ಸಿನೆಮಾ ಕಾರ್ಯಕ್ರಮದಲ್ಲಿ ತಿರುಪತಿಯ ಲಡ್ಡು ವಿವಾದದ (Tirupati Laddu Row) ಕುರಿತು ಅಪಹಾಸ್ಯ ಮಾಡಿದ್ದ ನಟ ಕಾರ್ತಿ ಇಂದು ಪವನ್ ಕಲ್ಯಾಣ್ (Pawan Kalyan) ಅವರ ಕ್ಷಮೆ ಯಾಚಿಸಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಈ ಹಿಂದಿನ ಜಗನ್ ಮೋಹನ್ ರೆಡ್ಡಿಯವರ ಸರ್ಕಾರದ ಅವಧಿಯಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎಂದು ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ಮಾಧ್ಯಮ ಹೇಳಿಕೆ ನೀಡಿದ್ದರು. ಈ ಸಬಂಧಿತ ಎಫ್ಎಸ್ಎಲ್ ವರದಿಯೂ ಬಿಡುಗಡೆಯಾಗಿತ್ತು.
ಹಿಂದೂ ಶ್ರದ್ಧೇಯ ಕೇಂದ್ರ ತಿರುಪತಿಯ ಪ್ರಸಾದವಾದ ಲಡ್ಡುವಿನಲ್ಲಿ ಮಾಂಸ (Tirupati Laddu Row) ಬಳಕೆಯ ಬಗ್ಗೆ ವರದಿಯಾದ ಬೆನ್ನಲ್ಲೇ, ಸಾಕಷ್ಟು ದೇಶದಾದ್ಯಂತ ತಿರುಪತಿಯ ಭಕ್ತಾಧಿಗಳ ತಮ್ಮ ಆಕ್ರೋಶ ಹೊರಹಾಕಿದ್ದರು. ಅಲ್ಲದೇ, ಈ ಹಿಂದಿನ ಸರ್ಕಾರದ ಮೇಲೆ ಕೆಂಡ ಕಾರಿದ್ದರು.
ಹಿಂದೂಗಳ ಧಾರ್ಮಿಕ ಭಾವನೆಯ ಮೇಲೆ ಜಗನ್ ಸರ್ಕಾರ ಆಟವಾಡಿದೆ. ಈ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡಲೇಬೇಕು ಎಂದು ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸಿದ್ದರು.
ಏನಿದು ಘಟನೆ :
ಇತ್ತೀಚೆಗಷ್ಟೇ ಸಿನೆಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳು ನಟ ಕಾರ್ತಿ (Actor Karthi), ತಿರುಪತಿ ಲಡ್ಡುವಿನ ವಿಷಯದ ಬಗ್ಗೆ, ಅದು ಸೆನ್ಸೆಟಿವ್ ವಿಚಾರ ಅದರ ಬಗ್ಗೆ ಚರ್ಚೆ ಬೇಡ ಎಂದು ವ್ಯಂಗ್ಯದ ರೀತಿಯಲ್ಲಿ ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರ್ತಿಯವರ ಅಸಡ್ಡೆಯ ಮಾತಿಗೆ ಹಲವರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮಾತನಾಡಿರುವ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರು, ತಿರುಪತಿಯ ಪವಿತ್ರ ಲಡ್ಡುವಿನ ವಿಷಯದಲ್ಲಿ ಯಾರೂ ಅಪಹಾಸ್ಯ ಮಾಡಬಾರದು. ನಾವು ನಿಮ್ಮನ್ನು ಕಲಾವಿದರಾಗಿ ಗೌರವಿಸುತ್ತೇವೆ. ಸನಾತನ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಎಚ್ಚರವಿರಲಿ ಎಂದು ವಾರ್ನ್ ಮಾಡಿದ್ದಾರೆ.
ಇದನ್ನೂ ಓದಿ : Bhairadevi Movie: ಭೈರಾದೇವಿಯಾದ ರಾಧಿಕಾ ಕುಮಾರಸ್ವಾಮಿ!
ಪವನ್ ಕಲ್ಯಾಣ್ ವಾರ್ನಿಂಗ್ ಮಾಡಿದ ಬೆನ್ನಲ್ಲೇ ಇದೀಗ, ತಮಿಳು ನಟ ಕಾರ್ತಿಯವರು (Actor Karthi) ಎಕ್ಸ್ ವೇದಿಕೆಯ ಮೂಲಕ ಕ್ಷಮೆ ಯಾಚಿಸಿದ್ದಾರೆ.
“ಆತ್ಮೀಯ ಪವನ್ ಕಲ್ಯಾಣ್ ಸರ್. ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ. ನನ್ನಿಂದ ಉಂಟಾದ ಯಾವುದೇ ಪ್ರಮಾದ, ಉದ್ದೇಶಪೂರ್ವಕ ತಪ್ಪುಗ್ರಹಿಕೆಗೆ ಕ್ಷಮೆ ಕೋರುತ್ತೇನೆ. ವೆಂಕಟೇಶ್ವರ ದೇವರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಪಾಲಿಸುತ್ತೇನೆ” ಎಂದು ಹೇಳಿದ್ದಾರೆ.
Dear @PawanKalyan sir, with deep respects to you, I apologize for any unintended misunderstanding caused. As a humble devotee of Lord Venkateswara, I always hold our traditions dear. Best regards.
— Karthi (@Karthi_Offl) September 24, 2024
ತಿರುಪತಿಯ ಲಡ್ಡುವಿನ ವಿವಾದ (Tirupati Laddu Row) ಇಡೀ ದೇಶದಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಸಲಾಗಿದೆ.
View this post on Instagram