ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟುವ ಕನಸು ಇದ್ದೇ ಇರುತ್ತದೆ. ತನ್ನ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಗಟ್ಟಿಯಾದ ಮನೆ ಕಟ್ಟಬೇಕು ಎನ್ನುವ ಆಸೆಯನ್ನು ನನಸು ಮಾಡಿಕೊಳ್ಳಲು ಸದಾ ದುಡಿಯುವ ನಾಗರಿಕರಿಗೆ, ಮನೆ ಕಟ್ಟಲು ಅವರ ದುಡಿಮೆಯ ಅಲ್ಪಸ್ವಲ್ಪ ಆದಾಯ ಅವರ ಗೋಡೆಗೂ ಸಾಕಾಗುವುದಿಲ್ಲ. ಆದರೆ, ಅಂತಹ ಕನಸುಳ್ಳವರಿಗೆ ಸರ್ಕಾರದಿಂದಲೇ ಮನೆ (PM Awas Yojana) ದೊರಕುತ್ತದೆ ಎಂದರೆ ನಂಬುತ್ತೀರಾ? ಇಲ್ಲಿದೆ ನೋಡಿ ಸರ್ಕಾರದ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ.
ದೇಶವಾಸಿಗಳ ಸ್ವಂತ ಮನೆ ಕಟ್ಟುವ ಕನಸಿಗೆ ದನಿಯಾಗಲು, ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಕೇಂದ್ರ ಸರ್ಕಾರ ಅಂತಹ ಒಂದು ಆಕರ್ಷಕ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆ ಮೂಲಕ ನಾಗರಿಕರು ತಮ್ಮ ಸ್ವಂತ ಮನೆ, ಸ್ವಂತ ಬದುಕು ಕಟ್ಟಿಕೊಳ್ಳುವುದರೊಂದಿಗೆ, ಸರ್ಕಾರದ ಯೋಜನೆಯ ಫಲ ಪಡೆದು ಸ್ವಾವಲಂಬಿಯಾಗಲು ಸಹಾಯಕವಾಗಿದೆ.
PM Awas Yojane: ಮನೆ ಕಟ್ಟಲು ಸಿಗಲಿದೆ ಕಡಿಮೆ ಬಡ್ಡಿದರದ ಸಹಾಯಧನ
ಕೇಂದ್ರ ಸರ್ಕಾರ ತನ್ನ ಅತ್ಯುತ್ತಮ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಘೋಷಿಸಿದ್ದು, ಈ ಮೂಲಕ ದೇಶದ ನಾಗರಿಕರು ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ಸಹಾಯಕವಾಗುವಂತೆ ಕಡಿಮೆ ಬಡ್ಡಿದರದ ಸಾಲಸೌಲಭ್ಯ ನೀಡುತ್ತಿದೆ. ಈ ಯೋಜನೆಯ ಫಲ ಪಡೆಯಲು ಅರ್ಹತೆಗಳೇನು? ಎಷ್ಟು ಮೊತ್ತದ ಸಹಾಯಧನ ಸಿಗುತ್ತದೆ? ಅರ್ಜಿ ಸಲ್ಲಿಕೆ ಹೇಗೆ? ಈ ಎಲ್ಲಾ ವಿವರಗಳು ಇಲ್ಲಿವೆ ನೋಡಿ.
ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗೆ ಈ ಆವಾಸ್ ಯೋಜನೆ (PM Awas Yojana) ಯ ಮೂಲಕ ಸರ್ಕಾರ ಮನೆ ಕಟ್ಟಲು ಸಾಲ ರೂಪದ ಸಹಾಯಧನ ನೀಡುತ್ತಿದ್ದು, ಅದರ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಎಲ್ಲಾ ವಿವರ ಇಲ್ಲಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರರು ಭಾರತದ ನಿವಾಸಿಯಾಗಿದ್ದು, ಶಾಶ್ವತ ಮನೆ ಹೊಂದಿರಬಾರದು.
- ಅರ್ಜಿದಾರರ ವಾರ್ಷಿಕ ಆದಾಯದ ಮಿತಿ ₹3 ಲಕ್ಷದಿಂದ ₹6 ಲಕ್ಷದೊಳಗಿರಬೇಕು.
- ಪಡಿತರ ಚೀಟಿಯಲ್ಲಿ ಅರ್ಜಿದಾರರ ಹೆಸರಿರಬೇಕು ಹಾಗೂ ಬಡತನ ರೇಖೆಗಿಂತ ಕೆಳಗಿರಬೇಕು.
- ದೇಶದ ಯಾವುದೇ ಮಾನ್ಯ ಗುರುತಿನ ಚೀಟಿ ಹೊಂದಿರಬೇಕು.
