ವಿವಿಧ ಪದವಿಗಳನ್ನು ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ವರ್ಷಾನುಗಟ್ಟಲೆ ಕಾದು ಕುಳಿತಿರುವ ಅದೆಷ್ಟೋ ನಿರುದ್ಯೋಗಿ ಯುವಕ ಯುವತಿಯರಿದ್ದಾರೆ. ಕೆಲವರಂತೂ ತಮ್ಮ ಕುಟುಂಬದ ನಿರ್ವಹಣೆಗಾಗಿ ಅಲ್ಲಲ್ಲಿ ಮಾಲ್, ಶಾಪ್, ಮಳಿಗೆಗಳಲ್ಲಿ ಅಲ್ಪಸ್ವಲ್ಪ ದಿನಗೂಲಿ ಮಾಡಿಕೊಂಡು, ಬಿಡುವಿನ ಸಮಯದಲ್ಲಿ ಹಾಗೂ ರಾತ್ರಿ ಸಮಯದಲ್ಲಿ ಸರ್ಕಾರಿ ಪರೀಕ್ಷೆಗಳಿಗೆ ಓದುವವರಿದ್ದಾರೆ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಂತಹ ಯುವಕ ಯುವತಿಯರಿಗೆ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD Recruitment) ಗುಡ್ ನ್ಯೂಸ್ ನೀಡಿದೆ.
ಕರ್ನಾಟಕ ಸರ್ಕಾರ ಬಾಕಿಯಿರುವ ಕೆಲವು ಸರ್ಕಾರಿ ಹುದ್ದೆಗಳು ಹಾಗೂ ಹೊರಗುತ್ತಿಗೆ ಆಧಾರದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿದ್ದು, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ (RDWSD Recruitment) ಹೊರಗುತ್ತಿಗೆ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಈ ಇಲಾಖೆಯಲ್ಲಿ ಈಗಾಗಲೇ ಖಾಲಿಯಿರುವ 47 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಸಂಗ್ರಹಣೆ ಸಲಹೆಗಾರ (Procurement Consultant)
- ಪರಿಸರ ಸಲಹೆಗಾರ (Environmental Consultant)
- ಸಾಮಾಜಿಕ ಅಭಿವೃದ್ಧಿ ಸಲಹೆಗಾರ (Social Development Consultant)
- ಕಾನೂನು ಸಲಹೆಗಾರರು (Legal Consultant)
- ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ (Monitoring and Evaluation ( M &E) Consultant)
RDWSD Recruitment: ಅರ್ಜಿ ಸಲ್ಲಿಕೆಗೆ ವಿದ್ಯಾರ್ಹತೆ:
ಅರ್ಜಿ ಕರೆಯಲಾಗಿರುವ ಈ ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದ್ದು, ಆಯಾ ಹುದ್ದೆಗಳಿಗನುಗುಣವಾಗಿ BCA, BE, B.Tech, M.Tech, MCA, MSW, MA, MBA, M.Com ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ಆಯಾ ವಿದ್ಯಾರ್ಹತೆಯ ಸಿಂಧುತ್ವ ಪರಿಗಣಿಸಿ, ಅರ್ಜಿ ನಮೂನೆಯ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ:
ಸಂಗ್ರಹಣೆ ಸಲಹೆಗಾರರಿಂದ ಆರಂಭಿಸಿ, ಮೌಲ್ಯಮಾಪನ ಸಲಹೆಗಾರರ ಹುದ್ದೆಯವರೆಗೆ ತಿಂಗಳಿಗೆ 75,000 ರೂ. ಗಳಿಂದ 1,50,000 ಲಕ್ಷ ರೂ. ಗಳವರೆಗೆ ವೇತನ ನಿಗದಿಪಡಿಸಲಾಗಿದೆ. ಇಲಾಖೆಯಲ್ಲಿ ಕರೆಯಲಾದ ಆಯಾ ಹುದ್ದೆಗಳಿಗೆ (RDWSD Recruitment) ವಿವಿಧ ಭತ್ಯೆ ಹಾಗೂ ಸರ್ಕಾರ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ.
RDWSD Recruitment ಗೆ ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಅರ್ಹ ಅಭ್ಯರ್ಥಿಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕೃತ ವೆಬ್ಸೈಟ್ https://www.ksrwspdtsuonline.in/ ಗೆ ಭೇಟಿ ನೀಡಿ, ನೇಮಕಾತಿಯ ಬಗ್ಗೆ ಸವಿವರ ಮಾಹಿತಿಯನ್ನು ಪರಿಶೀಲಿಸಿದ ನಂತರ, ಹುದ್ದೆಗಳಿಗೆ ಅರ್ಹತೆ ಹಾಗೂ ವಯೋಮಿತಿ ಇತ್ಯಾದಿ ವಿವರಗಳ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗೆ ಅರ್ಜಿ ಸಲ್ಲಿಕೆ ಆನ್ಲೈನ್ ಮೂಲಕವೇ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಿಂಧುತ್ವಗೊಂಡ ನಂತರ ನೇರ ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 23 ಕೊನೆಯ ದಿನಾಂಕವಾಗಿದ್ದು, ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಉತ್ತಮ ವೇತನ ಹೊಂದಿರುವ ಈ ಹುದ್ದೆಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಸರ್ಕಾರಿ ಹುದ್ದೆಯ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ.