2024ರ ಪ್ರೋ ಕಬಡ್ಡಿ ಲೀಗ್ʼನ ಹರಾಜು ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು, ಬಹುನಿರೀಕ್ಷಿತ ಪ್ರೋ ಕಬಡ್ಡಿ ಸೀಸನ್ 11 (Pro Kabaddi Season 11) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಯಾ ಪ್ರಾಂಚೈಸಿಗಳ 10 ಜನರ ಅಧಿಕೃತ ತಂಡಗಳ ಪಟ್ಟಿಯನ್ನೂ ಪ್ರಕಟಿಸಿವೆ. ಅಲ್ಲದೇ, ಲೀಗ್ ಪಂದ್ಯಾಟಗಳ ವೇಳಾಪಟ್ಟಿಯೂ ಪ್ರಕಟವಾಗಿದೆ.
ಕನ್ನಡಿಗರ ತಂಡ ಬೆಂಗಳೂರು ಬುಲ್ಸ್ (Bengaluru Bulls) ಈ ಬಾರಿ ಕಪ್ ಗೆಲ್ಲುವ ಫೇವರೇಟ್ ತಂಡವಾಗಿ ಹೊರಹೊಮ್ಮಿದೆ. ವಿರೋಧಿ ತಂಡಗಳಿಗೆ ಮಣ್ಣುಮುಕ್ಕಿಸಿ, ಪಾಯಿಂಟ್ಸ್ ತರಬಲ್ಲ ರೈಡರ್ʼಗಳು ಬೆಂಗಳೂರು ಬುಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು, ಪ್ರೋ ಕಬಡ್ಡಿ ಸೀಸನ್ 11 (Pro Kabaddi Season 11) 3 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಪಂದ್ಯಾಟಗಳು ಅಕ್ಟೋಬರ್ 18 ರಿಂದ ನವೆಂಬರ್ 09ರ ವರೆಗೆ ಹೈದ್ರಾಬಾದ್ʼನ ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ʼನಲ್ಲಿ ಹಾಗೂ ಎರಡನೇ ಹಂತದ ಪಂದ್ಯಾಟಗಳು ನವೆಂಬರ್ 10 ರಿಂದ ಡಿಸೆಂಬರ್ 01ರ ವರೆಗೆ ನೋಯ್ಡಾದ ನೋಯ್ಡಾ ಇಂಡೋರ್ ಸ್ಟೇಡಿಯಂನಲ್ಲಿ ಮತ್ತು 3ನೇ ಹಂತದ ಪಂದ್ಯಾಟಗಳು ಡಿಸೆಂಬರ್ 03 ರಿಂದ ಡಿಸೆಂಬರ್ 24ರ ವರೆಗೆ ಪುಣೆಯ ಬ್ಯಾಡ್ಮಿಂಟನ್ ಹಾಲ್ ಇನ್ ಬಾಲವಾಡಿ ಸ್ಟೇಡಿಯಂನಲ್ಲಿ ನಡೆಯಲಿವೆ.
Bengaluru Bulls Team Schedule:
ಬೆಂಗಳೂರು ಬುಲ್ಸ್ ತಂಡವು (Bengaluru Bulls) 2024ರ ಅಕ್ಟೋಬರ್ 18ರಂದು ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಮೊದಲ ಹಂತದ ವೇಳಾಪಟ್ಟಿ:
- ಅಕ್ಟೋಬರ್ 18 : ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್
- ಅಕ್ಟೋಬರ್ 20 : ಬೆಂಗಳೂರು ಬುಲ್ಸ್ vs ಗುಜರಾಥ್ ಜೇಂಟ್ಸ್
- ಅಕ್ಟೋಬರ್ 22 : ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್
- ಅಕ್ಟೋಬರ್ 25 : ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ಸ್
- ಅಕ್ಟೋಬರ್ 29 : ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ
- ನವೆಂಬರ್ 02 : ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್
- ನವೆಂಬರ್ 04 : ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್
- ನವೆಂಬರ್ 09 : ಬೆಂಗಳೂರು ಬುಲ್ಸ್ vs ಬೆಂಗಾಲಿ ವಾರಿಯರ್ಸ್
Pro Kabaddi Season 11 ಎರಡನೇ ಹಂತದ ವೇಳಾಪಟ್ಟಿ :
- ನವೆಂಬರ್ 12 : ಬೆಂಗಳೂರು ಬುಲ್ಸ್ vs ಜೈಪುರ್ ಫಿಂಕ್ ಫ್ಯಾಥಂರ್ಸ್
- ನವೆಂಬರ್ 16 : ಬೆಂಗಳೂರು ಬುಲ್ಸ್ vs ಡೆಲ್ಲಿ ದಬಾಂಗ್
- ನವೆಂಬರ್ 18 : ಬೆಂಗಳೂರು ಬುಲ್ಸ್ vs ಯು ಮುಂಬಾ
- ನವೆಂಬರ್ 19 : ಬೆಂಗಳೂರು ಬುಲ್ಸ್ vs ಫೈಥಾನ್ ಪೈರೇಟ್ಸ್
- ನವೆಂಬರ್ 21 : ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
- ನವೆಂಬರ್ 25 : ಬೆಂಗಳೂರು ಬುಲ್ಸ್ vs ಯು ಮುಂಭಾ
- ನವೆಂಬರ್ 30 : ಬೆಂಗಳೂರು ಬುಲ್ಸ್ vs ಫೈಥಾನ್ ಪೈರೇಟ್ಸ್
Pro Kabaddi Season 11 ಮೂರನೇ ಹಂತದ ವೇಳಾಪಟ್ಟಿ:
- ಡಿಸೆಂಬರ್ 03 : ಬೆಂಗಳೂರು ಬುಲ್ಸ್ vs ಗುಜರಾತ್ ಜೇಂಟ್ಸ್
- ಡಿಸೆಂಬರ್ 10 : ಬೆಂಗಳೂರು ಬುಲ್ಸ್ vs ಬೆಂಗಾಳಿ ವಾರಿಯರ್ಸ್
- ಡಿಸೆಂಬರ್ 11 : ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
- ಡಿಸೆಂಬರ್ 13 : ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್
- ಡಿಸೆಂಬರ್ 17 : ಬೆಂಗಳೂರು ಬುಲ್ಸ್ vs ಜೈಪುರ್ ಪಿಂಕ್ ಫ್ಯಾಂಥರ್ಸ್
- ಡಿಸೆಂಬರ್ 22 : ಬೆಂಗಳೂರು ಬುಲ್ಸ್ vs ತಮಿಳು ತಲೈವಾ
- ಡಿಸೆಂಬರ್ 24 : ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್
ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ತಮ್ಮ ತಂಡದ ಆಟಗಾರರಿಗೆ ಪ್ರಾಕ್ಟೀಸ್ ಆರಂಭಿಸಿವೆ. ಪ್ರೋ ಕಬಡ್ಡಿ ಸೀಸನ್ 11 (Pro Kabaddi Season 11) ಈ ಹಿಂದಿನ ಸೀಸನ್ʼಗಳಿಗಿಂತಲೂ ಹೆಚ್ಚಿನ ಮನೋರಂಜನೆ ಹಾಗೂ ಕ್ರೀಡಾ ವೈಭವವನ್ನು ಉಣಬಡಿಸುವುದರಲ್ಲಿ ಎರಡು ಮಾತಿಲ್ಲ.
ಕ್ರೀಡೆ, ಸಿನೆಮಾ, ಹಣಕಾಸು, ರಾಜಕೀಯ ಸೇರಿದಂತ ಮತ್ತಿತರ ಸುದ್ದಿಗಳ ಪ್ರತಿಕ್ಷಣದ ಅಪ್ ಡೇಟ್ಗಳಿಗಾಗಿ ಕರ್ನಾಟಕ ಡೈಲಿ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.