PM Awas Yojana: ಈ ಅರ್ಹತೆ ಹೊಂದಿದ್ದವರು ಕೂಡ ಅರ್ಜಿ ಸಲ್ಲಿಸಬಹುದು:
- ಒಂದು ಅಥವಾ ಎರಡು ಕೊಠಡಿ, ಬಿದ್ದುಹೋಗುವ ಸ್ಥಿತಿಯಲ್ಲಿರುವ ಗೋಡೆಗಳು ಹಾಗೂ ಸುರಕ್ಷಿತವಲ್ಲದ ಛಾವಣಿಯಡಿ ಬದುಕುತ್ತಿರುವ ಕುಟುಂಬಗಳು 25 ವರ್ಷ ಮೇಲ್ಪಟ್ಟ ಕೇವಲ ಅನಕ್ಷರಸ್ಥರಿರುವ ಕುಟುಂಬ
- 16 ರಿಂದ 59 ವರ್ಷ ವಯಸ್ಸಿನ ವಯಸ್ಕ ಪುರುಷ ಅಥವಾ ವಯಸ್ಕ ಸದಸ್ಯರಿಲ್ಲದ ಕುಟುಂಬ
- ವಿಕಲಚೇತನ ಅಥವಾ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳು
- ಭೂರಹಿತ ಕುಟುಂಬಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಕುಟುಂಬಗಳು ಹಾಗೂ ಇತರೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಇಂತಿವೆ:
- ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ
- ಉದ್ಯೋಗ ಕಾರ್ಡ್ ಹೊಂದಿದ್ದಲ್ಲಿ ಅದರ ಸಂಖ್ಯೆ
- ಬ್ಯಾಂಕ್ ಖಾತೆಯ ವಿವರ ಅಥವಾ ಬ್ಯಾಂಕ್ ಪಾಸ್ಬುಕ್ ಪ್ರತಿ
- ಸ್ವಚ್ಛ ಭಾರತ್ ಮಿಷ ನೋಂದಣಿ ಸಂಖ್ಯೆ (ಅಗತ್ಯವಿದ್ದಲ್ಲಿ) ಹಾಗೂ ಇತರೆ ದಾಖಲೆಗಳು
PM Awas Yojana ಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ!
- ಪ್ರಧಾನಮಂತ್ರಿ ಆವಾಸ್ ಯೋಜನೆ (PM Awas Yojana) ಯ ಅಧಿಕೃತ ವೆಬ್ಸೈಟ್ https://pmaymis.gov.in/ ಗೆ ಭೇಟಿ ನೀಡಿ.
- ಹೋಮ್ಪೇಜ್ನಲ್ಲಿ PM Awas Yojana ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿ ಹಾಗೂ ದಾಖಲೆಗಳೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿ ಹಾಗೂ ದಾಖಲೆಗಳನ್ನು ಸಲ್ಲಿಸಿ.
- ಅಂತಿಮವಾಗಿ ಸಬ್ಮಿಟ್ ಮಾಡುವ ಮುನ್ನ ಅರ್ಜಿ ವಿವರಗಳು ಸರಿಯಾಗಿದೆಯೇ ಎನ್ನುವುದನ್ನು ಸಂಪೂರ್ಣವಾಗಿ ಪರೀಕ್ಷಿಸಿಕೊಂಡು ನಂತರವೇ Submit ಒತ್ತಿರಿ.
- ಅರ್ಜಿಯನ್ನು ಆಫ್ಲೈನ್ ಮೂಲಕವೂ ಸಮೀಪದ ಸೇವಾ ಕೇಂದ್ರಗಳಲ್ಲೂ ಸಲ್ಲಿಸಲು ಅವಕಾಶ ನೀಡಲಾಗಿದೆ.
ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ 6.5% ಬಡ್ಡಿದರದಲ್ಲಿ 20 ವರ್ಷಗಳ ಕಾಲಾವಕಾಶದ ಸಾಲ ಸೌಲಭ್ಯವಿದೆ. ಮನೆಯ ವಿಸ್ತರಣೆ ಹಾಗೂ ಹೆಚ್ಚುವರಿ ಕಾಮಗಾರಿಯ ಅವಶ್ಯಕತೆಯಿದ್ದಲ್ಲಿ ಅದನ್ನೂ ನಡೆಸಲು ಅವಕಾಶವಿದೆ. ಈ ಯೋಜನೆಯಡಿ ಶೌಚಾಲಯ, ಎಲ್ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ/ದಿನಬಳಕೆಯ ನೀರಿನ ಸೌಲಭ್ಯ ದೊರೆಯಲಿದೆ.
ನಾಗರಿಕರ ಆದಾಯ ಮಿತಿಯ ಅನುಸಾರ ಸಾಲರೂಪದ ಸಹಾಯಧನ ದೊರೆಯಲಿದ್ದು, ಅವರ ಆದಾಯಕ್ಕನುಗುಣವಾಗಿ ಮನೆಯ ಅಳತೆ ಹಾಗೂ ಅನುದಾನವನ್ನು ಸರ್ಕಾರ ನಿಗದಿಪಡಿಸುತ್ತದೆ. ಸ್ವಂತ ಸೂರಿನ ಕನಸು ಕಾಣುತ್ತಿರುವವರು ಈ ಯೋಜನೆಯ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳಬಹುದು.