2020 ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ತಂದುಕೊಟ್ಟು ಇಡೀ ಕ್ರೀಡಾಜಗತ್ತಿಗೇ ಚಿನ್ನದ ಹುಡುಗ, ಜಾವೆಲಿನ್ ಬಾಯ್ ಎಂದೇ ಪರಿಚಯವಾದವರು ನೀರಜ್ ಚೋಪ್ರಾ (Neeraj Chopra). ಗೆಲುವಿನ ಜಾವೆಲಿನ್ ಎಸೆದು ಎಲ್ಲರ ಮನಸು ಗೆದ್ದಿದ್ದ ನೀರಜ್ ಚೋಪ್ರಾ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರೆ, ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಎರಡು ಕಂಚಿನ ಪದಕವನ್ನು ಮನು ಭಾಕರ್ (Manu Bhaker) ಅವರು ಗೆದ್ದು ದಾಖಲೆ ನಿರ್ಮಿಸಿದ್ದು ವಿಶೇಷ. ಅವರಿಬ್ಬರು ಇದೀಗ ಮತ್ತೊಮ್ಮೆ ಮದುವೆ (Neeraj Manu Marriage) ಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಮೊನ್ನೆಯಷ್ಟೇ ಒಲಿಂಪಿಕ್ಸ್ ಮುಗಿದ ನಂತರ ಮನು ಭಾಕರ್ ಅವರ ತಾಯಿ, ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿ, ಅವರ ಕೈಯನ್ನು ತನ್ನ ತಲೆಯ ಮೇಲಿರಿಸಿಕೊಂಡಿದ್ದು ಹಲವು ಗಾಸಿಪ್ಗಳಿಗೆ ಕಾರಣವಾಗಿತ್ತು. ಮೀಡಿಯಾಗಳಲ್ಲಿ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಮದುವೆಯಾಗಲಿದ್ದಾರೆ (Neeraj Manu Marriage) ಎನ್ನುವ ವದಂತಿಗಳು ಹರಿದಾಡಿದ್ದವು. ಆದರೆ, ಮನು ಭಾಕರ್ ಅವರ ತಂದೆ ಹಾಗೂ ತಾಯಿ ಆ ವದಂತಿಗಳನ್ನು ತಳ್ಳಿಹಾಕಿದ್ದರು ಹಾಗೂ ಅವಳಿನ್ನೂ ಚಿಕ್ಕವಳು, ಅವಳ ಮದುವೆಯ ಬಗ್ಗೆ ಇನ್ನೂ ಚಿಂತಿಸಿಲ್ಲ ಎಂದು ಹೇಳಿದ್ದರು. ಆದರೆ, ಈಗ ಮನು ಭಾಕರ್ ಮತ್ತು ನೀರಜ್ ಚೋಪ್ರಾ (Neeraj Manu Marriage) ಮತ್ತೊಮ್ಮೆ ಮೀಡಿಯಾಗಳ ಬಾಯಿಗೆ ತುತ್ತಾಗಿದ್ದಾರೆ.
ಹೌದು. ನಿನ್ನೆಯಷ್ಟೇ ಬ್ರಸ್ಸೆಲ್ಸ್ ಡೈಮಂಡ್ ಲೀಗ್ (Brussels Daimond League) ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟು ರನ್ನರ್ ಅಪ್ ಆಗಿದ್ದಾರೆ. ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಅವರು ಸತತ ಎರಡನೇ ಬಾರಿಯೂ ನೀರಜ್ ಚೋಪ್ರಾ ಅವರಿಗಿಂತ ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದರೆ, ರನ್ನರ್ ಅಪ್ ಸ್ಥಾನಕ್ಕೆ ನೀರಜ್ ತೃಪ್ತಿಪಟ್ಟುಕೊಂಡರು.
