ಪ್ರತಿ ತಿಂಗಳು ಕಳೆದು ಮತ್ತೊಂದು ತಿಂಗಳಿನ ಮಗ್ಗಲು ಬದಲಿಸುವಾಗ, ವರ್ಷಗಳು ಉರುಳಿ ಮತ್ತೊಂದು ಹೊಸ ನಮಗೆ ಎದುರಾಗುವ ಸಮಯದಲ್ಲಿ ಹಲವು ಕಂಪನಿಗಳು ಹಾಗೂ ಸರ್ಕಾರದ ವಿವಿಧ ನೀತಿ-ನಿಯಮಗಳು ಬದಲಾಗುವ, ಪ್ರಮುಖ ದಿನಾಂಕಗಳ ಗಡುವು ಸೇರಿದಂತೆ ಇನ್ನಿತರೆ ಪ್ರಮುಖ ಸಂಗತಿಗಳು ಎಲ್ಲರೂ ಜೀವನದಲ್ಲೂ ಸಂಘಟಿಸುತ್ತವೆ. 2024ನೇ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಾವಿದ್ದೇವೆ. ಇದೀಗ, ಅಕ್ಟೋಬರ್ ತಿಂಗಳಿನ ಮಗ್ಗಲು ಬದಲಿಸಿ ನವೆಂಬರ್ (November) ನತ್ತ ಹೊರಳುವ ಸಮಯವಿದು.
ನವೆಂಬರ್ ತಿಂಗಳಿನಲ್ಲಿ ಯಾವೆಲ್ಲ ಹೊಸ ನಿಯಮಗಳು ಜಾರಿಗೆ ಬರಲಿವೆ. ಪ್ರಮುಖ ದಿನಾಂಕಗಳು ಯಾವುವು? ಜನರ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಸಂಗತಿಗಳನ್ನು ತಿಳಿಸುವ ಪ್ರಯತ್ನ ಈ ಅಂಕಣದ್ದು. ನವೆಂಬರ್ ತಿಂಗಳಲ್ಲಿ ಘಟಿಸುವ ಸಂಗತಿಗಳು, ಪ್ರಮುಖ ನೀತಿ-ನಿಯಮಗಳು ಹಾಗೂ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನವೆಂಬರ್ ತಿಂಗಳ ಪ್ರಮುಖ ಬದಲಾವಣೆ, ನೀತಿ-ನಿಯಮಗಳು :
ಹಲವು ವಸ್ತುಗಳ ಮೇಲೆ ಜಿಎಸ್ಟಿ ಕಡಿತ :
ಜನರ ಬಳಕೆಯ ವಸ್ತುಗಳನ್ನು ಏಕೀಕೃತ ತೆರಿಗೆ ಪದ್ಧತಿಯಡಿ ತರಲು ಕೇಂದ್ರ ಸರ್ಕಾರ ಈ ಜಿಎಸ್ಟಿ ಪದ್ಧತಿಯನ್ನು ಜಾರಿಗೆ ತಂದಿದೆ. ಪ್ರತಿ ವರ್ಷವೂ ಹಲವು ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳ ಹಾಗೂ ಇಳಿಕೆ ಮಾಡಲಾಗುತ್ತದೆ. ಅದರ ಭಾಗವಾಗಿಯೇ, ಕೇಂದ್ರ ಸರ್ಕಾರ ಈ ತಿಂಗಳು ಜನತೆಗೆ ಸಿಹಿಸುದ್ದಿ ನೀಡಿದ್ದು. ನವೆಂಬರ್ (November) ತಿಂಗಳಲ್ಲಿ 100 ಕ್ಕೂ ಹೆಚಿನ ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆಯಾಗಲಿದೆ. ಇದು ವೈದ್ಯಕೀಯ ಮೆಡಿಸಿನ್, ಜೀವ ವಿಮೆ ಸೇರಿದಂತೆ ಹಲವು ಅತ್ಯವಶ್ಯಕ ವಸ್ತುಗಳನ್ನು ಒಳಗೊಂಡಿರಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಇಳಿಕೆ :
ಪೆಟ್ರೋಲ್ ಮತ್ತು ಡೀಸೇಲ್ಗಳ ಬೆಲೆ ಇಳಿಕೆ ಮತ್ತು ಏರಿಕೆ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಟ್ರೋಲ್ ಹಾಗೂ ಡೀಸೆಲ್ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಭಾರತದಲ್ಲೂ ನಾವು ಬೆಲೆ ಇಳಿಕೆಯನ್ನು ನಿರೀಕ್ಷಿಸಬಹುದು. ನವೆಂಬರ್ ತಿಂಗಳ ಆರಂಭದಿಂದಲೇ ಬೆಲೆ ಇಳಿಕೆ ಆಗುವ ಸಾಧ್ಯತೆಯಿದೆ. ನವೆಂಬರ್ 1 ರಿಂದ ಗೃಹಬಳಕೆ ಹಾಗೂ ವಅಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಮೇಲೆ ಅಲ್ಪಮಟ್ಟಿನ ವ್ಯತ್ಯಾಸವಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂ.ಗಳಷ್ಟು ಏರಿಕೆಯಾಗಲಿದೆ. ಗೃಹ ಬಳಕೆದಾರರಿಗೆ ಅದೇ ಬೆಲೆ ಮುಂದುವರೆಯಲಿದೆ.
ಸಾಲ ಮತ್ತು ಇಎಂಐ ದರಗಳಲ್ಲಿ ಬದಲಾವಣೆ :
ನವೆಂಬರ್ (November) ತಿಂಗಳು ನಿಮ್ಮ ಸಾಲ ಮತ್ತು ಇಎಂಐ ಕಂತುಗಳಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಆರ್ಬಿಐ ರೆಫೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿರುವುದುರಿಂದ ನಿಮ್ಮ ಸಾಲದ ಮೇಲೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಒಂದು ರೀತಿಯಲ್ಲಿ ಇದೂ ಉತ್ತಮ ಸುದ್ದಿಯೇ. ರೆಫೊ ದರ ಏರಿಕೆಯಾದಲ್ಲಿ ನಿಮ್ಮ ದೀರ್ಘಾವಧಿಯವರೆಗಿನ ಸಾಲದ ಕಂತುಗಳು ಹೆಚ್ಚಳವಾಗಬಹುದಾದ ಸಾಧ್ಯತೆಯಿರುತ್ತದೆ.
ವಿಮಾನದ ಟಿಕೆಟ್ ದರಗಳಲ್ಲಿ ಇಳಿಕೆ :
ಜೆಟ್ ಇಂಧನ ಬೆಲೆಗಳಲ್ಲಿ ಇಳಿಕೆಯಾಗಿರುವುದರಿಂದ ನವೆಂಬರ್ 01 ರಿಂದ ವಿಮಾನ ಟಿಕೆಟ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ವಿಮಾನ ಪ್ರಯಾಣಿಕರಿಗೆ ಇದು ಶುಭ ಸುದ್ದಿ.
14 ಬ್ಯಾಂಕ್ ರಜೆಗಳು :
ಒಂದು ಮತ್ತು ಮೂರನೇ ಶನಿವಾರ ಹಾಗೂ ಭಾನುವಾರಗಳನ್ನು ಒಳಗೊಂಡಂತೆ ನವೆಂಬರ್ ತಿಂಗಳಲ್ಲಿ ಒಟ್ಟು 14 ರಜೆಗಳು ಇರಲಿವೆ. ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಜೆಗಳು ಬ್ಯಾಂಕಿಂಗ್ ವಲಯದಲ್ಲಿ ಸೇವೆ ಸಲ್ಲಿಸುವವರಿಗೆ ದೊರಕಲಿವೆ. ಗ್ರಾಹಕರು ಬ್ಯಾಂಕ್ ರಜೆಗಳ ಆಧಾರದ ಮೇಲೆ ನಿಮ್ಮ ಬ್ಯಾಂಕ್ ಗೆ ಸಂಬಂಧಿಸಿದ ಕೆಲಸಗಳನ್ನು ಪ್ಲ್ಯಾನ್ ಮಾಡಿಕೊಳ್ಳಿ.