ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಾಗಲೇ ಕೆಲವು ಜನಪರ ಯೋಜನೆಗಳನ್ನು ತಂದಿವೆ. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದರೆ, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಸ್ಕೀಂಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ, ಗೃಹ ಲಕ್ಷ್ಮಿ ಯೋಜನೆ ಹಾಗೂ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದೆ. ಇದೀಗ ಕೇಂದ್ರ ಸರ್ಕಾರ ಗರ್ಭಿಣಿಯರಿಗಾಗಿ ಹೊಸ ಸ್ಕೀಂ (PM Matru Vandana Yojana) ನ್ನು ಘೋಷಿಸಿದ್ದು, ದೇಶಾದ್ಯಂತ ಗರ್ಭಿಣಿಯರಿಗೆ ಸಂತಸವನ್ನುಂಟು ಮಾಡಿದೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಯಾವುದು? ಸೌಲಭ್ಯಗಳೇನು ಹಾಗೂ ಅರ್ಜಿ ಸಲ್ಲಿಸೋದು ಹೇಗೆ ಈ ಎಲ್ಲಾ ವಿವರಗಳನ್ನು ಹೇಳ್ತೀವಿ ನೋಡಿ.
ದೇಶದಾದ್ಯಂತ ಪುಟ್ಟ ಮಕ್ಕಳು, ಸ್ತ್ರೀಯರು, ಹಿರಿಯ ನಾಗರಿಕರಿಗೂ ವಿಶೇಷ ಯೋಜನೆಗಳನ್ನು ಕಲ್ಪಿಸಿರುವ ಶ್ರೀ ನರೇಂದ್ರ ಮೋದಿ (Narendra Modi) ಯವರ ಕೇಂದ್ರ ಬಿಜೆಪಿ ಸರ್ಕಾರ, ಇದೀಗ ಗರ್ಭಿಣಿ ಮಹಿಳೆಯರಿಗೆ ಪ್ರಧಾನ ಮಂತ್ರಿ ಮಾತೃತ್ವ ವಂದನಾ (PM Matru Vandana Yojana) ಎನ್ನುವ ಹೆಸರಿನ ವಿಶೇಷ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯಲ್ಲಿ ಗರ್ಭಿಣಿಯರಿಗೆ ದೊರಕಲಿರುವ ಸೌಲಭ್ಯಗಳೇನು, ಅರ್ಜಿ ಸಲ್ಲಿಕೆ ಹೇಗೆ ಎಲ್ಲಾ ವಿವರಗಳು ಇಲ್ಲಿವೆ.
PM Matru Vandana Yojana: ವಿವಿಧ ಕಂತುಗಳಲ್ಲಿ ಗರ್ಭಿಣಿಗೆ ಸಿಗಲಿದೆ 11,000 ರೂ!
ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ದೇಶದ ಗರ್ಭಿಣಿ ಮಹಿಳೆಯರಿಗೆ ವಿವಿಧ ಕಂತುಗಳ ಮೂಲಕ ರೂ.11000 ಆರ್ಥಿಕ ಸಹಾಯ ನೀಡುವ ಯೋಜನೆಯನ್ನು ಸನ್ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರು 2017 ರಲ್ಲಿ ಘೋಷಿಸಿದ್ದರು. ಗರ್ಭಿಣಿಯ ವೈಯುಕ್ತಿಕ ಬ್ಯಾಂಕ್ ಖಾತೆಗೆ ನೇರವಾಗಿ (DBT) ಯೋಜನೆಯ ಹಣವನ್ನು ವರ್ಗಾಯಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಆರ್ಥಿಕವಾಗಿ ಗರ್ಭಿಣಿಯರ ಪಾಲಿಗೆ ಈ ಯೋಜನೆ ಕೈಹಿಡಿಯಲಿದೆ.
ಈ ಯೋಜನೆಯ ಫಲ ಪಡೆಯಲು ಅರ್ಹತೆಗಳೇನು?
- ಗರ್ಭಿಣಿ 19 ವರ್ಷ ಮೇಲ್ಪಟ್ಟವರಾಗಿರಬೇಕು.
- ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತ್ರ ಈ ಯೋಜನೆಯ ಸೌಲಭ್ಯ
- ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ಯೋಜನೆಯ ಸೌಲಭ್ಯ
ಅರ್ಜಿ ಸಲ್ಲಿಕೆಯ ವಿಧಾನ ಹಾಗೂ ಬೇಕಾಗುವ ದಾಖಲೆಗಳ ವಿವರ ಇಲ್ಲಿದೆ!
