ಬಡವರಿಗೆ ನೀಡಲಾದಪಡಿತರ ಚೀಟಿಯು ಸರ್ಕಾರ ನೀಡುವ ಹಲವು ಯೋಜನೆಗಳಿಗೆ ಮಾನದಂಡವಾಗಿ ಬದಲಾಗಿದೆ. ಈ ಕಾರ್ಡ್ ಇದ್ದರೆ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದೀಗ, ಪಡಿತರ ಚೀಟಿದಾರರಿಗೆ (Ration Card) ಮತ್ತೊಂದು ಸೌಲಭ್ಯ ನೀಡಲಾಗಿದೆ.
ಮನೆಯಿಲ್ಲದವರು, ಬಡವರು ನೂತನ ಮನೆಯ ಕನಸನ್ನು ಪೂರ್ಣಗೊಳಿಸಿಕೊಳ್ಳಲು ಇದು ಸುವರ್ಣಾವಕಾಶ. ಮುಖ್ಯವಾಗಿ ಪಡಿತರ ಚೀಟಿ ಹೊಂದಿರುವವರಿಗೆ (Ration Card) ಈ ಸೌಲಭ್ಯ ಲಭ್ಯವಾಗಲಿದೆ. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ನೂತನ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಪಾಲಿಕೆಯ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲಗೊಂಡಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ನೂತನ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ವಾಜಪೇಯಿ ವಸತಿ ಯೋಜನೆಯಡಿ ಆಯ್ಕೆಯಾದವರಿಗೆ ಒಟ್ಟು 2.70 ಲಕ್ಷ ರೂ.ಗಳು ಹಾಗೂ ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದವರಿಗೆ 3.50 ಲಕ್ಷ ರೂ.ಗಳು ದೊರಕಲಿದೆ. ವಾಜಪೇಯಿ ವಸತಿ ಯೋಜನೆಯಡಿ 177 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿವೆ ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ನೂತನ ಮನೆ ನಿರ್ಮಿಸಿಕೊಳ್ಳುವ ಆಲೋಚನೆಯಲ್ಲಿರುವವರು ಈ ಕೆಳಗಿನ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು.
– ಪತಿ-ಪತ್ನಿಯರ ಆಧಾರ್ ಕಾರ್ಡ್
– ಪಡಿತರ ಚೀಟಿ
– ಮತದಾರರ ಗುರುತಿನ ಚೀಟಿ
– ಜಾತಿ ಮತ್ತು ಆದಾಯ ಪ್ರಮಾಣ ಪತ್ರ
– ಬ್ಯಾಕ್ ಪಾಸ್ ಬುಕ್
– ಚಾಲ್ತಿ ಇ-ಸ್ವತ್ತು ಖಾತೆ ಹಾಗೂ 2 ಭಾವಚಿತ್ರ
ಈ ಮೇಲಿನ ದಾಖಲೆಗಳೊಂದಿಗೆ ಆಸಕ್ತರು ದಾವಣಗೆರೆ ನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಹಂತ-ಹಂತವಾಗಿ ಹಣ ಬಿಡುಗಡೆಗೊಳಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕ ದಾವಣೆಗೆರೆ ಪಾಲಿಕೆ ಆಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯನ್ನು ಸಂಪರ್ಕಿಸಬಹುದಾಗಿದೆ.
ಪಡಿತರ ಚೀಟಿದಾರರಿಗೆ (Ration Card) ಸರ್ಕಾರ ಹಲವು ಸೌಲಭ್ಯ, ಸವಲತ್ತುಗಳನ್ನು ನೀಡಿದೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿಯೇ ಆಧಾರ. ಇವುಗಳ ಜೊತೆಗೆ ನೀವು ಬೆಳೆ ವಿಮೆ ಸಲ್ಲಿಸಲು, ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು, ಪಿಎಂ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು, ಆಯುಷ್ಮಾನ್ ಭಾರತ್ ಯೋಜನೆಯಡಿ ರೂ. 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್ ಉಪಯೋಗಕ್ಕೆ ಬರುತ್ತದೆ.