ವಿವಿಧ ಬ್ಯಾಂಕ್ಗಳಲ್ಲಿ ಹಣ ಉಳಿಸುವ ಸ್ಕೀಂಗಳು, ಉಳಿತಾಯ ಖಾತೆ, ಆರ್ಡಿ ಖಾತೆ ಹಾಗೂ ಇತರ ಸೂಪರ್ ಸೇವರ್ ಖಾತೆಗಳ ಮೂಲಕ ಗ್ರಾಹಕರಿಗೆ ಹಣ ಉಳಿಸುವ ಅವಕಾಶಗಳನ್ನು ಬ್ಯಾಂಕ್ಗಳು ನೀಡುತ್ತಿವೆ. ಅಂತೆಯೇ, ಪೋಸ್ಟ್ ಆಫೀಸ್, ರಾಷ್ಟ್ರೀಕೃತ ಬ್ಯಾಂಕ್ಗಳು, ಸಹಕಾರಿ ಸಂಘಗಳಲ್ಲಿಯೂ ಉಳಿತಾಯಕ್ಕೆ ವಿವಿಧ ಅವಕಾಶಗಳನ್ನು ನೀಡಲಾಗಿದೆ. ಆದರೆ, ನೀವು ಈ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿದ್ದರೆ, ನಿಮ್ಮ ಖರೀದಿಗಳ ಮೇಲೆ ಸರಿಸುಮಾರು ₹40,000 ಕ್ಕೂ ಅಧಿಕ ಹಣವನ್ನು ಉಳಿಸುವ ಅವಕಾಶ (Bank Offer) ವಿದೆ!!
ಹೌದು. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ಪಾವತಿ ವಿಧಾನಗಳಲ್ಲಿ ಹಾಗೂ ಅಕೌಂಟ್ನಿಂದ ಹಣ ಪಾವತಿ ಮಾಡಿದಲ್ಲಿ, ₹40,000 ಕ್ಕೂ ಅಧಿಕ ಹಣ ಉಳಿಸುವ ಅಥವಾ ಡಿಸ್ಕೌಂಟ್ ಪಡೆಯುವ ಅವಕಾಶ (Bank Offer) ವನ್ನು ನೀಡಿದೆ. ಹಾಗಿದ್ದರೆ ಇಷ್ಟೊಂದು ಆಫರ್ ನೀಡಿರೋ ಆ ಬ್ಯಾಂಕ್ ಯಾವುದು? ಯಾವೆಲ್ಲಾ ವ್ಯವಹಾರಗಳಿಗೆ ಆಫರ್? ಇಲ್ಲಿದೆ ನೋಡಿ ವಿವರ.
Bank Offer: ಗ್ರಾಹಕರಿಗೆ ಸೂಪರ್ ಸೇವಿಂಗ್ ಆಫರ್ ನೀಡಿರೋದು ಇದೇ ಬ್ಯಾಂಕ್!
ಖಾಸಗಿ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಐಸಿಐಸಿಐ (ICICI) ಬ್ಯಾಂಕ್, ತನ್ನ ಗ್ರಾಹಕರಿಗೆ ಪ್ರತಿಬಾರಿಯೂ ಹಲವಾರು ಆಫರ್ಗಳನ್ನು ನೀಡುತ್ತದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಎಂಐ ಮುಂತಾದ ವ್ಯವಹಾರಗಳಲ್ಲಿ ಗ್ರಾಹಕಸ್ನೇಹಿ ಆಫರ್ ಹಾಗು ಸೇವೆಗಳನ್ನು ಹೊಂದಿರುವ ICICI, ಇದೀಗ ಹಬ್ಬದ ಸೀಸನ್ಗಳಲ್ಲಿ ಗ್ರಾಹಕರಿಗೆ ಸಖತ್ ಆಫರ್ ನೀಡಿದೆ.
ಈಗಾಗಲೇ ಆರಂಭವಾಗಿರುವ ದಸರಾ ಸೀಸನ್ನಲ್ಲಿ ಗ್ರಾಹಕರಿಗೆ ವಿವಿಧ ಇಲೆಕ್ಟ್ರಾನಿಕ್ಸ್, ವಾಹನ ಖರೀದಿ, ಪೀಠೋಪಕರಣ ಇತ್ಯಾದಿ ಖರೀದಿ ಹಾಗೂ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಖರೀದಿಯ ಮೇಲೆ ಅಕರ್ಷಕ ಡಿಸ್ಕೌಂಟ್ ಆಫರ್ಗಳನ್ನು ಈ ಬ್ಯಾಂಕ್ ನೀಡಿದ್ದು, ಖರೀದಿಯ ಮೇಲೆ ಸರಿಸುಮಾರು 40 ಸಾವಿರ ರೂ. ವರೆಗೂ ಉಳಿಸಬಹುದಾಗಿದೆ.
Bank Offer: ಈ ಬ್ರಾಂಡ್ ಉತ್ಪನ್ನಗಳ ಮೇಲೆ ಸಖತ್ ಆಫರ್!
ಈಗಾಗಲೇ ICICI ಘೋಷಿಸಿರುವ ಆಫರ್ಗಳಲ್ಲಿ ಐಫೋನ್ ಮೇಲೆ ₹5,000 ವರೆಗೂ ಕ್ಯಾಶ್ ಬ್ಯಾಕ್, BOSCH, JBL ಮುಂತಾದ ಕಂಪನಿಗಳ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಈ ಕಂಪನಿಗಳ ಉತ್ಪನ್ನಗಳನ್ನು ನೀವು ಖರೀದಿಸಿದಲ್ಲಿ, ಅದರ ಪಾವತಿಗೆ ಐಸಿಐಸಿಐ ಬ್ಯಾಂಕ್ನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಆನ್ಲೈನ್ ಪೇಮೆಂಟ್ ಮಾಡಿದಲ್ಲಿ, ಸರಿಸುಮಾರು ₹40,000 ದವರೆಗೂ ಹಣ ಉಳಿಸುವ ಅವಕಾಶ ನಿಮ್ಮದಾಗಲಿದೆ.
ಅಷ್ಟೇ ಅಲ್ಲದೇ, ದ್ವಿಚಕ್ರ ವಾಹನ, ಕಾರು ಹಾಗೂ ಇತರ ವಾಹನಗಳ ಖರೀದಿಯ ಮೇಲೂ ಗ್ರಾಹಕರಿಗೆ ಸಖತ್ ಆಫರ್ ನೀಡಲು, ಕಂಪನಿಗಳೊಂದಿಗೆ ಐಸಿಐಸಿಐ ಲಿಂಕ್ ಆಗಿದ್ದು, ನಿಮ್ಮ ಖರೀದಿಗೆ ಈ ಬ್ಯಾಂಕ್ ಮೂಲಕ ಪಾವತಿ ಮಾಡಿದಲ್ಲಿ ಆಕರ್ಷಕ ಡಿಸ್ಕೌಂಟ್ ಹಾಗೂ ಕ್ಯಾಶ್ಬ್ಯಾಕ್ ನಿಮ್ಮದಾಗಲಿದೆ.
ನಿಮಗೆ ಅತಿ ಕಡಿಮೆ ಮೊತ್ತದ ಕಂತಿನ EMI ಸೌಲಭ್ಯ
ಅತೀ ಕಡಿಮೆ ಕಂತಿನ EMI ಸೌಲಭ್ಯವನ್ನೂ ಈ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದ್ದು, ಆಫರ್ ಘೋಷಿಸಲಾಗಿರುವ ಖರೀದಿಯ ಮೇಲೆ No Cost EMI ಹಾಗೂ ಹೆಚ್ಚಿನ ಕಂತುಗಳ EMI ನ್ನು ಕೂಡ ಬ್ಯಾಂಕ್ ನೀಡುತ್ತಿದೆ.
ನೀವು ಐಸಿಐಸಿಐ (ICICI) ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಹಬ್ಬದ ಸೀಸನ್ಗಳಲ್ಲಿ ಆನ್ಲೈನ್ ಪೇಮೆಂಟ್ ಮೂಲಕ, ಸೂಪರ್ ಸೇವಿಂಗ್ ಅವಕಾಶ ಪಡೆದುಕೊಳ್ಳಿ ಹಾಗೂ ಸಾಕಷ್ಟು ಮೌಲ್ಯದ ಉತ್ಪನ್ನಗಳನ್ನು ಖರೀದಿಸಿ, ಹಬ್ಬವನ್ನು ಖುಷಿಯಿಂದ ಆಚರಿಸಿ.