ಗರ್ಭಿಣಿ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, https://pmmvy.wcd.gov.in/Account/Login ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಇಲ್ಲವಾದಲ್ಲಿ, ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿಗೆ ಭೇಟಿ ನೀಡಿ, ಗರ್ಭಿಣಿಯಾಗಿರುವ ಬಗ್ಗೆ ವೈದ್ಯಕೀಯ ದಾಖಲೆ ಒದಗಿಸಿದಲ್ಲಿ, ಗರ್ಭಿಣಿಯರ ಖಾತೆಗೆ ನೇರವಾಗಿ PM Matru Vandana Yojana ಕಂತಿನ ಹಣ ಜಮೆಯಾಗಲಿದೆ. ಆದರೆ, ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಈ ಯೋಜನೆಯ ಅನ್ವಯವಾಗುವುದಿಲ್ಲ ಹಾಗೂ ಎರಡನೇ ಬಾರಿಗೆ ಗರ್ಭಿಣಿಯಾಗುವವರಿಗೆ ಈ ಸೌಲಭ್ಯ ದೊರಕುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಇಂತಿವೆ:
- ಆಧಾರ್ ಕಾರ್ಡ್
- ಜನ ಪ್ರಮಾಣ ಪತ್ರ
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಬ್ಯಾಂಕ್ ಖಾತೆಯ ವಿವರ
- ಗರ್ಭಿಣಿಯಾಗಿರುವ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್
ಇನ್ನು ಈ ಯೋಜನೆಯ ವಿಶೇಷ ಸೌಲಭ್ಯವೆಂಬಂತೆ, ಕೇವಲ ಆರ್ಥಿಕ ನೆರವು ಅಲ್ಲದೇ, ಗರ್ಭಿಣಿಗೆ ಗರ್ಭಧಾರಣೆಯ ಮುನ್ನ ಹಾಗು ಗರ್ಭಧಾರಣೆಯ ನಂತರದ ಔಷಧಿ ಹಾಗೂ ಇತರ ವೈದ್ಯಕೀಯ ಪರೀಕ್ಷೆಗಳ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
PM Matru Vandana Yojana: ಕಂತುಗಳ ಮೂಲಕ ಈ ರೀತಿ ಗರ್ಭಿಣಿಯ ಖಾತೆಗೆ ನೇರ ಜಮೆ
ಬೇರೆ ಬೇರೆ ಕಂತುಗಳಲ್ಲಿ ಈ ಯೋಜನೆಯಡಿ 11,000 ಹಣ ದೊರೆಯಲಿದೆ. ಮೊದಲ ಕಂತಿನಲ್ಲಿ ರೂ. 5000 ಹಾಗೂ ಹೆಣ್ಣು ಮಗುವಾದರೆ ಎರಡನೇ ಕಂತಿನಲ್ಲಿ ರೂ. 6000 ನೆರವು ದೊರೆಯಲಿದೆ. ಮೊದಲ ಕಂತಿನ ರೂ. 5000 ನೆರವಿನಲ್ಲಿ, ANC ಆದ ನಂತರ 3000 ರೂ. ಹಾಗೂ ಮಗು ಜನಿಸಿ ಜನನ ನೋಂದಣಿ ಆಗಿ, ಮಗುವಿಗೆ ಮೊದಲ ಲಸಿಕೆ ನೀಡಿದ ನಂತರ 2000 ಗಳನ್ನು ನೀದಲಾಗುತ್ತದೆ. ಗರ್ಭಿಣಿಗೆ ಹೆಣ್ಣುಮಗುವಾದರೆ ಎರಡನೇ ಕಂತಿನ ರೂ. 6000 ನ್ನು ಒಂದೇ ಬಾರಿಗೆ ನೇರವಾಗಿ ಬಾಣಂತಿಯ ಖಾತೆ ಜಮೆ ಮಾಡಲಾಗುತ್ತದೆ.
ತಾಯಿ ಹಾಗೂ ಸ್ತ್ರೀಗೆ ಹೆಚ್ಚು ಗೌರವಯುತವಾದ ಸ್ಥಾನ ನೀಡುವ ಸಂಸ್ಕಾರ ಇರುವ ಈ ದೇಶದಲ್ಲಿ, ಗರ್ಭಿಣಿಯರಿಗೆ ಇಂತಹ ಉತ್ತಮ ಯೋಜನೆಗಳನ್ನು ಘೋಷಿಸಿರುವುದು ನಿಜಕ್ಕೂ ಪ್ರಶಂಸನೀಯ. ಈ ಯೋಜನೆಯ ಸೌಲಭ್ಯವನ್ನು ಎಲ್ಲಾ ಅರ್ಹ ಮಹಿಳೆಯರು (ಗರ್ಭಿಣಿಯರು) ಪಡೆದುಕೊಂಡಲ್ಲಿ, ಯೋಜನೆಯ ಮೂಲ ಉದ್ದೇಶ ಸಾಕಾರಗೊಳ್ಳಲಿದೆ.