ಏಕನಾಥ ಶಿಂಧೆ ನೇತೃತ್ವದ ಸರ್ಕಾರವು ಗೋವನ್ನು ಮಹಾರಾಷ್ಟ್ರದ ರಾಜ್ಯಮಾತೆ (State mother cow) ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಗೋವಿನ ಸಾಂಸ್ಕೃತಿಕ ಮಹತ್ವ ಹಾಗೂ ಪ್ರಾಚೀನ ಕಾಲದಿಂದಲೂ ಹಸುಗಳ ಪಾತ್ರವನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಈ ಆದೇಶ ಹೊರಡಿಸಿದೆ.
ಇಂದು ಸೋಮವಾರ ಮಹಾರಾಷ್ಟ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಗೋವುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಪ್ರಾಣಿ ಸಾಕಾಣಿಕೆಯಲ್ಲಿ ಗೋವುಗಳೇ ಪ್ರಥಮ ಸ್ಥಾನವನ್ನು ಹಾಗೂ ಪೂಜ್ಯನೀಯ ಸ್ಥಾನವನ್ನು ಅಲಂಕರಿಸಿವೆ. ಹಿಂದೂ ಸಂಸ್ಕೃತಿಯಲ್ಲಿ ಗೋವನಲ್ಲಿ ಮುಕ್ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂದು ನಂಬಲಾಗಿದೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗೋವನ್ನು ರಾಜ್ಯಮಾತೆ (State mother cow) ಎಂದು ಪರಿಗಣಿಸುವ ಆದೇಶವನ್ನು ಹೊರಡಿಸಿದೆ. ಆ ಮೂಲಕ ಇಡೀ ದೇಶದಲ್ಲಿಯೇ ಗೋವನ್ನು ರಾಜ್ಯ ಮಾತೆ ಎಂದು ಪರಿಗಣಿಸಿದ ಮೊದಲ ರಾಜ್ಯವೆಂಬ ಕೀರ್ತಿಗೆ ಮಹಾರಾಷ್ಟ್ರ ಭಾಜನವಾಗಿದೆ.
ಈ ಬಗ್ಗೆ ಅಧಿಕೃತ ಆದೇಶದಲ್ಲಿ ವಿವರಣೆ ನೀಡಿರುವ ಮಹಾರಾಷ್ಟ್ರ ಸರ್ಕಾರವು, ಭಾರತದ ಆಧ್ಯಾತ್ಮಿಕ, ವೈಜ್ಞಾನಿಕ ಹಾಗೂ ಮಿಲಿಟರಿ ಇತಿಹಾಸದಲ್ಲಿ ಗೋವಿನ ಪಾತ್ರ ಅಮೂಲ್ಯವಾದುದು. ಹಸುವಿನ ಹಾಲು ಹೆಚ್ಚು ಪೌಷ್ಠಿಕಾಂಶಯುಕ್ತವಾಗಿವೆ. ಗೋಮೂತ್ರವೂ ಸಹಿತ ಹಲವು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಬಗ್ಗೆ ನಂಬಲಾಗಿದೆ. ಹಸುವಿನ ಎಲ್ಲಾ ಉತ್ಪನ್ನಗಳು ಔಷಧೀಯ ಗುಣ ಹೊಂದಿರುವ ಬಗ್ಗೆ ತಿಳಿಸಲಾಗಿದೆ.
ಇದರ ಜೊತೆಗೆ ದೇಶೀಯ ಹಸು ತಳಿಗಳ ಸಂಖ್ಯೆ ತೀವ್ರ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಾನುವಾರುಗಳ ಸಾಮಾಜಿಕ-ರ್ಥಜಾನುವಾರುಗಳ ಸಾಮಾಜಿಕ-ಆರ್ಥಿಕ ಮೌಲ್ಯ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಗೌರವವನ್ನು ಪರಿಗಣಿಸಿ ದೇಶೀ ತಳಿಯ ಗೋವನ್ನು ರಾಜ್ಯಮಾತೆ (State mother cow) ಎಂದು ಆದೇಶ ಹೊರಡಿಸಿರುವ ಬಗ್ಗೆ ತಿಳಿಸಿದೆ.
ಗೋ ಹತ್ಯೆ ನಿಷೇಧ ಕಾಯ್ದೆ :
ಗೋಹತ್ಯೆ ಕಾಯ್ದೆ ಜಾರಿಮಾಡುವ ಬಗ್ಗೆ ದೇಶದಲ್ಲಿ ಹಲವು ಹೋರಾಟಗಳು ನಡೆಯುತ್ತಿವೆ. 2017 ರಲ್ಲಿಯೇ ಕೇಂದ್ರ ಸರ್ಕಾರವು ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ನಿಷೇಧ ಹೇರಿದೆ. ಬಿಜೆಪಿ ಆಡಳಿತದಲ್ಲಿರುವ ಬಹುತೇಕ ರಾಜ್ಯಗಳಲ್ಲಿಯೂ ಗೋ ಹತ್ಯೆ ನಿಷೇಧ ಮಾಡಲಾಗಿದೆ.
ಭಾರತದ ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಛತ್ತೀಸ್ ಗಢ, ದೆಹಲಿ, ಗುಜರಾತ್, ಹರಿಯಾಣ. ಹಿಮಾಚಲ ಪ್ರದೇಶ, ಜಾರ್ಖಾಂಡ್, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ಜಾರಿಗೆ ತರಲಾಗಿದೆ.
ನವೆಂಬರ್ 16 ರ ಒಳಗಾಗಿ ನೂತನ ಸರ್ಕಾರವನ್ನು ರಚನೆ ಮಾಡಬೇಕಿರುವ ನಿಟ್ಟಿನಲ್ಲಿ, ಇದೇ ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತದೆ.