ಆಧುನಿಕ ಜೀವನ ಶೈಲಿಯಲ್ಲಿ, ಪ್ರತಿದಿನವೂ ನಿತ್ಯನೂತನ ಪರಿವರ್ತನೆಗೆ ಒಳಗಾಗುತ್ತಿರುವ ಸಮಾಜದಲ್ಲಿ ಮಕ್ಕಳನ್ನು ಸಮೃದ್ಧವಾಗಿ, ಸದ್ಭುದ್ದಿಯಿಂದ ಬೆಳೆಸುವುದು ಸುಲಭದ ಕೆಲಸವಲ್ಲ. ಆದಾಗ್ಯೂ, ನಮ್ಮ ಮಕ್ಕಳು ನಮ್ಮ ಮುಂದಿನ ಭವಿಷ್ಯಕ್ಕೆ ದಾರಿದೀಪ ಆಗಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಹಿತದೃಷ್ಠಿಯಿಂದ ಎಲ್ಲಾ ತಂದೆ-ತಾಯಿಗಳು (Parents Guide) ತಮ್ಮ ಕೈಲಾದಷ್ಟು ಮಕ್ಕಳನ್ನು ಸಮಾಜಪ್ರಿಯವಾಗಿ ಬೆಳೆಸಲು ಪ್ರಯತ್ನಿಸುತ್ತಾರೆ.
ʼಬೆಳೆಯುವ ಸಿರಿ ಮೊಳಕೆಯಲ್ಲಿʼ ಎನ್ನುವಂತೆ ಮಕ್ಕಳನ್ನು ಚಿಕ್ಕವರಿದ್ದಾಗಿನಿಂದಲೇ ಸರಿ ದಾರಿಯಲ್ಲಿ ಬೆಳೆಸಬೇಕು. ಈ ಮಕ್ಕಳೇ ಮುಂದೆ ದೊಡ್ಡವರಾಗಿ ಸಮಾಜಕ್ಕೆ ದಾರಿತೋರುವವರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನಶೈಲಿ, ತಂದೆ-ತಾಯಿಯರಿಬ್ಬರಿಗೂ ವೃತ್ತಿಯ ಒತ್ತಡ, ವಿಭಜಿತ ಕುಟುಂಬಗಳ ಪರಿಣಾಮವಾಗಿ ಮಕ್ಕಳು ಆದರ್ಶಯುತ, ಸಂಸ್ಕೃತಿಯುತವಾಗಿ ಬೆಳೆಯುವಲ್ಲಿ ಅಡ್ಡಿಯುಂಟಾಗುತ್ತಿದೆ.
ಮಕ್ಕಳ ಬೆಳವಣಿಗೆಯಲ್ಲಿ 5 ವರ್ಷಕ್ಕೂ ಹಿಂದಿನ ಅವಧಿಯು ಅವರ ನಡವಳಿಕೆಯನ್ನು ವೃದ್ಧಿಸುತ್ತದೆ. ಈ ಸಮಯದಲ್ಲಿಯೇ ನಾವು ಮಕ್ಕಳನ್ನು ಸರಿಯಾಗಿ ಗಮನಿಸಬೇಕು. ಅಲ್ಲದೇ, 5 ವರ್ಷದ ನಂತರ ಮಕ್ಕಳು ಭಾವನಾತ್ಮಕವಾಗಿ ತುಂಬಾ ವೇಗವಾಗಿ ಬೆಳೆಯುತ್ತಾರೆ. ಆದ್ದರಿಂದ, 5 ವರ್ಷಕ್ಕೂ ಮೊದಲೇ ಪೋಷಕರು (Parents Guide) ತಮ್ಮ ಮಕ್ಕಳಿಗೆ ಯಾವೆಲ್ಲ ಪಾಠಗಳನ್ನು ಕಲಿಸಿಕೊಡಬೇಕು. ಅವರನ್ನು ಹೇಗೆ ಬೆಳೆಸಬೇಕು ಎನ್ನುವುದನ್ನು ನೋಡೋಣ ಬನ್ನಿ…
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಸಬೇಕಾದ 8 ಪಾಠಗಳು :
ಸೂಚನೆಗಳನ್ನು ಪಾಲಿಸುವುದು :
ಸೂಚನೆ ಅಥವಾ ಹಿರಿಯರ ಮಾತುಗಳನ್ನು ನಿಮ್ಮ ಮಕ್ಕಳು ಕೇಳುವಂತೆ ಮಾಡಬೇಕು. ಮುಂದಿನ ವರ್ಷದಿಂದ ಶಾಲೆಯ ಮೆಟ್ಟಿಲು ಹತ್ತುವ ನಿಮ್ಮ ಮಕ್ಕಳಿಗೆ ಈ ಪಾಠ ಅವರ ಮುಂದಿನ ಜೀವನಕ್ಕೆ ಅದ್ಭುತ ಮೆಟ್ಟಿಲಾಗಲಿದೆ. ನೀವು ಹೇಳಿದಂತೆ ಮಾಡುವುದು ಅಥವಾ ನೀವು ಮಾಡಿದಂತೆ ಮಾಡುವುದರ ಬಗ್ಗೆ ಮಕ್ಕಳಿಗೆ ಕಲಿಸಿ. ಮಕ್ಕಳು ನಿಮ್ಮನ್ನು, ನಿಮ್ಮ ಸೂಚನೆಯನ್ನು ಅನುಸರಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ ಅವರನ್ನು ಹೊಗಳಿ, ಪ್ರಶಂಸಿಸಿ ಹಾಗೂ ಮಕ್ಕಳನ್ನು ಮುದ್ದಾಡಿ ಇದು. ಮಕ್ಕಳಲ್ಲಿ ಹೆಚ್ಚಿನ ಗಮನ ಸೆಳೆಯುವಂತೆ ಮಾಡಿ ಅವರಲ್ಲಿ ಪ್ರಜ್ಞೆ ಹೆಚ್ಚುತ್ತದೆ.
ತಿಂಡಿ-ತಿನಿಸು ಸೇರಿದಂತೆ ವಸ್ತುಗಳ ಹಂಚಿಕೆ :
5 ವರ್ಷದೊಳಿಗೆ ಮಕ್ಕಳಿಗೆ ತಿಂಡಿ-ತಿನಿಸುಗಳ ತಿನ್ನುವುದರೆಡೆಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಸಾಮಾನ್ಯವಾಗಿ ಕಂಡದ್ದೆನ್ನೆಲ್ಲಾ ತಾನೇ ತಿನ್ನಬೇಕು ಎನ್ನುವುದು ಮಕ್ಕಳ ಮನೋಭಾವ. ಮಗುವಿಗೆ 4 ಅಥವಾ 5 ನೇ ವರ್ಷದಲ್ಲಿ ಹಂಚಿ ತಿನ್ನುವುದರ ಅಥವಾ ವಸ್ಯುಗಳನ್ನು ಹಂಚುವುದರ ಮಹತ್ವದ ಬಗ್ಗೆ ತಿಳಿಸಬೇಕು. ಇದರಿಂದಾಗಿ ಮಕ್ಕಳಲ್ಲಿ ಪರಸ್ಪರ ಬಂಧ ಹೆಚ್ಚುತ್ತದೆ. ಸ್ವಾರ್ಥದ ಗುಣ ನಿಮ್ಮ ಮಕ್ಕಳ ಹತ್ತಿರ ಸುಳಿಯುವದೇ ಇಲ್ಲ. ಇದೇ ಅವರ ಉಜ್ವಲ ಭವಿಷ್ಯಕ್ಕೆ ಸಮಾಜದ ಪ್ರೀತಿಗೆ ಒಳಗೊಳ್ಳಲು ಕಾರಣವಾಗುತ್ತದೆ. ನಿಮ್ಮ ಮಕ್ಕಳ ಈ ಗುಣ ಎಲ್ಲರನ್ನೂ ಆಕರ್ಷಿಸುವಂತೆ ಮಾಡುತ್ತದೆ.
ಹಿರಿಯರಿಗೆ ಗೌರವ ಮತ್ತು ಸಭ್ಯತೆಯ ವರ್ತನೆ :
ಹಿರಿಯರಿಗೆ ಹೇಗೆ ಗೌರವಯುತವಾಗಿ ಇರಬೇಕು ಮತ್ತು ಸಭ್ಯತೆಯಿಂದ ವರ್ತಿಸಬೇಕು ಎನ್ನುವುದನ್ನು ನಿಮ್ಮ ಮಕ್ಕಳಿಗೆ ಕಲಿಸಿಕೊಡಿ (Parents Guide). ನಿಮ್ಮ ಮಕ್ಕಳಲ್ಲಿ ತಾವು ಮಾಡಿದ್ದೇ ಸರಿ ಎನ್ನುವಂತಹ ಮನೋಭಾವವಿದ್ದರೆ ಅದನ್ನು ಅಳಿಸಬೇಕು. ನಿಮ್ಮ ಮಕ್ಕಳ ಬಾಯಲ್ಲಿ ಅವಶ್ಯವಿದ್ದಾಗ ದಯವಿಟ್ಟು, ಕ್ಷಮಿಸಿ ಹಾಗೂ ಧನ್ಯವಾದ ಎನ್ನುವ ಪದ ಬರುವ ಹಾಗೆ ಕಲಿಸಬೇಕು. ಗೆಳೆಯರನ್ನು, ಇತರರನ್ನು ಗೌರವಿಸುವುದನ್ನು ಹೇಳಿಕೊಡಿ, ಇದು ಮಕ್ಕಳಲ್ಲಿ ದಯೆ ಹಾಗೂ ಸಹಾನುಭೂತಿಯನ್ನು ಸೃಜಿಸುತ್ತದೆ.
