ಉತ್ತಮ ಮೈಲೇಜ್ ಹಾಗೂ ಕಡಿಮೆ ಬೆಲೆಯ ಬೈಕ್ಗಳೊಂದಿಗೆ ಮಧ್ಯಮ ವರ್ಗದವರ ಪಾಲಿಗೆ ಕನಸಿನ ಸಾರಥಿಯಾಗಿರುವ ಹೀರೋ ಮೋಟೋಕಾರ್ಪ್ (Hero MotoCorp), ತನ್ನ ಎಲ್ಲ ಬೈಕ್ಗಳನ್ನು ಮಧ್ಯಮ ವರ್ಗ ಹಾಗೂ ಬಡವರ್ಗದವರ ಕೈಗೆಟಕುವ ದರದಲ್ಲೇ ಬಿಡುಗಡೆ (Hero Bike Offers) ಗೊಳಿಸುತ್ತದೆ. ಹಲವು ದಶಕಗಳಿಂದ ಭಾರತದ ಬೈಕ್ ಪ್ರಿಯರ ಮನಗೆದ್ದಿರುವ ಹೀರೋ ಕಂಪನಿಯ ಸ್ಪ್ಲೆಂಡರ್, ಪ್ಯಾಷನ್ ಪ್ರೋ, ಸ್ಪ್ಲೆಂಡರ್ ಪ್ಲಸ್ ಅಷ್ಟೇ ಅಲ್ಲದೇ, ಇತ್ತೀಚೆಗೆ ಆಫ್-ರೋಡಿಂಗ್ ಪ್ರಿಯರ ಪಾಲಿನ ಬಿಎಂಡಬ್ಲ್ಯೂ ಎಂದೆನಿಸಿಕೊಂಡಿರುವ ಹೀರೋ ಎಕ್ಸ್ಪಕಲ್ಸ್ ಮುಂತಾದ ಬೈಕ್ಗಳೊಂದಿಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ದ್ವಿಚಕ್ರ ವಾಹನ ಸೇವೆಯನ್ನು ಹೀರೋ ನೀಡುತ್ತಿದೆ.
ಇದೀಗ ಹೀರೋ ಮೋಟೋಕಾರ್ಪ್ ತನ್ನ ಬೈಕ್ಗಳ ಮೇಲೆ ಆಕರ್ಷಕ ಹಬ್ಬದ ಸೀಸನ್ ಆಫರ್ (Hero Bike Offers) ಗಳನ್ನು ಘೋಷಿಸಿದ್ದು, ಸರಿಸುಮಾರು ₹10,000 ದಷ್ಟು ಕಡಿಮೆ ಬೆಲೆಗೆ ಹೀರೋ ಬೈಕ್ಗಳು ದೊರಕಲಿವೆ. ಹಾಗಿದ್ದರೆ, ಯಾವ ಬೈಕ್ಗಳ ಮೇಲೆ ಯಾವೆಲ್ಲಾ ಆಫರ್ ನೀಡಲಾಗಿದೆ ಎನ್ನುವುದನ್ನು ನೋಡೋಣ ಬನ್ನಿ.
Hero Bike Offers: ಹಬ್ಬದ ಸೀಸನ್ಗೆ ಸಖತ್ ಆಫರ್!
ಹೀರೋ ಮೋಟೋಕಾರ್ಪ್ ತನ್ನ ಬೈಕ್ ರೇಂಜ್ಗಳ ಮೇಲೆ ಲಿಮಿಟೆಡ್ ಟೈಂ ಆಫರ್ ಅನ್ನು ಘೋಷಿಸಿದ್ದು, ಈ ಹಬ್ಬದ ಸೀಸನ್ನಲ್ಲಿ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರು ತಮ್ಮ ಹಬ್ಬದ ಸಂಭ್ರಮವನ್ನು ಬೈಕ್ನೊಂದಿಗೆ ಆಚರಿಸಲು ಅವಕಾಶ ನೀಡಿದೆ.
ನವರಾತ್ರಿ ಹಬ್ಬದ ಅಫರ್ ಘೋಷಿಸಿರುವ ಹೀರೋ ಮೋಟೋಕಾರ್ಪ್ ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 12 ರವರೆಗೆ ಲಿಮಿಟೆಡ್ ಟೈಂ ಆಫರ್ (Hero Bike Offers) ನ್ನು ಘೋಷಿಸಿದ್ದು, ತನ್ನ ಆಯ್ದ ಬೈಕ್ಗಳ ಮೇಲೆ ಸರಿಸುಮಾರು ₹5,500 ದಷ್ಟು ಡಿಸ್ಕೌಂಟ್ ಆಫರ್ ನೀಡಿದೆ. ಅಷ್ಟೇ ಅಲ್ಲದೇ, ಹೆಚ್ಚುವರಿ ₹5,000 ರೂಪಾಯಿಗಳ ಆಕರ್ಷಕ್ ಕ್ಯಾಶ್ಬ್ಯಾಕ್ ನ್ನು ಘೋಷಿಸಿದ್ದು, ಈ ಆಫರ್ ಕೇವಲ ನವರಾತ್ರಿಯಲ್ಲಿ ಮಾತ್ರ ಗ್ರಾಹಕರಿಗೆ ದೊರಕಲಿದೆ. ಅಷ್ಟೇ ಅಲ್ಲದೇ, ಇದೇ ಆಫರ್ ದೀಪಾವಳಿ ಸಮಯದಲ್ಲೂ ಕೂಡ ಲಭ್ಯವಿರಲಿದೆ ಎನ್ನಲಾಗಿದೆ.
ಯಾವ ಬೈಕ್ಗಳ ಮೇಲೆ Hero MotoCorp ಆಫರ್!
ಹೀರೋ ಮೋಟೋಕಾರ್ಪ್ ಇತ್ತೀಚೆಗಷ್ಟೇ ಲಾಂಚ್ ಮಾಡಿದ ಹೀರೋ ಸ್ಪ್ಲೆಂಡರ್ ಪ್ಲಸ್ 100 ಸಿಸಿ ಬೈಕ್ನ ಮೇಲೆ ಅತ್ಯಾಕರ್ಷಕ ಆಫರ್ನ್ನು ನೀಡಿದ್ದು, ಬೈಕ್ ಖರೀದಿಸುವ ಗ್ರಾಹಕರಿಗೆ ₹5,000 ದವರೆಗೆ ಡಿಸ್ಕೌಂಟ್ನ್ನು ನೀಡುತ್ತಿದೆ. ಅಷ್ಟೇ ಅಲ್ಲದೇ, ₹82,900 ಆನ್ ರೋಡ್ ಬೆಲೆ ಹೊಂದಿರುವ ಈ ಬೈಕ್, ಈ ನವರಾತ್ರಿ ಆಫರ್ಗಳ ಮೂಲಕ ₹75,000 ಕ್ಕೂ ನಿಮಗೆ ಲಭ್ಯವಾಗಲಿದೆ.
ಅಷ್ಟೇ ಅಲ್ಲದೇ, ಹೀರೋ ತನ್ನ ಸ್ಕೂಟಿಗಳ ಮೇಲೂ ಸಖತ್ ಆಫರ್ (Hero Bike Offers) ಘೋಷಿಸಿದ್ದು, ಸರಿಸುಮಾರು ₹71,000 ಆಸುಪಾಸಿನಲ್ಲಿ ಖರೀದಿಸಬಹುದಾದ ಹೀರೋ ಎಕ್ಸ್ಓಓಓಎಂ (Hero XOOM), ಡೆಸ್ಟಿನಿ ಪ್ರೈಮ್ (Destiny Prime), ಪ್ಲೆಶರ್ ಪ್ಲಸ್ ಎಕ್ಸ್ಟಿಇಸಿ (Pleasure Plus XTEC) ಸ್ಕೂಟಿಗಳ ಮೇಲೆ ಸರಿಸುಮಾರು ₹5,000 ರೂ. ಗಳ ಡಿಸ್ಕೌಂಟ್ನ್ನು ನೀಡಿದ್ದು, ಡೆಸ್ಟಿನಿ ಪ್ರೈಂ (Destiny Prime) ಸ್ಕೂಟಿಯ ಮೇಲೂ ಆಫರ್ ನೀಡಿದೆ.
ನವರಾತ್ರಿ ಆಫರ್ಗೆ Hero ಇಟ್ಟಿರೋ ಹೆಸರೇನು ಗೊತ್ತೇ?!
ಈ ನವರಾತ್ರಿ ದಸರಾ ಆಫರ್ಗೆ ಶುಭ ಮುಹೂರ್ತ (Shubh Muhurat) ಎಂದು ಹೆಸರಿಟ್ಟಿರುವ ಹೀರೋ ಮೋಟೋಕಾರ್ಪ್ (Hero MotoCorp), ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಈ ಎಲ್ಲಾ ಆಫರ್ಗಳ ಬಗ್ಗೆ ಸಂಪೂರ್ಣ ವಿವರ ನೀಡಿದೆ. ಮಧ್ಯಮ ವರ್ಗದ ಬೈಕ್ ಪ್ರಿಯರು ಈ ಹಬ್ಬದ ಸೀಸನ್ನಲ್ಲಿ ಬೈಕ್ ಖರೀದಿಸುವ ಪ್ಲಾನ್ ಹೊಂದಿದ್ದಲ್ಲಿ ಇದೇ ಬೆಸ್ಟ್ ಟೈಂ. ಹಬ್ಬಕ್ಕೆ ಹೀರೋ ಬೈಕ್ನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ನಿಮ್ಮ ಮನೆಗೆ ತನ್ನಿ, ಕುಟುಂಬದವರೊಂದಿಗೆ ಸಂತೋಷವನ್ನು ಆಚರಿಸಿ.