ಇತ್ತೀಚೆಗಷ್ಟೇ ಬಿಜೆಪಿ ಮಾಜಿ ರಾಜ್ಯಸಭಾ ಸಂಸದ ಹಾಗೂ ಸಚಿವರಾದ ಸುಬ್ರಮಣಿಯನ್ ಸ್ವಾಮಿ ಅವರು, ರಾಹುಲ್ ಗಾಂಧಿ (Rahul Gandhi)ಯವರು ಭಾರತದ ಪೌರತ್ವದ ಜೊತೆಗೆ ರಹಸ್ಯವಾಗಿ ಬ್ರಿಟನ್ನ ಸದಸ್ಯತ್ವವನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿ, ದೆಹಲಿ ಹೈಕೋರ್ಟ್ನಲ್ಲಿಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿರುವ ಬೆನ್ನಲ್ಲೇ, ಅವರ ಪೌರತ್ವವನ್ನು ಪ್ರಶ್ನಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗೆ ಪ್ರತಿಪಾದಿಸಿದ್ದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದಿಂದ ವಿವರ ಕೇಳಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಹೊಸ ಕಂಟಕ ಆರಂಭವಾಗಿದೆ.
ಹೌದು. ರಾಹುಲ್ ಅವರ ಬ್ರಿಟಿಷ್ ಪೌರತ್ವದ ಬಗ್ಗೆ ವಿಘ್ನೇಶ್ ಶಿಶಿರ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ತನಗೆ ಸಿಬಿಐ ತನಿಖೆಗೆ ಅವಕಾಶ ನೀಡುವಂತೆ ಕೋರಿದ್ದ ಶಿಶಿರ್ ಅವರಿಗೆ, ಕೇಂದ್ರ ಸಚಿವಾಲಯವು ಈ ಮನವಿಯನ್ನು ಸ್ವೀಕರಿಸಿದೆಯೇ, ಸ್ವೀಕರಿಸಿದ್ದರೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎನ್ನುವುದರ ಬಗ್ಗೆ ಮಾತ್ರ ಇಂದು ಗಮನಹರಿಸುವುದಾಗಿ ಕೋರ್ಟ್ ತಿಳಿಸಿದೆ.
Rahul Gandhi: ಪ್ರಕರಣ ಏನು?
ಕೇಂದ್ರ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ಭಾರತೀಯ ಪೌರತ್ವದೊಂದಿಗೆ, ಬ್ರಿಟನ್ನ ಪೌರತ್ವವನ್ನು ಕೂಡ ಹೊಂದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಈ ಬಗ್ಗೆ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರಾದ ವಿಘ್ನೇಶ್ ಶಿಶಿರ್ ಎನ್ನುವವರು ಕೋರ್ಟ್ನಲ್ಲಿಸೂಕ್ತ ತನಿಖೆಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.
ಶಿಶಿರ್ ಅವರ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ನ ನ್ಯಾ.ರಾಜನ್ ರಾಯ್ ಹಾಗೂ ಓಂ ಪ್ರಕಾಶ್ ಶುಕ್ಲಾ ಅವರ ದ್ವಿಸದಸ್ಯ ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯ ಭಾನ್ ಪಾಂಡೆ ಅವರಿಗೆ ರಾಹುಲ್ ಗಾಂಧಿ (Rahul Gandhi) ಯ ಪೌರತ್ವದ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ವಿವರ ಪಡೆಯುವಂತೆ ತಿಳಿಸಿತು.
ಇದನ್ನೂ ಓದಿ: ವಿವಾದ: ಒಲಿಂಪಿಕ್ ಪದಕಕ್ಕಾಗಿ 1 ಕೋಟಿ ಬೆಲೆಯ ಪಿಸ್ತೂಲ್ ಬಳಸಿದ್ರಾ ಮನು ಭಾಕರ್?
ತನಿಖೆ ನಡೆಸಿದ್ದೇನೆ ಎಂದ ಶಿಶಿರ್, ಸುಬ್ರಮಣಿಯನ್ ಸ್ವಾಮಿ ಅರ್ಜಿ ಏನಾಯ್ತು?
ಆದರೆ, ಈ ಪ್ರಕರಣದ ಬಗ್ಗೆ ತಾನು ಕೂಲಂಕಷವಾಗಿ ತನಿಖೆ ನಡೆಸಿರುವುದಾಗಿ ಶಿಶಿರ್ ಅವರು ಕೋರ್ಟ್ ಗೆ ತಿಳಿಸಿದ್ದು, ಗೌಪ್ಯ ಮಾಹಿತಿಯ ಪ್ರಕಾರ ರಾಹುಲ್ ಗಾಂಧಿಯವರಿಗೆ ಬ್ರಿಟನ್ ಪೌರತ್ವ ಕೂಡ ಇರುವುದು ಖಚಿತವಿದೆ ಎಂದಿದ್ದಾರೆ.
ಈಗಾಗಲೇ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ವಕ್ತಾರ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್ ಗೆ ಇದೇ ವಿಚಾರವಾಗಿ, ರಾಹುಲ್ ಗಾಂಧಿ (Rahul Gandhi) ಯ ಬ್ರಿಟಿಷ್ ಪೌರತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಆ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದ್ದು, ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿರುವುದು ಸಾಬೀತಾದರೆ ಬಹುದೊಡ್ಡ ಕಂಟಕ ಕಾಂಗ್ರೆಸ್ ನಾಯಕನಿಗೆ ಎದುರಾಗಲಿದೆ.