ಸ್ವಚ್ಛತೆಯಿಂದಿರುವುದು ಅಥವಾ ನೈರ್ಮಲ್ಯವಾಗಿರುವುದು :
ಮಕ್ಕಳಿಗೆ 5 ವರ್ಷ ಅಥವಾ 4ನೇ ವರ್ಷದಲ್ಲಿದ್ದಾಗಲೇ ಸ್ವಚ್ಛತೆಯ ಪಾಠ ಕಲಿಸಬೇಕು. ಮಕ್ಕಳು ಮನೆಯಲ್ಲಿ ಇದ್ದಾಗ ಅಥವಾ ಶಾಲೆಯಲ್ಲಿ ಇದ್ದಾಗ ತಮ್ಮನ್ನು ತಾವು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಸಣ್ಣ-ಸಣ್ಣ ಸ್ವಚ್ಛತೆಯ ತಿಳುವಳಿಕೆ ಹೇಳಿಕೊಟ್ಟರೆ ಸಾಕು ಅದೇ ಮುಂದೆ ಹೆಮ್ಮೆರವಾಗುತ್ತದೆ. ಊಟಕ್ಕೂ ಮುಂಚೆ ಕೈತೊಳೆಯುವುದು, ಊಟ ತಟ್ಟೆಯಿಂದ ಹೊರಗಡೆ ಚೆಲ್ಲದಂತೆ ನೋಡಿಕೊಳ್ಳುವುದು. ಆಟವಾಡಿ ಬಂದ ನಂತರ ಕೈ-ಕಾಲು ತೊಳೆದುಕೊಳ್ಳುವುದು, ಮೂಗನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಯ, ನೈರ್ಮಲ್ಯದ ಅರಿವು ಮೂಡಿಸಬೇಕು.
ಕುತೂಹಲದ ಸೃಜನೆ ಹಾಗೂ ಕಲಿಕೆಯ ಮಹತ್ವ ತಿಳಿಸುವುದು :
ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕುತೂಹಲಕರ ಭಾವನೆಯನ್ನು ಹಾಗೂ ಪ್ರಶ್ನಿಸಿ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು. ಇದು ನಿಮ್ಮ ಮಕ್ಕಳನ್ನು ಬೌದ್ಧಿಕವಾಗಿ ಶ್ರೇಷ್ಠರನ್ನಾಗಿಸುತ್ತದೆ. ಹೊಸ ಹೊಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವದನ್ನು ಮಕ್ಕಳಲ್ಲಿ ರೂಢಿಸಬೇಕು. ಪ್ರಶ್ನೆ ಕೇಳಿ ತಿಳಿದುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು.
ಭಾವನೆಗಳನ್ನು ವ್ಯಕ್ತಪಡಿಸುವುದು :
ಮಕ್ಕಳಿಗೆ ತಮ್ಮ ಮತ್ತು ಮುಂದೆ ಇರುವವರ ಭಾವನೆಗಳನ್ನು ಗುರುತಿಸುವ ಬಗ್ಗೆ ತಿಳಿಸಿಕೊಡಬೇಕು. ಇದು ಮಕ್ಕಳವನ್ನು ಭಾವನಾತ್ಮಕವಾಗಿ ಬುದ್ಧಿವಂತರನ್ನಾಗಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಭಾವನೆಗಳನ್ನು ವ್ಯಕಪಡಿಸಬೇಕು, ಮತ್ತೊಬ್ಬರ ಭಾವನೆಗಳಿಗೆ ಹೇಗೆ ಪ್ರತಿಸ್ಪಂದಿಸಬೇಕು ಎನ್ನುವುದನ್ನು ತಿಳಿಸಿ. ಸಂತೋಷ, ದುಃಖ, ಹತಾಶೆ, ಕೋಪದಂತಹ ಸಂದರ್ಭದಲ್ಲಿ ಹೇಗಿರಬೇಕು ಎನ್ನುವುದನ್ನು ತಿಳಿಸಿಕೊಡಿ. ಇದು ನಿಮ್ಮ ಮಕ್ಕಳನ್ನು ಮುಂದೆ ಗೌರವಾನ್ವಿತರನ್ನಾಗಿ ಮಾಡುತ್ತದೆ.
ಸಮಸ್ಯೆ ಪರಿಹರಿಸುವ ಕೌಶಲ್ಯ :
ನಿಮ್ಮ ಮಕ್ಕಳು ಚಿಕ್ಕವರಿರುವಾಗಲೇ ಸಮಸ್ಯೆ ಪರಿಹರಿಸುವ ಹಾಗೂ ವಿಮರ್ಶಾತ್ಮಕ ಚಿಂತನೆ ರೂಢಿಸಬೇಕು. ಆರಂಭದಲ್ಲಿ ಸಣ್ಣ ಸಮಸ್ಯೆ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು, ಅವುಗಳಿಂದ ಹೇಗೆ ಹೊರಬರಬೇಕು ಎನ್ನುವುದನ್ನು. ಸಣ್ಣ ಪುಟ್ಟ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ನೀವೇ ಸೃಷ್ಠಿಸಿ ಅದರಿಂದ ಹೊರ ಬರುವ ದಾರಿಯನ್ನು ಅವರೇ ಸೃಷ್ಠಿಸಿಕೊಳ್ಳುವಂತೆ ಮಾಡಿ. ಇದರಿಂದಿ ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಆತ್ಮವಿಶ್ವಾಸ ಹೆಚ್ಚುತ್ತದೆ. ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಗಟ್ಟಿಧೈರ್ಯದಿಂದ ಎದುರಿಸುವ ಗುಂಡಿಗೆ ಅವರಲ್ಲಿ ಹುಟ್ಟುತ್ತದೆ. ಏನೇ ಬಂದರು ಎದುರಿಸುತ್ತೇನೆ ಎನ್ನುವ ಸಾಮರ್ಥ್ಯ ಅವರಲ್ಲಿ ವೃದ್ಧಿಯಾಗುತ್ತದೆ.
ಸಮಯದ ಮಹತ್ವದ ತಿಳುವಳಿಕೆ :
ಸಮಯಕ್ಕೆ ಎಲ್ಲರೂ ಮಹತ್ವ ನೀಡಬೇಕು. ಇದೇ ಯಶಸ್ಸಿ ಸಾಧಕರ ಮೊದಲ ಗುಟ್ಟು. ಆದ್ದರಿಂದ, ನಿಮ್ಮ ಮಕ್ಕಳಿಎ ಚಿಕ್ಕಂದಿನಲ್ಲಿಯೇ ಸಮಯದ ಮಹತ್ವದ ಬಗ್ಗೆ ಅದರ ಮೌಲ್ಯದ ಬಗ್ಗೆ ತಿಳಿಸಿಕೊಂಡಿ. ಸಮಯವನ್ನು ವೃಥಾ ವ್ಯರ್ಥ ಮಾಡದೇ ಆ ಸಮಯದಲ್ಲಿ ಇನ್ನಿತರೆ ಚಟುವಟಿಕೆಗಳನ್ನು ಮಾಡುವುದರ ಬಗ್ಗೆ ಹೇಳಿಕೊಡಿ. ದೈನಂದಿನ ದಿನಚರಿಯನ್ನು ನಿರ್ವಹಿಸುವುದು ಹೇಗೆ, ಹೇಗೆ ಸಮಯಕ್ಕೆ ತಕ್ಕಂತೆ ಕೆಲಸಗಳನ್ನು ಮಾಡುಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡಿ.
ಈ ಮೇಲಿನ 8 ತಿಳುವಳಿಕೆ ಹಾಗೂ ಕೌಶಲ್ಯಗಳನ್ನು ನಿಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಕಲಿಸುವಲ್ಲಿ ನೀವು ಯಶಸ್ವಯಾದರೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿದೆ ಅಂತಲೇ ಅರ್ಥ. ನಿಮ್ಮ ಮಕ್ಕಳ (Parents Guide) ಮೇಲಿ ನಿಮ್ಮ ಪ್ರೀತಿ ಮಮತೆಯನ್ನು ತೋರಿಸಿ. ಆದರೆ ಈ ಪ್ರೀತಿ, ಮಮತೆಯು ನಿಮ್ಮ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತಿರಲಿ. ಅವರ ಭವಿಷ್ಯಕ್ಕೆ ಅಡ್ಡಿಯಾಗದಂತಿರಲಿ.