ಅಮೆರಿಕಾ ಮೂಲಕ 64 ವರ್ಷದ ಮಹಿಳೆಯೋರ್ವರು ಸ್ವಿಟ್ಜರ್ಲೆಂಡ್ʼನಲ್ಲಿ ವಿವಾದಿತ ಆತ್ಮಹತ್ಯಾ ಯಂತ್ರಕ್ಕೆ (Suicide Pod) ಬಲಿಯಾದ ಘಟನೆ ವರದಿಯಾಗಿದೆ.
ವಿವಾದಿತ ಆತ್ಮಹತ್ಯಾ ಯಂತ್ರ (Suicide Pod) ಸಾರ್ಕೊ ಕ್ಯಾಪ್ಸುಲ್ (Sarco Capsule) 3ಡಿ ಮುದ್ರಿತ ಚೇಂಬರ್ ಬಳಸಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಚೋದನೆಯ ಕಾರಣಕ್ಕಾಗಿ ಮಹಿಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆಂಬ ಆರೋಪದ ಮೇಲೆ ಹಲವರನ್ನು ಸ್ವಿಟ್ಜರ್ಲೆಂಟ್ ಸರ್ಕಾರ ಬಂಧಿಸಿದೆ.
ಸಾರ್ಕೊ ಕ್ಯಾಪ್ಸುಲ್ ನಿರ್ವಹಣೆಯನ್ನು ಲಾಸ್ಟ್ ರೆಸಾರ್ಟ್ ಸಂಸ್ಥೆ ಮಾಡುತ್ತಿತ್ತು. ಈ ಸಂಸ್ಥೆಯ ಸಿಬ್ಬಂದಿಗಳೇ ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಆತ್ಮಹತ್ಯೆಗೆ ಶರಣಾಗುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಲಾಸ್ಟ್ ರೆಸಾರ್ಟ್ ಸಂಸ್ಥೆಯ ಸಹ ಸ್ಥಾಪಕರು, ಒಬ್ಬ ಡಚ್ ಪತ್ರಕರ್ತ, ಇಬ್ಬರು ಸಿಟ್ಜರ್ಲೆಂಡ್ ನಾಗರಿಕರು ಹಾಗೂ ಒಬ್ಬ ವಿಡಿಯೋಗ್ರಾಫರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೆರಿಕ ಮೂಲದ ಮಹಿಳೆ ಈ ಸಾರ್ಕೊ ಕ್ಯಾಪ್ಸುಲ್ (Sarco Capsule) ಒಳಗಡೆ ಮಲಗಿಕೊಂಡು ಅದರ ಬಟನ್ ಒತ್ತುವ ಮೂಲಕ ಸಾವನ್ನಪ್ಪಿದ್ದಾರೆ. ಮಹಿಳೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದ್ದರಿಂದ ಅವರಾಗಿಯೇ ಸ್ವಯಂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಂಧಿತರು ಹೇಳಿಕೆ ನೀಡಿದ್ದಾರೆ.
ಏನಿದು ಸೂಸೈಡ್ ಪಾಡ್?
ಸ್ವಯಂ ಆತ್ಮಹತ್ಯಾ ಯಂತ್ರ (Suicide Pod) ಮಾನವರನ್ನು ಯಾವುದೇ ನೋವಿಲ್ಲದೆ ಸಾಯುಸುವ ಒಂದು ಯಂತ್ರವಾಗಿದೆ. ಸ್ವಿಟ್ಜರ್ಲೆಂಡ್ನಲ್ಲಿ ಈ ಯಂತ್ರಕ್ಕೆ ಕಾನೂನಿನ ಮಾನ್ಯತೆ ಇದೆ. ಆದರೆ, ಅದನ್ನು ಬಳಸುವಾಗ ಅಧಿಕೃತ ವೈದ್ಯರು ಸ್ಥಳದಲ್ಲಿ ಉಪಸ್ಥಿತರಾಗಿರಬೇಕು ಎನ್ನುವುದು ಸೇರಿದಂತೆ ಹಲವು ನಿಬಂಧನೆಗಳಿವೆ.
ಸಾರ್ಕೊ ಹೆಸರಿನ (Sarco Capsule) ಈ 3ಡಿ ಮುದ್ರಿತ ಚೇಂಬರ್ ಸೂಸೈಡ್ ಪಾಡ್ ಬಳಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವು ಇದೇ ಮೊದಲು ಎನ್ನಲಾಗಿದೆ. ಈ ಯಂತ್ರದ ಒಳಗಡೆ ಒಬ್ಬರು ಮಲಗಿಕೊಂಡು ಬಟನ್ ಒತ್ತಿದರೆ ಸಾಕು, ಈ ಪಾಡ್ ಒಳಗಡೆ ನೈಟ್ರೋಜನ್ ಅನಿಲ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. 10 ನಿಮಿಷಗಳ ಒಳಗಾಗಿಯೇ ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ.
ಮರಣಹೊಂದುವ ವೇಳೆ ಯಾವುದೇ ನೋವು ನೀಡದೇ ಇರುವುದರಿಂದ ಈ ಯಂತ್ರದ ಬಗ್ಗೆ ಜಗತ್ತಿನಾದ್ಯಂತ ವಿವಿಧ ಚರ್ಚೆಗಳು ನಡೆಯುತ್ತಲೇ ಇವೆ. ಅಮೆರಿಕದಲ್ಲಿ ಆಯ್ಮಹತ್ಯಾ ಯಂತ್ರದ ಬಳಕೆ ನಿಷೇಧವಿದೆ. ಸ್ವಿಸ್ ಜೊತೆ ನೆದರ್ಲೆಂಡ್ಸ್ನಲ್ಲಿಯೂ ಈ ಯಂತ್ರದ ಬಳಕೆಗೆ ಅನುಮತಿಯಿದೆ. ಈ ಪ್ರಕರಣವನ್ನು ಸ್ವಿಜ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
1990 ರಲ್ಲಿ ಸ್ವಿಜ್ ನ ವೈದ್ಯ ಫಿಲಿಪ್ ನಿಟ್ಸ್ಕೆ (Philip Nitschke) ಅವರು ಈ ಆತ್ಮಹತ್ಯಾ ಯಂತ್ರವನ್ನು ಸಂಶೋಧನೆ ಮಾಡಿದ್ದರು. ಶಾಂತಿಯುತವಾಗಿ ಕೊನೆಯುಳಿರೆಳೆಯಲು ಈ ಸಾಧನವನ್ನು ಕಂಡುಹಿಡಿಯಲಾಗಿದೆ ಎನ್ನುವುದರ ಬಗ್ಗೆಯೂ ಅವರು ಹೇಳಿದ್ದರು.