Neeraj Manu Marriage: ಗೆದ್ದ ನೀರಜ್ ಚೋಪ್ರಾಗೆ ಮನು ಭಾಕರ್ ವಿಶ್ ಹೀಗಿದೆ
ನೀರಜ್ ಅವರ ಈ ಸಾಧನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದು, ಅವರೊಂದಿಗೆ ಮನು ಭಾಕರ್ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಕೈ ಗಾಯದ ಹೊರತಾಗಿಯೂ ಕೇವಲ 1 ಸೆಂ.ಮೀ ಅಂತರದಿಂದ ಚಾಂಪಿಯನ್ ಆಗುವ ಅವಕಾಶ ಕಳೆದುಕೊಂಡ ನೀರಜ್ ಸಾಧನೆಯನ್ನು ಹೊಗಳಿ, ಆದಷ್ಟು ಬೇಗ ಹುಷಾರಾಗಿ. ಇನ್ನಷ್ಟು ಯಶಸ್ಸು ನಿಮಗೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಬಿಟ್ಟರೆ, ಈವರೆಗೆ ನೀರಜ್ ಚೋಪ್ರಾ 90 ಮೀ. ಗಡಿಯನ್ನು ದಾಟಿಲ್ಲ. ಒಲಿಂಪಿಕ್ಸ್ನಲ್ಲಿ ಪಾಕ್ನ ಅರ್ಷದ್ ನದೀಂ 92. ಮೀ ಎಸೆದು ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರೆ, Doha ಡೈಮಂಡ್ ಲೀಗ್, Lausanne ಡೈಮಂಡ್ ಲೀಗ್ ಹಾಗೂ ಈ Brussels ಡೈಮಂಡ್ ಲೀಗ್ಗಳಲ್ಲಿ ಎರಡನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡಿದ್ದಾರೆ.
ಟ್ವೀಟ್ ವೈರಲ್ ಆದರೂ ಗುಟ್ಟು ಬಿಟ್ಟುಕೊಡದ ಆಥ್ಲೀಟ್ಗಳು
ಈ Brussels ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನ ಪಡೆದಿದ್ದಕ್ಕೆ ಹಾಗೂ ಅವರ ಚಿಕಿತ್ಸೆಗೂ ಮನು ಭಾಕರ್ ಶುಭಹಾರೈಸಿದ ಟ್ವೀಟ್ ಎಲ್ಲೆಡೆ ಹರಿದಾಡುತ್ತಿದ್ದು, ಮತ್ತೊಮ್ಮೆ ಇಬ್ಬರ ನಡುವೆ ಮದುವೆಯ ಪ್ರಸ್ತಾಪ ಇದ್ದೇ ಇದೆ ಎನ್ನುವುದನ್ನು ಖಚಿತಪಡಿಸುವಂತಿದೆ. ಆದರೆ, ಈ ಬಗ್ಗೆ ಈ ಇಬ್ಬರೂ ಆಥ್ಲೀಟ್ಗಳು ಯಾವುದೇ ಗುಟ್ಟು ಬಿಟ್ಟುಕೊಡದೇ ಉಳಿದಿದ್ದು, ಎಲ್ಲರ ನಿರೀಕ್ಷೆ ಹಾಗೆಯೇ ಉಳಿದಿದೆ.
ಮನು ಭಾಕರ್ ಅವರು ಮುಂದಿನ ಟೂರ್ನಿಗಳಿಗೆ ಅಭ್ಯಾಸ ನಡೆಸುತ್ತಿದ್ದರೆ, ನೀರಜ್ ತನ್ನ ಕೈ ಗಾಯದ ಕುರಿತು ಅಪ್ಡೇಟ್ ನೀಡಿದ್ದು, ಆಪರೇಷನ್ ಅಗತ್ಯವಿದೆ ಎಂದಿದ್ದಾರೆ. ಇದರೊಂದಿಗೆ, ಅವರು ಮುಂದಿನ ಕೆಲವು ಸರಣಿಗಳಿಗೆ ಅಲಭ್ಯರಾಗುವುದು ಖಚಿತವಾಗಿದ್ದು, 2028 ರ ಒಲಿಂಪಿಕ್ಸ್ನಲ್ಲಿ ಮತ್ತೊಂದು ಚಿನ್ನ ಗೆಲ್ಲುವುದರೊಂದಿಗೆ ಕಮ್ ಬ್ಯಾಕ್ ಮಾಡಲಿ ಎನ್ನುವುದೇ ಎಲ್ಲರ ಹಾರೈಕೆ.