ಇನ್ನೇನು ದೀಪಾವಳಿಯ ಸಂಭ್ರಮಕ್ಕೆ ನಾಲ್ಕೈದು ದಿನಗಳಷ್ಟೇ ಬಾಕಿ. ಕೇವಲ ದೀಪಗಳ ಹಬ್ಬ ಹಾಗೂ ಪಟಾಕಿ ಹಚ್ಚುವ ಹಬ್ಬವಾಗಿ ದೀಪಾವಳಿಯನ್ನು ಆಚರಿಸುವುದರೊಂದಿಗೆ, ಮನೆಗೆ ಹಬ್ಬದ ಸವಿನೆನಪಿಗಾಗಿ ಹೊಸ ವಸ್ತುಗಳನ್ನು ಕೊಂಡು ತರುವ ರೂಢಿಯಿದೆ. ಪೀಠೋಪಕರಣ, ಇಲೆಕ್ಟ್ರಾನಿಕ್ಸ್, ಬೈಕ್, ಕಾರ್ ಹೀಗೆ ವಿವಿಧ ವಸ್ತುಗಳನ್ನು ಖರೀದಿಸಿ ದೀಪಾವಳಿಗೆ ಸ್ವಾಗತಿಸುವ ಕುಟುಂಬಗಳಿಗೆ, ಕಾರು ಖರೀದಿಸುವ ಪ್ಲಾನ್ ಇದ್ದರೆ, ಇದೀಗ ಸಖತ್ ಆಫರ್ (Diwali Car Offers) ಗಳ ಸುರಿಮಳೆಯೇ ಸುರಿಯುತ್ತಿದೆ!
ಹೌದು. ಈ ಬಾರಿಯ ದೀಪಾವಳಿಯ ಸಂಭ್ರಮಾಚರಣೆಗೆ ಮನೆಗೆ ಹೊಸ ಕಾರು ಖರೀದಿಸಲು ಇಚ್ಛಿಸುವವರಿಗೆ ಸಖತ್ ಆಫರ್ ಘೋಷಿಸಲಾಗಿದೆ. ವಿವಿಧ ಕಾರು ಕಂಪನಿಗಳು ತಮ್ಮ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಹಾಗೂ ಇತರೆ ಆಫರ್ಗಳನ್ನು ಘೋಷಿಸಿದ್ದು, ಕಾರ್ ಖರೀದಿಸುವ ಗ್ರಾಹಕರಿಗೆ ಹಿಂದೆಂದಿಗಿಂತಲೂ ಅತ್ಯುತ್ತಮ ಆಫರ್ ದರದಲ್ಲಿ ಕಾರ್ ಖರೀದಿಸುವ ಅವಕಾಶವಿದೆ. ಹಾಗಿದ್ದರೆ, ಯಾವೆಲ್ಲಾ ಕಾರ್ಗಳ ಮೇಲೆ ಎಷ್ಟೆಷ್ಟು ಆಫರ್ ನೀಡಲಾಗಿದೆ ಎನ್ನುವುದನ್ನು ನೋಡೋಣ ಬನ್ನಿ.
Diwali Car Offers: ಯಾವೆಲ್ಲಾ ಕಾರುಗಳ ಮೇಲೆ ದೀಪಾವಳಿ ಆಫರ್?!
- ಹ್ಯೂಂಡಾಯ್ ವರ್ನಾ (Hyundai Verna)
ಹ್ಯೂಂಡಾಯ್ ಕಂಪನಿಯ ಅತ್ಯುತ್ತಮ ಕಾರ್ಗಳಲ್ಲಿ ಒಂದಾದ ಹ್ಯೂಂಡಾಯ್ ವರ್ನಾ ಮೇಲೆ ದೀಪಾವಳಿ ಆಫರ್ನ್ನು ಕಂಪನಿ ಘೋಷಿಸಿದೆ. ಈಗಾಗಲೇ ಸಾಕಷ್ಟು ಜನಪ್ರಿಯವಾಗಿರುವ ಹ್ಯೂಂಡಾಯ್ ವರ್ನಾ, ₹11.00 ರಿಂದ ₹17.42 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ದೊರಕಲಿದೆ. ವಿವಿಧ ಆಕರ್ಷಕ ಬಣ್ಣಗಳು ಹಾಗೂ ವೇರಿಯಂಟ್ಗಳ ಮೂಲಕ ಹ್ಯೂಂಡಾಯ್ ವರ್ನಾ ಕಾರು ದೊರಕಲಿದ್ದು, ಮ್ಯಾನುಯೆಲ್ ಹಾಗೂ ಅಟೋಮಾಟ್ಯಿಕ್ ಗೇರ್ ಶಿಫ್ಟಿಂಗ್ ಕೂಡ ಹೊಂದಿದೆ. ಈ ಹ್ಯೂಂಡಾಯ್ ವರ್ನಾ ಮೇಲೆ ₹45,000 ಕ್ಕೂ ಅಧಿಕ ಡಿಸ್ಕೌಂಟ್ ನೀಡಲಾಗುತ್ತಿದೆ.
- ಮಹಿಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N)
ಕಾರ್ ಸೆಗ್ಮೆಂಟ್ನಲ್ಲಿ ಅತ್ಯುತ್ತಮ ಸೇವಾ ದಾಖಲೆ ಹೊಂದಿರುವ ಮಹಿಂದ್ರಾ (Mahindra), ತನ್ನ ಅತ್ಯುತ್ತಮ ಕಾರ್ ಆದ ಮಹಿಂದ್ರಾ ಸ್ಕಾರ್ಪಿಯೋ ಮೇಲೆ ದೀಪಾವಳಿ ಆಫರ್ ಪ್ರಯುಕ್ತ (Diwali Car Offers) ₹5000 ರೂ. ಗಳಷ್ಟು ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ₹13.85 ಲಕ್ಷದಿಂದ ಆರಂಭಗೊಂಡು, ಟಾಪ್ ಮಾಡೆಲ್ಗೆ ₹24.54 ಲಕ್ಷದವರೆಗೂ ಇರಲಿದೆ.
- ಮಾರುತಿ ಸುಜುಕಿ ಬ್ರೆಜಾ (Maruthi Suzuki Brezza)
ಲಾಂಚ್ ಆದಾಗಿನಿಂದ ಬಹುತೇಕ ಎಸ್ಯುವಿ ಪ್ರಿಯರಿಗೆ ಫೇವರಿಟ್ ಆಗಿರುವ ಮಾರುತಿ ಸುಜುಕಿ ಬ್ರೆಜಾ, 1462 ಸಿಸಿಯೊಂಗಿದೆ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ. ಈ ಕಾರಿನ ಮೇಲೆ ಬರೋಬ್ಬರಿ ₹42,000 ಕ್ಕೂ ಮಿಕ್ಕಿ ಡಿಸ್ಕೌಂಟ್ ಹಾಗೂ ಆಫರ್ಗಳನ್ನು ಟಾಟಾ ನೀಡಿದ್ದು, ವಿಭಿನ್ನ ಫೀಚರ್ಸ್ಗಳೊಂದಿಗೆ ನಿಮ್ಮ ಮನೆಗೆ ಬರಲಿದೆ.
- ಟಾಟಾ ಹ್ಯಾರಿಯರ್ (Tata Harrier)
ಟಾಟಾ ಕಂಪನಿಯ ಪವರ್ಫುಲ್ ಇಂಜಿನ್ ಹೊಂದಿರುವ ಟಾಟಾ ಹ್ಯಾರಿಯರ್ ಕಾರು, 6 ಗೇರ್ಗಳೊಂದಿಗೆ 170 ಹೆಚ್ಪಿ ಪವರ್ ಹೊಂದಿದ್ದು, ಮ್ಯಾನುವಲ್ ಹಾಗೂ ಆಟೋ ಶಿಫ್ಟಿಂಗ್ ಸೌಲಭ್ಯ ಹೊಂದಿದೆ. ಈ ಕಾರಿನ ಮೇಏಲೆ ಗ್ರಾಹಕರಿಗೆ ಬರೋಬ್ಬರಿ ₹1,60,000 ಕ್ಕೂ ಅಧಿಕ ಮೊತ್ತದ ಆಫರ್ ಹಾಗೂ ಡಿಸ್ಕೌಂಟ್ಗಳನ್ನು ಕಂಪನಿ ನೀಡುತ್ತಿದೆ.
ಒಟ್ಟಾರೆ ಈ ಬಾರಿ ದೀಪಾವಳಿಯನ್ನು ಮನೆಯಲ್ಲಿ ಹೊಸ ಕಾರಿನೊಂದಿಗೆ ಆಚರಿಸಲು ಇದೇ ಸುವರ್ಣಾವಕಾಶ. ಖರೀದಿಸಲು ಇಚ್ಛಿಸುವವರು ಸಮೀಪದ ಕಾರ್ ಶೋರೂಂ ಅಥವಾ ಕಂಪನಿಗಳ ವೆಬ್ಸೈಟ್ನ್ನು ಸಂಪರ್ಕಿಸಬಹುದು. ಇದರೊಂದಿಗೆ ದೀಪಗಳ ಹಬ್ಬ ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸುವುದರೊಂದಿಗೆ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಿ.