ಕಳೆದ ಕೆಲ ವರ್ಷಗಳಿಂದ ನಿಶ್ಚಿತ ಠೇವಣಿ (ಎಫ್ಡಿ) ಯೋಜನೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್ ಕಂಪೆನಿಗಳ ಜೊತೆ ಪೋಸ್ಟ್ ಆಫೀಸ್ ನಿಶ್ಚಿತ ಠೇವಣಿ ಯೋಜನೆಗಳ ಪೈಪೋಟಿ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಜನ ಪೋಸ್ಟ್ ಆಫೀಸ್ (Post Office Scheme) ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿರುವುದನ್ನು ನಾವು ಗಮನಿಸಬಹುದು.
ಹೆಚ್ಚಿನ ರಿಟರ್ನ್ಸ್ ಪಡೆಯುವ ಉದ್ದೇಶದಿಂದ ನಿಶ್ಚಿಂತ ಠೇವಣಿಗಳನ್ನು ಇಡಲಾಗುತ್ತದೆ. ಇಲ್ಲಿ ನಮಗೆ ಕನಿಷ್ಟ 1 ವರ್ಷದಿಂದ 5 ವರ್ಷಗಳವರೆಗೆ ಠೇವಣಿ ಇಡಬಹುದು. ಠೇವಣಿ ಇಡುವಾಗ ಈ ವರ್ಷಗಳ ಸಮಯವನ್ನು ನಾವು ಅಂದಾಜಿಸಿ ನಿಗದಿಪಡಿಸಬೇಕಾಗುತ್ತದೆ.
ಪೋಸ್ಟ್ ಆಫೀಸ್ ಆಫೀಸ್ (Post Office Scheme) ನಲ್ಲಿ ಒಂದು ಎಫ್ಡಿ ಯೋಜನೆ ಇದ್ದು ನೀವು ಅದರಲ್ಲಿ ನಿಮ್ಮ ಹಣ ಹೂಡಿಕೆ ಮಾಡಿದರೆ ಅತಿಹೆಚ್ಚಿನ ರಿಟರ್ನ್ಸ್ ನಿಮ್ಮದಾಗಲಿದೆ. ಈ ರಿಟರ್ನ್ಸ್ ಬ್ಯಾಂಕುಗಳಲ್ಲಿಯೂ ಸಿಗುವುದಿಲ್ಲ. ಈ ಯೋಜನೆ ಯಾವುದು? ಈ ಯೋಜನೆಯಲ್ಲಿ ಸಿಗುವ ಬಡ್ಡಿ ಪ್ರಮಾಣ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಏನಿದು ಅಂಚೆ ಕಚೇರಿ ಸಮಯ ನಿಗದಿನ ಠೇವಣಿ ಯೋಜನೆ? :
ಅಂಚೆ ಕಚೇರಿ ಸಮಯ ನಿಗದಿನ ಠೇವಣಿ ಯೋಜನೆ (Post Office Time Deposit Account) ಯನ್ನು ಶಾರ್ಟ್ ಆಗಿ ಟಿಡಿ ಖಾತೆ ಎಂದು ಕರೆಯಲಾಗುತ್ತದೆ. ಈ ಟಿಡಿ ಖಾತೆಯನ್ನು (Time Deposit Account) ಅಂಚೆ ಕಚೇರಿಯಲ್ಲಿ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿರುವ ಯಾವುದೇ ಭಾರತೀಯನು ಆರಂಭಿಸಬಹುದು. ಈ ಯೋಜನೆಯಡಿ ನೀವು ಒಂದು ವರ್ಷಕ್ಕೆ, 2 ವರ್ಷಕ್ಕೆ, 3 ವರ್ಷಕ್ಕೆ ಹಾಗೂ 5 ವರ್ಷಗಳವರೆಗೆ ನಿಶ್ಚಿತ ಠೇವಣಿ ಮಾಡುವ ಅವಕಾಶವಿದೆ. ವರ್ಷದಿಂದ ವರ್ಷಕ್ಕೆ ಬಡ್ಡಿ ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತವೆ.
ಅಂಚೆ ಕಚೇರಿ ಟಿಡಿ ಖಾತೆಯ ಬಡ್ಡಿದರ ಹೀಗಿದೆ :
– 1 ವರ್ಷಕ್ಕೆ – ಶೇ. 6.9
– 2 ವರ್ಷಕ್ಕೆ – ಶೇ. 7.0
– 3 ವರ್ಷಕ್ಕೆ – ಶೇ. 7.1
– 5 ವರ್ಷಕ್ಕೆ – ಶೇ. 7.5
ಕಾಲಾನುಕ್ರಮಾದಲ್ಲಿ ಈ ಬಡ್ಡಿಯ ದರ ಹಾಗೂ ನಿಶ್ಚಿತ ಠೇವಣಿಯ ಮೇಲೆ ರಿಟರ್ನ್ಸ್ ಅನ್ನು ಪಡೆಯುತ್ತೀರಿ.
ಟಿಡಿ ಖಾತೆಯನ್ನು (Time Deposit Account) ಆರಂಭಿಸಿ ಕನಿಷ್ಟ 1 ಸಾವಿರದಿಂದ ಗರಿಷ್ಠ ಎಷ್ಟರವರೆಗಾದರೂ ನೀವು ಹಣ ಹೂಡಿಕೆ ಮಾಡಬಹುದು. ಗರಿಷ್ಟ ಹಣದ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದಲ್ಲಿ ನೀವು ಹಣ ಹೂಡಿಕೆ ಮಾಡಿದ್ದರೆ, ನಿಮ್ಮ ನಿಶ್ಚಿತ ಠೇವಣಿಯ ಮೇಲೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ಲೆಕ್ಕ ಹಾಕಿ, ವರ್ಷದ ಆಧಾರದಲ್ಲಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. ಅಲ್ಲದೇ, ನೀವು ಒಂದೇ ಟಿಡಿ ಖಾತೆ (Time Deposit Account) ಹೊಂದಿರಬೇಕು ಎನ್ನುವ ಯಾವುದೇ ನಿಯಮವಿಲ್ಲ. ಆದ್ದರಿಂದ, ನಿಮಗೆ ಬೇಕಾದಷ್ಟು ಟಿಡಿ ಖಾತೆಗಳನ್ನು ತೆರೆಯಬಹುದು.
ರಿಟರ್ನ್ಸ್ ಲೆಕ್ಕಾಚಾರ :
ಅಂಚೆ ಕಚೇರಿಯ ಈ ಯೋಜನೆಯಡಿ ಆಫೀಸ್ (Post Office Scheme) 5 ವರ್ಷಕ್ಕೆ 5 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದೀರಿ ಎಂದು ಭಾವಿಸಿದರೆ, ಶೇ.7.5ರ ಬಡ್ಡಿದರದಲ್ಲಿ 5 ವರ್ಷದ ನಂತರ ನಿಮಗೆ 2,24,974 ರೂ.ಗಳಷ್ಟು ಬಡ್ಡಿಯ ಹಣವೇ ದೊರೆಯಲಿದೆ. ನಿಮಗೆ ಹೂಡಿಕೆ ಸೇರಿ 5 ವರ್ಷಕ್ಕೆ ಬರೋಬ್ಬರಿ 7,24,974 ಲಕ್ಷ ರೂ.ಗಳು ನಿಮ್ಮ ಕೈ ಸೇರಲಿದೆ. 5 ವರ್ಷದ ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿಯನ್ನೂ ನೀಡಲಾಗಿದೆ.
ನಿಶ್ಚಿತ ಠೇವಣಿಯಲ್ಲಿ ಇಟ್ಟ ಹಣವನ್ನು ನೀವು ಮೆಚ್ಯೂರಿಟಿಗೂ ಮುಂಚೆಯೇ ಪಡೆಯಬಹುದು. ಆದರೆ. ಈ ಮೊದಲೇ ನಿಗದಿ ಪಡಿಸಿದ ಬಡ್ಡಿದರವನ್ನು ಇದನ್ನು ಬ್ಯಾಂಕ್ ಲೆಕ್ಕ ಹಾಕುವುದಿಲ್ಲ. ಮೆಚ್ಯೂರಿಟಿಗೂ ಮುಂಚೆ ನೀವು ಹಣ ಹಿಂದಕ್ಕೆ ಪಡೆದದ್ದೇ ಆದಲ್ಲಿ, ಅಂಚೆ ಕಛೇರಿ ಸಾಮಾನ್ಯ ಖಾತೆಗಳಿಗೆ ನೀಡುತ್ತಿರುವ ಶೇ.4ರ ಬಡ್ಡಿದರದ ಆಧಾರದಲ್ಲಿಯೇ ನಿಮ್ಮ ಹಣವನ್ನು ಹಿಂದುರುಗಿಸುತ್ತದೆ.