾಟಗಳಲ್ಲಿ ವ್ಯವಹಾರ ಮೊತ್ತದ ಮೇಲಿನ ಭದ್ರತಾ ವ್ಯವಹಾರ ತೆರಿಗೆ 0.0125% ನಿಂದ 0.02% ಗೆ ಹೆಚ್ಚಳವಾಗಿದೆ.